Ranji Trophy: ರೈಲ್ವೇಸ್ ಎದುರು ರಾಜ್ಯಕ್ಕೆ ಇನ್ನಿಂಗ್ಸ್ ಮುನ್ನಡೆ
ರೈಲ್ವೇಸನ್ನು 155ಕ್ಕೆ ನಿಯಂತ್ರಿಸಿದ ಬಳಿಕ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಶನಿವಾರ 174 ರನ್‌ಗೆ ಆಲೌಟಾಯಿತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ರೈಲ್ವೇಸ್ 8 ವಿಕೆಟ್‌ಗೆ 209 ರನ್ ಗಳಿಸಿದ್ದು, 190 ರನ್ ಮುನ್ನಡೆಯಲ್ಲಿದೆ.
ಸೂರತ್(ಫೆ.04): ತೀವ್ರ ಬ್ಯಾಟಿಂಗ್ ವೈಫಲ್ಯದ ಹೊರತಾಗಿಯೂ ರೈಲ್ವೇಸ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ ಲಭಿಸಿದೆ. ಕಡಿಮೆ ಮೊತ್ತದ ಪಂದ್ಯ ಸದ್ಯ ಕುತೂಹಲ ಘಟ್ಟ ತಲುಪಿದ್ದು, ಗೆಲುವಿಗಾಗಿ ಉಭಯ ತಂಡಗಳು ಹೋರಾಡುತ್ತಿವೆ.
ರೈಲ್ವೇಸನ್ನು 155ಕ್ಕೆ ನಿಯಂತ್ರಿಸಿದ ಬಳಿಕ ಕರ್ನಾಟಕ ಮೊದಲ ಇನ್ನಿಂಗ್ಸ್‌ನಲ್ಲಿ ಶನಿವಾರ 174 ರನ್‌ಗೆ ಆಲೌಟಾಯಿತು. ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ ರೈಲ್ವೇಸ್ 8 ವಿಕೆಟ್‌ಗೆ 209 ರನ್ ಗಳಿಸಿದ್ದು, 190 ರನ್ ಮುನ್ನಡೆಯಲ್ಲಿದೆ.
Vizag Test ಜಸ್ಪ್ರೀತ್ ಬುಮ್ರಾ ಬಿರುಗಾಳಿ; ಸಾಧಾರಣ ಮೊತ್ತಕ್ಕೆ ಇಂಗ್ಲೆಂಡ್ ಆಲೌಟ್
ಮೊದಲ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಕೇವಲ 90 ರನ್ ಕಲೆಹಾಕಿದ್ದ ಕರ್ನಾಟಕದ ಶನಿವಾರ ಕೆಳಕ್ರಮಾಂಕದ ಬ್ಯಾಟರ್‌ಗಳು ನೆರವಾದರು. ಶ್ರೀನಿವಾಸ್ ಶರತ್ 24, ವೈಶಾಕ್ 24 ರನ್ ಗಳಿಸಿ ತಂಡಕ್ಕೆ ಮುನ್ನಡೆ ಒದಗಿಸಿದರು. ಆಕಾಶ್ ಪಾಂಡೆ 5, ಅಯಾನ್ ಚೌಧರಿ 4 ವಿಕೆಟ್ ಪಡೆದರು.
ಮಾರಕ ದಾಳಿ: ಬಳಿಕ 2ನೇ ಇನ್ನಿಂಗ್ಸ್‌ನಲ್ಲೂ ರೈಲ್ವೇಸನ್ನು ರಾಜ್ಯದ ಬೌಲರ್‌ಗಳು ಕಾಡಿದರು. ಮೊಹಮದ್ ಸೈಫ್(ಔಟಾಗದೆ 51), ಸೂರಜ್ ಅಹುಜಾ(48) ಆಕರ್ಷಕ ಆಟದಿಂದಾಗಿ ತಂಡ 200ರ ಗಡಿ ದಾಟಿದ್ದು, ಕರ್ನಾಟಕಕ್ಕೆ ದೊಡ್ಡ ಗುರಿ ನೀಡಲು ಹೋರಾಡುತ್ತಿದೆ. ವೈಶಾಕ್ 3, ವಿದ್ವತ್ 2 ವಿಕೆಟ್ ಕಿತ್ತರು.
ಸ್ಕೋರ್:
ರೈಲ್ವೇಸ್ 155/10 ಮತ್ತು 209/8(2ನೇ ದಿನದಂತ್ಯಕ್ಕೆ)(ಸೈಫ್ 51*, ವೈಶಾಕ್ 3-45)
ಕರ್ನಾಟಕ 174/10(ವೈಶಾಕ್ 24, ಆಕಾಶ್ 5-63)
Vizag Test ಜಸ್ಪ್ರೀತ್ ಬುಮ್ರಾ ಬಿರುಗಾಳಿ; ಸಾಧಾರಣ ಮೊತ್ತಕ್ಕೆ ಇಂಗ್ಲೆಂಡ್ ಆಲೌಟ್
ಶ್ರೀಲಂಕಾ ಬೃಹತ್ ಮೊತ್ತ
ಕೊಲಂಬೊ: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ನಲ್ಲಿ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮೊತ್ತ ಕಲೆಹಾಕಿದೆ. ಆಫ್ಘನ್‌ನ 198 ರನ್‌ಗೆ ಉತ್ತರವಾಗಿ ಲಂಕಾ 2ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 410 ರನ್ ಗಳಿಸಿದೆ. ಏಂಜೆಲೋ ಮ್ಯಾಥ್ಯೂಸ್ 141, ದಿನೇಶ್ ಚಾಂಡಿಮಾಲ್ 107 ರನ್ ಸಿಡಿಸಿದರು.