ಮೆಲ್ಬರ್ನ್‌(ಜ.19): ‘ಭಾರತದ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಸಿಟ್ಟಾಗಿದ್ದನ್ನು ಕಂಡಿದ್ದೇನೆ. ಆದರೆ ಮಾಜಿ ನಾಯಕ ಎಂ.ಎಸ್‌.ಧೋನಿ ಸಿಟ್ಟಾಗಿದ್ದನ್ನು ನಾನು ಈವರೆಗೂ ಒಂದು ಬಾರಿಯೂ ಕಂಡಿಲ್ಲ. ಧೋನಿಯಂತವರು 40 ವರ್ಷಗಳಲ್ಲಿ ಒಬ್ಬರು’ ಎಂದು ಭಾರತ ತಂಡದ ಪ್ರಧಾನ ಕೋಚ್‌ ರವಿಶಾಸ್ತ್ರಿ ಹೇಳಿದ್ದಾರೆ. 

ಧೋನಿಯಷ್ಟು ಬದ್ಧತೆ ಮತ್ತ್ಯಾರಿಗೂ ಇಲ್ಲ ಎಂದ ಕೊಹ್ಲಿ

‘ಧೋನಿ ದಿಗ್ಗಜ ಆಟಗಾರ. ನಮ್ಮ ದೇಶದ ಶ್ರೇಷ್ಠ ಕ್ರಿಕೆಟಿಗರಲ್ಲಿ ಅವರೂ ಒಬ್ಬರು. ಧೋನಿ ನಿವೃತ್ತಿ ಪಡೆದರೆ ಅವರ ಸ್ಥಾನವನ್ನು ತುಂಬುವುದು ಬಹಳ ಕಷ್ಟ. ಇದೇ ಕಾರಣಕ್ಕೆ ಧೋನಿ ಆಟವನ್ನು ಈಗಲೇ ನೋಡಿ ಆನಂದಿಸಿ ಎಂದು ನಾನು ಪದೇ ಪದೇ ಎಲ್ಲರಿಗೂ ಹೇಳುತ್ತಿರುತ್ತೇನೆ’ ಎಂದು ಶಾಸ್ತ್ರಿ ಹೇಳಿದ್ದಾರೆ. 

ಎಂ.ಎಸ್.ಧೋನಿ ಸೂಪರ್ ಸ್ಟಾರ್ ಮಾತ್ರವಲ್ಲ ಯಾವತ್ತಿಗೂ ಶ್ರೇಷ್ಠ-ಲ್ಯಾಂಗರ್

ಐಸಿಸಿಯ ಮೂರು ಪ್ರತಿಷ್ಠಿತ ಕಪ್[ಟಿ20, ಏಕದಿನ ವಿಶ್ವಕಪ್, ಐಸಿಸಿ ಚಾಂಪಿಯನ್ಸ್ ಟ್ರೋಫಿ] ಗೆದ್ದುಕೊಟ್ಟ ಭಾರತದ ಏಕೈಕ ನಾಯಕ ಎನ್ನುವ ಕೀರ್ತಿಗೆ ಪಾತ್ರವಾಗಿರುವ ಧೋನಿ, ಇದೀಗ ಆಸಿಸ್ ಪ್ರವಾಸದಲ್ಲಿ ಮಧ್ಯಮ ಕ್ರಮಾಂಕದ ಆಧಾರಸ್ತಂಭವೆನಿಸಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸತತ 3 ಅರ್ಧಶತಕ ಸಿಡಿಸುವ ಮೂಲಕ ಧೋನಿ ಸರಣಿಶ್ರೇಷ್ಠ ಗೌರವಕ್ಕೂ ಭಾಜನರಾಗಿದ್ದಾರೆ.