ಯೋಗೇಶ್ವರ್ ದತ್ ಬೆಳ್ಳಿಗೆ ಅಪ್'ಗ್ರೇಡ್ ಆಗಿದ್ದಕ್ಕೆ ಸೆಹ್ವಾಗ್ ಪ್ರತಿಕ್ರಿಯೆ ಹೇಗಿತ್ತು ಅಂದ್ರೆ

'ವಾವ್ ಅಮೇರಿಕಾದಲ್ಲಿ ಕ್ರಿಕೆಟ್ ಅಪ್'ಗ್ರೇಡ್ ಆಯ್ತು, ನೆಹ್ರಾ ಸ್ಮಾರ್ಟ್'ಫೋನ್'ಗೆ ಅಪ್'ಗ್ರೇಡ್ ಆದ್ರು, ಈಗ ಯೋಗೇಶ್ವರ್ ದತ್ ಕಂಚಿನಿಂದ ಬೆಳ್ಳಿಗೆ ಅಪ್'ಗ್ರೇಡ್ ಆಗಲಿದ್ದಾರೆ' ಎಂದು ಟ್ವಿಟ್ ಮಾಡಿದ್ದಾರೆ.

Virender Sehwags epic take on Yogeshwar Dutts silver upgrade

ನವದೆಹಲಿ(ಆ.30): ಭಾರತೀಯ ಕುಸ್ತಿಪಟು ಯೋಗೇಶ್ವರ್ ದತ್ ಅವರಿಗೀಗ ಬೆಳ್ಳಿ ಯೋಗ ಒಲಿದು ಬಂದಿದೆ. 2012ರ ಲಂಡನ್ ಒಲಿಂಪಿಕ್ಸ್'ನಲ್ಲಿ ಕಂಚಿನ ಪದಕ ಗೆದ್ದಿದ್ದ ಯೋಗೇಶ್ವರ್ ಅವರ ಎದುರಾಳಿ ರಷ್ಯಾದ ಬೆಸಿಕ್ ಕುಡುಖೋವ್ ಅವರು ನಿಷೇಧಿತ ಪದಾರ್ಥ ಸೇವಿಸಿದ್ದು ಖಚಿತವಾದ ಹಿನ್ನೆಲೆಯಲ್ಲಿ ಬೆಳ್ಳಿ ಪದಕ ಭಾರತೀಯ ಕುಸ್ತಿಪಟುವಿನ ಪಾಲಾಗಲಿದೆ.

ಈ ಸಂತೋಷದ ಸುದ್ದಿಯನ್ನು ಟ್ವಿಟ್ಟರ್'ನಲ್ಲಿ ಭಾರತೀಯ ಮಾಜಿ ಆಟಗಾರ, ಸ್ಫೋಟಕ ಬ್ಯಾಟ್ಸ್'ಮನ್ ವಿರೇಂದ್ರ ಸೆಹ್ವಾಗ್ ಹಂಚಿಕೊಂಡಿದ್ದು ಹೀಗೆ:

'ವಾವ್ ಅಮೇರಿಕಾದಲ್ಲಿ ಕ್ರಿಕೆಟ್ ಅಪ್'ಗ್ರೇಡ್ ಆಯ್ತು, ನೆಹ್ರಾ ಸ್ಮಾರ್ಟ್'ಫೋನ್'ಗೆ ಅಪ್'ಗ್ರೇಡ್ ಆದ್ರು, ಈಗ ಯೋಗೇಶ್ವರ್ ದತ್ ಕಂಚಿನಿಂದ ಬೆಳ್ಳಿಗೆ ಅಪ್'ಗ್ರೇಡ್ ಆಗಲಿದ್ದಾರೆ' ಎಂದು ಟ್ವಿಟ್ ಮಾಡಿದ್ದಾರೆ.

ಆದರೆ, ವಿಶ್ವ ಕುಸ್ತಿ ಒಕ್ಕೂಟವು ಈ ಬಗ್ಗೆ ಭಾರತೀಯ ಕುಸ್ತಿ ಸಂಸ್ಥೆಗೆ ಅಧಿಕೃತವಾಗಿ ಲಿಖಿತ ಪತ್ರದ ಮೂಲಕ ದೃಢಪಡಿಸಬೇಕಿದೆ.

Latest Videos
Follow Us:
Download App:
  • android
  • ios