ಇಸ್ಲಾಮಾಬಾದ್(ಆ.22): ‘ಭಾರತವನ್ನು ಕ್ಷಣಮಾತ್ರದಲ್ಲಿ ಅಣುಬಾಂಬ್ ಹಾಕಿ ಉಡಾಯಿಸುತ್ತೇವೆ..’ ಇದು ಪಾಕ್ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅವರ ಸೊಕ್ಕಿನ ನುಡಿಗಳು.

ಪಾಕ್ ಬಳಿ ಅಣ್ವಸ್ತ್ರ ಇದ್ದು, ಭಾರತವನ್ನು ಕ್ಷಣಾರ್ಧದಲ್ಲಿ ಉಡಾಯಿಸುವ ಸಾಮರ್ಥ್ಯ ಅದಕ್ಕಿದೆ ಎಂದು ಮಿಯಾಂದಾದ್ ನೇರವಾಗಿ ಅಣ್ವಸ್ತ್ರ ಬೆದರಿಕೆಯೊಡ್ಡಿದ್ದಾರೆ. 

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿರುವ ಭಾರತದ ನಿರ್ಣಯ ಖಂಡಿಸಿರುವ ಮಿಯಾಂದಾದ್, ಯುದ್ಧವೊಂದೇ ಪರಿಹಾರ ಎನ್ನುವುದಾದರೆ ಅದು ಆಗಿ ಬಿಡಲಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ.

ನಿನ್ನನ್ನು ನೀನು ರಕ್ಷಣೆ ಮಾಡಿಕೊಳ್ಳಲು ಯಾರನ್ನು ಬೇಕಾದರೂ ಕೊಲ್ಲಬಹುದು ಎಂಬ ನಿಯಮ ವಿಶ್ವಾದ್ಯಂತ ಇದೆ. ಹೀಗಾಗಿ ಮೊದಲು ಪಾಕಿಸ್ತಾನವೇ ದಾಳಿ ಮಾಡಬೇಕು. ಆಗ ಭಾರತಕ್ಕೆ ತನ್ನ ತಪ್ಪಿನ ಅರಿವಾಗುತ್ತದೆ ಮಿಯಾಂದಾದ್ ಗುಡುಗಿದ್ದಾರೆ.

ಭಾರತ ಕುತಂತ್ರಿ ದೇಶವಾಗಿದ್ದು, ನಾವು ಅಣುಬಾಂಬ್ ಗಳನ್ನು ಕೇವಲ ಪ್ರದರ್ಶನಕ್ಕೆ ಮಾತ್ರ ಇಡಬಾರದು ಎಂದು ಮಿಯಾಂದಾದ್ ಬಾಯಿಗೆ ಬಂದಂತೆ ಮಾತಾಡಿದ್ದಾರೆ.

ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಹಲವು ಪಾಕ್ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಹೇಳಿಕೆ ನೀಡಿದ್ದು, ಮಿಯಾಂದಾದ್ ಇವರೆಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿರುವುದು ಅವರ ಅವಿವೇಕತನಕ್ಕೆ ಸಾಕ್ಷಿಯಾಗಿದೆ.