ಕ್ರೀಡಾಪಟುಗಳ ಸಂಪಾದನೆ ಮೇಲೆ ಸರ್ಕಾರದ ಕಣ್ಣು..!

Haryana govt asks athletes to deposit one third of their income to state
Highlights

ಕ್ರೀಡಾಪಟುಗಳಿಗೆ ಕೋಟಿ ಕೋಟಿ ಬಹುಮಾನ ಮೊತ್ತ ನೀಡಿ ದೇಶದಲ್ಲಿ ಕ್ರೀಡೆಗೆ ಮಾದರಿ ಎನಿಸಿಕೊಂಡಿದ್ದ ಹರ್ಯಾಣ, ಇದೀಗ ಅನಗತ್ಯ ವಿವಾದಗಳಿಗೆ ಸಿಲುಕುತ್ತಿದೆ.

ಚಂಡೀಗಢ[ಜೂ.09]: ಕ್ರೀಡಾಪಟುಗಳಿಗೆ ಕೋಟಿ ಕೋಟಿ ಬಹುಮಾನ ಮೊತ್ತ ನೀಡಿ ದೇಶದಲ್ಲಿ ಕ್ರೀಡೆಗೆ ಮಾದರಿ ಎನಿಸಿಕೊಂಡಿದ್ದ ಹರ್ಯಾಣ, ಇದೀಗ ಅನಗತ್ಯ ವಿವಾದಗಳಿಗೆ ಸಿಲುಕುತ್ತಿದೆ.

ರಾಜ್ಯದ ಕ್ರೀಡಾ ಕಾರ್ಯದರ್ಶಿ ಅಶೋಕ್ ಖೇಮ್ಕಾ ಹೊರಡಿಸಿದ ವಿಚಿತ್ರ ಆದೇಶವೊಂದು ಭಾರೀ ಟೀಕೆಗೆ ಗುರಿಯಾಯಿತು. ಹರ್ಯಾಣದ ಕ್ರೀಡಾ ಪಟುಗಳು ತಮ್ಮ ವೃತ್ತಿ (ವೇತನ, ಬಹುಮಾನ ಮೊತ್ತ) ಹಾಗೂ ವಾಣಿಜ್ಯಗಳಿಕೆ (ಜಾಹೀರಾತು ಒಪ್ಪಂದ)ದಿಂದ ಸಂಪಾದಿಸುವ ಮೊತ್ತದ ಮೂರನೇ ಒಂದು ಭಾಗವನ್ನು ಸರ್ಕಾರಕ್ಕೆ ಪಾವತಿಸಬೇಕು. ಈ ಹಣವನ್ನು ರಾಜ್ಯದ ಕ್ರೀಡಾಭಿವೃಗೆ ಬಳಸಲಾಗುತ್ತದೆ ಎಂದು ಖೇಮ್ಕಾ ಸೂಚಿಸಿದ್ದರು.

ಈ ಆದೇಶಕ್ಕೆ ಹರ್ಯಾಣದ ಕ್ರೀಡಾಪಟುಗಳು ಭಾರೀ ಟೀಕೆ, ಆಕ್ರೋಶ ವ್ಯಕ್ತಪಡಿಸಿದರು. ಖ್ಯಾತ ಕುಸ್ತಿಪಟುಗಳಾದ ಸುಶೀಲ್ ಕುಮಾರ್, ಯೋಗೇಶ್ವರ್ ದತ್, ಬಬಿತಾ ಫೋಗಾಟ್ ಸೇರಿದಂತೆ ಹಲವರು ಮಾಧ್ಯಮಗಳಲ್ಲಿ ಸರ್ಕಾರದ ನಡೆಗೆ ಬೇಸರ ವ್ಯಕ್ತಪಡಿಸಿದ ಬಳಿಕ, ಮುಖ್ಯಮಂತ್ರಿ ಮನೋಹರ್ ಲಾಲ್ ಮಧ್ಯ ಪ್ರವೇಶಿಸಬೇಕಾಯಿತು. ‘ಕ್ರೀಡಾ ಪಟುಗಳಿಗೆ ಸಮಸ್ಯೆಯಾಗಲು ಬಿಡುವುದಿಲ್ಲ. ಮುಂದಿನ ಆದೇಶದ ವರೆಗೂ ಈ ನಿಯಮ ಜಾರಿಗೆ ತರಬಾರದು’ ಎಂದು ಕ್ರೀಡಾ ಇಲಾಖೆಗೆ ಸೂಚಿಸಿದ್ದಾರೆ.

loader