Asianet Suvarna News Asianet Suvarna News

ಬಂಡಾಯ ಕಬಡ್ಡಿ ಲೀಗ್‌: ಮೈಸೂರಿನಲ್ಲಿ 17 ಪಂದ್ಯ

ಇಂಡೋ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌ ಮೇ 13ರಿಂದ ಜೂ.4ರವರೆಗೆ ಐಐಪಿಕೆಎಲ್‌ ಪಂದ್ಯಾವಳಿಯು ಪುಣೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಇದರಲ್ಲಿ ಮೈಸೂರಿನಲ್ಲೇ 17 ಪಂದ್ಯಗಳು ನಡೆಯುತ್ತಿರುತ್ತವೆ.

Mysuru to host 17 matches International Premier Kabaddi League
Author
Mysuru, First Published Apr 13, 2019, 11:55 AM IST

ಮೈಸೂರು: ಇಂಡೋ ಇಂಟರ್‌ನ್ಯಾಷನಲ್‌ ಪ್ರೀಮಿಯರ್‌ ಕಬಡ್ಡಿ ಲೀಗ್‌(ಐಐಪಿಕೆಎಲ್‌)ನ ಚೊಚ್ಚಲ ಆವೃತ್ತಿಯ 17 ಪಂದ್ಯಗಳು ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮೇ 24ರಿಂದ 29ರವರೆಗೆ ನಡೆಯಲಿದೆ. 

ಮೇ 13ರಿಂದ ಜೂ.4ರವರೆಗೆ ಐಐಪಿಕೆಎಲ್‌ ಪಂದ್ಯಾವಳಿಯು ಪುಣೆ, ಮೈಸೂರು ಮತ್ತು ಬೆಂಗಳೂರಿನಲ್ಲಿ ನಡೆಯಲಿದೆ. ಮೇ 13ರಿಂದ 21ರವರೆಗೆ 20 ಪಂದ್ಯಗಳು ಪುಣೆಯ ಬಾಳೆವಾಡಿ ಕ್ರೀಡಾಂಗಣದಲ್ಲಿ, ಮೇ 24ರಿಂದ 29ರವರೆಗೆ ಮೈಸೂರಿನಲ್ಲಿ 17 ಪಂದ್ಯಗಳು ಹಾಗೂ ಜೂ.1ರಿಂದ 4ರವರೆಗೆ ಫೈನಲ್‌ ಸೇರಿದಂತೆ 7 ಪಂದ್ಯಗಳು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ನ್ಯೂ ಕಬಡ್ಡಿ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಎಂ.ವಿ. ಪ್ರಸಾದ್‌ ಬಾಬು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಪ್ರೊ ಕಬಡ್ಡಿಗೂ ಮುನ್ನ ಬಂಡಾಯ ಲೀಗ್ ಆರಂಭ

ಪಂದ್ಯಾವಳಿಯಲ್ಲಿ ಬೆಂಗಳೂರು ರೈನೋಸ್‌, ಚೆನ್ನೈ ಚಾಲೆಂಜರ್ಸ್‌, ದಿಲೇರ್‌ ಡೆಲ್ಲಿ, ತೆಲುಗು ಬುಲ್ಸ್‌, ಪುಣೆ ಪ್ರೈಡ್‌, ಹರ್ಯಾಣ ಹೀರೋಸ್‌, ಮುಂಬೈ ಚೆ ರಾಜೆ ಹಾಗೂ ರಾಜಸ್ಥಾನ ರಜಪೂತ್ಸ್ ತಂಡಗಳು ಭಾಗವಹಿಸಲಿದ್ದು, ಒಟ್ಟು 44 ಪಂದ್ಯಗಳು ನಡೆಯಲಿವೆ. 160ಕ್ಕೂ ಹೆಚ್ಚು ಆಟಗಾರರು ಟೂರ್ನಿಯಲ್ಲಿ ಆಡಲಿದ್ದಾರೆ.

ಬಂಡಾಯ ಕಬಡ್ಡಿ ಲೀಗ್‌ಗೆ ಭರ್ಜರಿ ಪ್ರತಿಕ್ರಿಯೆ!

ಮತದಾನ ನಮ್ಮ ಹಕ್ಕು... ಪ್ರಜಾಪ್ರಭುತ್ವದ ಉತ್ಸವವನ್ನು ಯಶಸ್ವಿಗೊಳಿಸೋಣ...

ದೇಶದಲ್ಲಿ ಏ.11 ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

Follow Us:
Download App:
  • android
  • ios