ಪಾಕಿಸ್ತಾನ ಮಾಜಿ ಕ್ರಿಕೆಟಿಗ ಜಾವೇದ್ ವಿಯಾಂದಾದ್ ಭಾರತದ ವಿರುದ್ಧ ಸದಾ ದ್ವೇಷ ಕಾರುತ್ತಲೇ ಇರುತ್ತಾರೆ. ಇದೀಗ ಕಾಶ್ಮೀರದ 370 ಆರ್ಟಿಕಲ್ ರದ್ದು ಕುರಿತು ಖಡ್ಗ ಹಿಡಿದು ರೋಡಿಗಿಳಿದಿದ್ದಾರೆ. ಕಾಶ್ಮೀರಕ್ಕಾಗಿ ಭಾರತೀಯರನ್ನು  ಕೊಲ್ಲಲು ಸಿದ್ದ ಎಂದು ವಿವಾದ ಸೃಷ್ಟಿಸಿದ್ದಾರೆ. 

ಕರಾಚಿ(ಸೆ.01): ಕೇಂದ್ರ ಸರ್ಕಾರ ಕಾಶ್ಮೀರದ ವಿಶೇಷ ಸ್ಥಾನ ಮಾನ(ಆರ್ಟಿಕಲ್ 370) ರದ್ದು ಮಾಡಿದ ಬಳಿಕ ಪಾಕಿಸ್ತಾನದ ನಿದ್ದೆ ಇಲ್ಲದಾಗಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹತಾಶರಾಗಿದ್ದು, ಈ ಸಾಲಿಗೆ ಪಾಕ್ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಕೂಡ ಸೇರಿಕೊಂಡಿದ್ದಾರೆ. ಭಾರತ ವಿರುದ್ಧ ಸದಾ ವಿವಾದಾತ್ಮಕ ಹೇಳಿಕೆ ನೀಡುವ ಜಾವೇದ್ ಇದೀಗ ಕಾಶ್ಮೀರ ಕುರಿತು ಅತಿರೇಕದಿಂದ ವರ್ತಿಸಿದ್ದಾರೆ.

Add Asianetnews Kannada as a Preferred SourcegooglePreferred

ಇದನ್ನೂ ಓದಿ: ಭಾರತ ಸ್ವಚ್ಛ ಮಾಡ್ತೀವಿ: ಅಣುಬಾಂಬ್ ಕನವರಿಸಿದ ಮಿಯಾಂದಾದ್!

ಕಾಶ್ಮೀರ ಮೇಲಿನ ಆರ್ಟಿಕಲ್ 370 ರದ್ದು ಮಾಡಿದ ಬಳಿಕ ಜಾವೇದ್ ಮಿಯಾಂದಾದ್ ಭಾರತ ವಿರುದ್ದ ಗುಡುಗುತ್ತಲೇ ಇದ್ದಾರೆ. ಅಣುಬಾಂಬ್ ಹಾಕಿ ಮುಗಿಸುತ್ತೇವೆ, ಗಡಿ ಪ್ರದೇಶಕ್ಕೆ ಬೇಟಿ ನೀಡುತ್ತೇನೆ ಎಂದಿದ್ದ ಮಿಯಾಂದಾದ್ ಇದೀಗ ಕಾಶ್ಮೀರಕ್ಕಾಗಿ ಭಾರತೀಯರನ್ನು ಕೊಲ್ಲಲು ಸೈ ಎಂದಿದ್ದಾರೆ. ಕತ್ತಿ ವರಸೆ ಮಾಡಿದ ಜಾವೇದ್ ಮಿಯಾಂದಾದ್, ಮೊದಲು ಬ್ಯಾಟ್ ಹಿಡಿದು ಸಿಕ್ಸರ್ ಸಿಡಿಸುತ್ತಿದ್ದೆ, ಇದೀಗ ಕಾಶ್ಮೀರಕ್ಕಾಗಿ ಕತ್ತಿ ಹಿಡಿದು ಕೊಲ್ಲಲು ಗೊತ್ತಿದೆ ಎಂದು ಜಾವೇದ್ ಹೇಳಿದ್ದಾರೆ.

Scroll to load tweet…

ಇದನ್ನೂ ಓದಿ: ಭಾರತ ವಿರುದ್ಧದ ಪಂದ್ಯಗಳನ್ನು ಬಹಿಷ್ಕರಿಸಿ; ಮಿಯಾಂದಾದ್ ಕಿಡಿ

ಅಂದು ನನ್ನ ಬ್ಯಾಟ್ ಹರಿತವಾಗಿತ್ತು, ಇದೀಗ ನನ್ನ ಕೈಯಲ್ಲಿರುವ ಖಡ್ಗ ಹರಿತವಾಗಿದೆ. ಉದ್ದೇಶ ಒಂದೇ ಎದುರಾಳಿಗಳನ್ನು ಮುಗಿಸುವುದು. ಹೀಗಾಗಿ ಕಾಶ್ಮೀರ ಜನತೆ ಭಯ ಪಡುವ ಅಗತ್ಯವಿಲ್ಲ. ಪಾಕಿಸ್ತಾನ ನಿಮ್ಮ ಜೊತೆಗಿದೆ ಎಂದು ವಿಯಾಂದಾದ್ ಹೇಳಿದ್ದಾರೆ. ಮಿಯಾಂದಾದ್ ವಿವಾದಾತ್ಮಕ ಕತ್ತಿ ವರೆಸೆ ಇದೀಗ ವೈರಲ್ ಆಗಿದೆ. 

ಕ್ರಿಕೆಟ್ ಆಡುತ್ತಿದ್ದ ಸಂದರ್ಭದಿಂದಲೂ ಜಾವೇದ್ ಸದಕಾಲ ಭಾರತವನ್ನು ದ್ವೇಷಿಸುತ್ತಾರೆ. ಜಾವೇದ್ ಪುತ್ರ, ಭಾರತದ ಮೋಸ್ಟ್ ವಾಂಟೆಡ್, ಅಂಡರ್ ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂ ಮಗಳನ್ನು ವರಿಸಿದ್ದಾರೆ.