ಕ್ರಿಕೆಟ್ ವಿಶ್ವಕಪ್ ನೆನಪಿನಲ್ಲಿಂದು 1983ರ ವಿಶ್ವಕಪ್ ಟೂರ್ನಿಯ ಇಣುಕುನೋಟ. ಆರಂಭಿಕ 2 ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ನೀರಸ ಪ್ರದರ್ಶನ ನೀಡಿ ಟೂರ್ನಿಯಿಂದ ಹೊರಬಿದ್ದಿತ್ತು. ಆಗಷ್ಟೇ ಕ್ರಿಕೆಟ್ ಜಗತ್ತಿನಲ್ಲಿ ಭಾರತ ಅಂಬೆಗಾಲಿಡುತ್ತಿದ್ದ ಕಾಲ. ಹೀಗಾಗಿ 3ನೇ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಇತಿಹಾಸ ಬರೆಯುತ್ತೆ ಅನ್ನೋ ಕಲ್ಪನೆ ಯಾರಿಗೂ ಇರಲಿಲ್ಲ. ಆದರೆ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಐತಿಹಾಸಿ ದಾಖಲೆ ಬರೆಯಿತು
1979ರ ಏಕದಿನ ವಿಶ್ವಕಪ್‌ನಲ್ಲಿ ಒಂದೂ ಪಂದ್ಯ ಗೆಲ್ಲದೆ ವಾಪಸಾಗಿದ್ದ ಭಾರತ, 4 ವರ್ಷಗಳ ಬಳಿಕ ಎಂದರೆ 1983ರಲ್ಲಿ ಕ್ರಿಕೆಟ್ ಲೋಕವನ್ನು ಬೆರಗಾಗಿಸಿತು. ಸತತ 3ನೇ ಬಾರಿಗೆ ಇಂಗ್ಲೆಂಡ್ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿತ್ತು. ಭಾರತ ವಿಶ್ವ ಚಾಂಪಿಯನ್ ಪಟ್ಟಅಲಂಕರಿಸಿ, ಕ್ರಿಕೆಟ್‌ನಲ್ಲಿ ಹೊಸ ಅಲೆ ಎಬ್ಬಿಸಿತು. ಟೂರ್ನಿಯಲ್ಲಿ ಒಟ್ಟು 8 ತಂಡಗಳು ಪಾಲ್ಗೊಂಡಿದ್ದವು. ಜಿಂಬಾಬ್ವೆ ವಿಶ್ವಕಪ್‌ಗೆ ಪಾದಾರ್ಪಣೆ ಮಾಡಿತು. ಭಾರತ, ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್‌ಇಂಡೀಸ್ ಸೆಮೀಸ್‌ಗೇರಿದವು. ಇಂಗ್ಲೆಂಡ್ ವಿರುದ್ಧ ಭಾರತ, ಪಾಕ್ ವಿರುದ್ಧ ವಿಂಡೀಸ್ ಗೆದ್ದು ಫೈನಲ್‌ಗೇರಿದವು. ಫೈನಲ್‌ನಲ್ಲಿ ಭಾರತ 43 ರನ್‌ಗಳಿಂದ ಗೆದ್ದು ಇತಿಹಾಸ ಬರೆಯಿತು.

ಚಾಂಪಿಯನ್: ಭಾರತ
ರನ್ನರ್-ಅಪ್: ವೆಸ್ಟ್‌ಇಂಡೀಸ್

