ಬಿಜೆಪಿಗೆ ಆನೆ ಬಲ; ಚುನಾವಣಾ ಅಖಾಡಕ್ಕೆ ಕುಸ್ತಿ ಪಟು ಯೋಗೇಶ್ವರ್ ದತ್?
ಒಲಿಂಪಿಕ್ ಪದಕ ವಿಜೇತ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕುಸ್ತಿ ಪಟು ಯೋಗೇಶ್ವರ್ ದತ್ ಇದೀಗ ಬಿಜೆಪಿ ಸೇರಲು ಸಜ್ಜಾಗಿದ್ದಾರೆ. ಚುನಾವಣೆಗೆ ಒಂದು ತಿಂಗಳು ಬಾಕಿ ಇರುವಾಗಲೇ ದತ್ ಬಿಜೆಪಿ ಸೇರ್ಪಡೆ ಇತರ ಪಕ್ಷಗಳಿಗೆ ಆತಂಕ ತಂದಿದೆ.
ಹರ್ಯಾಣ(ಸೆ.25): ವಿಧಾನಸಭಾ ಚುನಾವಣೆ, ಉಪಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ಆನೆ ಬಲ ಬಂದಿದೆ. ಇದೀಗ ಒಲಿಂಪಿಕ್ ಪದಕ ವಿಜೇತ ಕುಸ್ತಿ ಪಟು ಯೋಗೇಶ್ವರ್ ದತ್ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಈಗಾಗಲೇ ಯೋಗೇಶ್ವರ್, ಹರ್ಯಾಣ ಬಿಜೆಪಿ ರಾಜ್ಯಧ್ಯಕ್ಷ ಸುಭಾಷ್ ಬರಾಲ ಭೇಟಿಯಾಗಿದ್ದಾರೆ.
ಇದನ್ನೂ ಓದಿ: ಕ್ರೀಡಾಪಟುಗಳ ಸಂಪಾದನೆ ಮೇಲೆ ಸರ್ಕಾರದ ಕಣ್ಣು..!
ಮುಂದಿನ ತಿಂಗಳ ಹರ್ಯಾಣ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಹರ್ಯಾಣ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಗೇಶ್ವರ್ ಬಿಜೆಪಿ ಸೇರಲಿದ್ದಾರೆ. ಯೋಗೇಶ್ವರ್ ಭೇಟಿ ಬಳಿಕ ಮಾತನಾಡಿದ ಸುಭಾಷ್, ಕುಸ್ತಿ ಪಟು ಶೀಘ್ರದಲ್ಲೇ ತಮ್ಮ ಪೊಲೀಸ್ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಶೀಘ್ರದಲ್ಲೇ ಬಿಜೆಪಿ ಪಕ್ಷ ಸೇರಿಕೊಳ್ಳಲಿದ್ದಾರೆ ಎಂದಿದ್ದಾರೆ.
ಇದನ್ನೂ ಓದಿ: ಯೋಗೇಶ್ವರ್ ದತ್ ಬೆಳ್ಳಿಗೆ ಅಪ್'ಗ್ರೇಡ್ ಆಗಿದ್ದಕ್ಕೆ ಸೆಹ್ವಾಗ್ ಪ್ರತಿಕ್ರಿಯೆ ಹೇಗಿತ್ತು ಅಂದ್ರೆ
2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಯೋಗೇಶ್ವರ್, 2013ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು. 2019ರ ಲೋಕಸಭಾ ಚುನಾವಣೆ ಸಮಯದಲ್ಲಿ ಯೋಗೇಶ್ವರ್ ಬಿಜೆಪಿ ಸೇರಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಬಿಜೆಪಿ, ಯೋಗೇಶ್ವರ್ ಮನಒಲಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ಕಂಚಿನ ಪದಕಕ್ಕೇ ಯೋಗೇಶ್ವರ್ ದತ್ ತೃಪ್ತ
ಚುನಾವಣಾ ಆಯೋಗ ಶನಿವಾರ(ಸೆ.21) ಹರ್ಯಾಣ ಹಾಗೂ ಮಹಾರಾಷ್ಟ್ರ ಚುನಾವಣಾ ದಿನಾಂಕ ಬಹಿರಂಗ ಪಡಿಸಿದೆ. ಅಕ್ಟೋಬರ್ 21ಕ್ಕೆ ಹರ್ಯಾಣ ರಾಜ್ಯ ಚುನಾವಣೆ ನಡೆಯಲಿದೆ. 24ಕ್ಕೆ ಫಲಿತಾಂಶ ಹೊರಬೀಳಲಿದೆ. ಹರ್ಯಾಣದಲ್ಲಿ ಚುನಾವಣಾ ಆಯೋಗ 19,425 ಪೋಲಿಂಗ್ ಬೂಥ್‌ಗಳನ್ನು ಹಾಕಲಿದೆ. ಹರ್ಯಾಣದಲ್ಲಿ ಸರಿಸುಮಾರು 1.83 ಕೋಟಿ ಮತದಾರರಿದ್ದಾರೆ.