ನವದೆಹಲಿ(ಮೇ.25): 1983ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದು ಇತಿಹಾಸ ಬರೆದಿದ್ದ ಭಾರತ ತಂಡದ ನಾಯಕರಾಗಿದ್ದ ಕಪಿಲ್‌ ದೇವ್‌ ಕುತೂಹಲಕಾರಿ ವಿಷಯ ಬಹಿರಂಗಪಡಿಸಿದ್ದಾರೆ. 

ಫೈನಲ್‌ನಲ್ಲಿ ಆಡಲು ಕ್ರೀಡಾಂಗಣಕ್ಕೆ ತೆರಳುವ ವೇಳೆ ಕಿಟ್‌ ಬ್ಯಾಗ್‌ನಲ್ಲಿ ಶಾಂಪೇನ್‌ ಬಾಟಲ್‌ ಇಟ್ಟುಕೊಂಡು ಹೋಗಿದ್ದಾಗಿ ತಿಳಿಸಿದ್ದಾರೆ. ‘ನಾವು ವಿಶ್ವಕಪ್‌ ಗೆಲ್ಲುತ್ತೇವೆ ಎನ್ನುವ ನಂಬಿಕೆ ನನಗಿತ್ತು. ನಾಯಕನಾಗಿ ನನಗೇ ನಂಬಿಕೆ ಇಲ್ಲದಿದ್ದರೆ, ಉಳಿದ ಆಟಗಾರರನ್ನು ಹುರಿದುಂಬಿಸಲು ಹೇಗೆ ಸಾಧ್ಯ. ಒಂದೊಮ್ಮೆ ಸೋತರೂ, ಫೈನಲ್‌ ಪ್ರವೇಶಿಸಿದ್ದಕ್ಕೆ ಸಂಭ್ರಮಿಸೋಣ ಎಂದುಕೊಂಡಿದ್ದೆ’ ಎಂದು ಕಪಿಲ್‌ ಹೇಳಿದ್ದಾರೆ.

Flashback: 1983 ಭಾರತದ ಆಟಕ್ಕೆ ಬೆರಗಾದ ಜಗತ್ತು!

1975 ಹಾಗೂ 1979ರಲ್ಲಿ ಕಪ್ ಗೆದ್ದು ಹ್ಯಾಟ್ರಿಕ್ ವಿಶ್ವಕಪ್ ಗೆಲ್ಲುವ ಕನಸು ಕಾಣುತ್ತಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಶಾಕ್ ನೀಡಿ ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಜಯಿಸಿತ್ತು.  

ವಿಶ್ವಕಪ್ 2019: ಅಭ್ಯಾಸ ಪಂದ್ಯಕ್ಕೆ ರೆಡಿಯಾದ ಭಾರತ-ನ್ಯೂಜಿಲೆಂಡ್‌