ಮೆಲ್ಬರ್ನ್(ಜ.18): ವಿಶ್ವಕಪ್ ಸರಣಿ ಪೂರ್ವಭಾವಿ ತಯಾರಿ ಆರಂಭಗೊಂಡಿರುವ ಬೆನ್ನಲ್ಲೇ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಫಾರ್ಮ್ ಕಂಡುಕೊಂಡಿರುವುದು ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸತತ 3 ಅರ್ಧಶತಕ ಸಿಡಿಸಿ ಸರಣಿ ಗೆಲುವಿನಲ್ಲಿ ಧೋನಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೀಗ ಧೋನಿ ಪ್ರದರ್ಶನಕ್ಕೆ ಆಸ್ಟ್ರೇಲಿಯಾ ಕೋಚ್ ಜಸ್ಟಿನ್ ಲ್ಯಾಂಗರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:3ನೇ ಏಕದಿನದಲ್ಲಿ 7 ವಿಕೆಟ್ ಗೆಲುವು- ಭಾರತಕ್ಕೆ ಏಕದಿನ ಸರಣಿ!

 

ಎಂ.ಎಸ್.ಧೋನಿ ಸೂಪರ್ ಸ್ಟಾರ್. ಇಷ್ಟೇ ಅಲ್ಲ ಯಾವತ್ತಿಗೂ ಶ್ರೇಷ್ಠ ಕ್ರಿಕೆಟಿಗ ಎಂದು ಜಸ್ಟಿನ್ ಲ್ಯಾಂಗರ್ ಹೇಳಿದ್ದಾರೆ. ಧೋನಿ ಅನುಭವ, ಸ್ಕಿಲ್ ಟೀಂ ಇಂಡಿಯಾಗೆ ನೆರವಾಗುತ್ತಿದೆ. ಚೇಸಿಂಗ್‌ನಲ್ಲಿ ಧೋನಿಯನ್ನ ಮೀರಿಸುವುದು ಅಸಾಧ್ಯದ ಮಾತು ಎಂದು ಲ್ಯಾಂಗರ್ ಹೇಳಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಏಕದಿನ ಸರಣಿ ಗೆಲುವು-ಸೆಹ್ವಾಗ್ ಸೇರಿದಂತೆ ದಿಗ್ಗಜರ ಟ್ವೀಟ್ ಅದ್ಬುತ!

37ರ ಹರೆಯದಲ್ಲೂ ಧೋನಿ ಫಿಟ್ ಆಗಿದ್ದಾರೆ. ಯುವಕರನ್ನೂ ನಾಚಿಸುವ ರೀತಿಯಲ್ಲಿ ರನ್ನಿಂಗ್ ಮಾಡುತ್ತಾರೆ. ಧೋನಿ ಅನುಭವ ಯುವ ಕ್ರಿಕೆಟಿಗರಿಗೆ ನೆರವಾಗುತ್ತಿದೆ ಎಂದಿದ್ದಾರೆ. ಆಸ್ಟ್ರೇಲಿಯಾ ಸೇರಿದಂತೆ ಇತರ ಕ್ರಿಕೆಟಿಗರು ಧೋನಿಯಿಂದ ಕಲಿಯಬೇಕಿದೆ ಎಂದು ಲ್ಯಾಂಗರ್ ಹೇಳಿದ್ದಾರೆ.