ಬಹುದಿನಗಳ ಗೆಳತಿ ಸಂದೀಪ್‌ ಕೌರ್‌ರನ್ನು ಭಾರತದ ಸ್ಟಾರ್ ಕಬಡ್ಡಿ ಪಟು ಅಜಯ್‌ ವರಿಸಿದರು. ಈ ಸಂದರ್ಭದಲ್ಲಿ ಹಲವಾರು ಸ್ನೇಹಿತರು ಹಾಜರಿದ್ದರು.

ಜಗತ್‌ಪುರ್‌(ಹಿಮಾಚಲ ಪ್ರದೇಶ): ಭಾರತದ ಕಬಡ್ಡಿ ತಾರೆ ಅಜಯ್‌ ಠಾಕೂರ್‌ ಗುರುವಾರ ಇಲ್ಲಿ ನಡೆದ ಸರಳ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

ಬಹುದಿನಗಳ ಗೆಳತಿ ಸಂದೀಪ್‌ ಕೌರ್‌ರನ್ನು ಅಜಯ್‌ ವರಿಸಿದರು. ಭಾರತ ಕಬಡ್ಡಿ ತಂಡದ ಮಾಜಿ ನಾಯಕ ಅನೂಪ್‌ ಕುಮಾರ್‌ ಸೇರಿದಂತೆ ಪ್ರೊ ಕಬಡ್ಡಿಯ ಹಲವು ತಾರಾ ಆಟಗಾರರು, ಅಂತಾರಾಷ್ಟ್ರೀಯ ಬಾಕ್ಸರ್‌ ಸ್ವೀಟಿ ಬೋರಾ ಸೇರಿದಂತೆ ಇನ್ನೂ ಅನೇಕ ಗಣ್ಯರು ನವದಂಪತಿಗೆ ಶುಭ ಕೋರಿದರು. 

Scroll to load tweet…

ಚತ್ತೀಸ್’ಘಡದ ಬಿಸ್ಲಾಪುರದಲ್ಲಿ DSP ಆಗಿ ಕಾರ್ಯನಿರ್ವಹಿಸುತ್ತಿರು ಅಜಯ್ ಠಾಕೂರ್ ಸಾಧನೆ ಗುರುತಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಪ್ರೊ ಕಬಡ್ಡಿಯಲ್ಲಿ ಅಜಯ್‌, ತಮಿಳ್‌ ತಲೈವಾಸ್‌ ತಂಡವನ್ನು ಮುನ್ನಡೆಸಲಿದ್ದಾರೆ.