ಪುಣೆ(ಮೇ.14): ಪ್ರೊ ಕಬಡ್ಡಿಗೆ ಪರ್ಯಾಯವಾಗಿ ಆರಂಭವಾಗಿರುವ ಇಂಡೋ ಇಂಟರ್‌ನ್ಯಾಷನಲ್‌ ಪ್ರಿಮೀಯರ್‌ ಕಬಡ್ಡಿ ಲೀಗ್‌ನಲ್ಲಿ ಆತಿಥೇಯ ಪುಣೆ ಪ್ರೈಡ್‌ ತಂಡ ಶುಭಾರಂಭ ಮಾಡಿದೆ. ಇಲ್ಲಿನ ಬಾಲೆವಾಡಿ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಅದ್ಧೂರಿ ಉದ್ಘಾಟನೆ ಕಂಡ ಐಐಪಿಕೆಎಲ್‌ಗೆ ಪ್ರೇಕ್ಷಕರ ಕೊರತೆ ಎದ್ದು ಕಂಡಿತು. 

ಇದನ್ನೂ ಓದಿ: ದಾಂಪತ್ಯಕ್ಕೆ ಕಾಲಿಟ್ಟ ಕಬಡ್ಡಿ ತಾರೆ ಅಜಯ್‌

ಉದ್ಘಾಟನಾ ಪಂದ್ಯದಲ್ಲಿ ಪುಣೆ, ಹರಾರ‍ಯಣ ವಿರುದ್ಧ 43-34 ಅಂಕಗಳ ಅಂತರದಲ್ಲಿ ಜಯ ಸಾಧಿಸಿತು. ಶೇಕ್‌ ಅಬ್ದುಲ್ಲಾ ಅದ್ಭುತ ಆಟದ ನೆರವಿನಿಂದ ಪುಣೆ ತಂಡ ಜಯಭೇರಿ ಬಾರಿಸಿತು. ಅಬ್ದುಲ್ಲಾ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಪ್ರೊ ಕಬಡ್ಡಿಯಲ್ಲಿ 20 ನಿಮಿಷಗಳಂತೆ 2 ಅವಧಿಗೆ ಪಂದ್ಯ ನಡೆಸಿದರೆ ಇಲ್ಲಿ ತಲಾ 10 ನಿಮಿಷಗಳ 4 ಕ್ವಾರ್ಟರ್‌ಗಳಲ್ಲಿ ಪಂದ್ಯ ನಡೆದಿದ್ದು ಭಿನ್ನವಾಗಿತ್ತು.

ಇದನ್ನೂ ಓದಿ: ಬಂಡಾಯ ಕಬಡ್ಡಿ ಲೀಗ್‌: ಮೈಸೂರಿನಲ್ಲಿ 17 ಪಂದ್ಯ

ಪಂದ್ಯದ ಮೊದಲ ಕ್ವಾರ್ಟರ್‌ನಲ್ಲಿ ಮುನ್ನಡೆ ಸಾಧಿಸಿದ್ದ ಪುಣೆ ತಂಡಕ್ಕೆ ಹರಾರ‍ಯಣ 2ನೇ ಕ್ವಾರ್ಟರ್‌ನಲ್ಲಿ ತಿರುಗೇಟು ನೀಡಿತ್ತು. ಆದರೆ ನಂತರದ 2 ಕ್ವಾರ್ಟರ್‌ಗಳಲ್ಲಿ ಮುನ್ನಡೆ ಸಾಧಿಸಿದ ಪುಣೆ 9 ಅಂಕಗಳ ಅಂತರದಲ್ಲಿ ಜಯಿಸಿತು.