ಮುಂಬೈ(ಮಾ.14): ಇಂಜುರಿಯಿಂದ ಚೇತರಿಸಿಕೊಂಡಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ ಅಭ್ಯಾಸ ಆರಂಭಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಸ್ಟಾರ್ ಕ್ರಿಕೆಟಿಗ ವಾಂಖೆಡೆ ಕ್ರೀಡಾಂಗಣದಲ್ಲಿ ಭರ್ಜರಿ ಪ್ರಾಕ್ಟೀಸ್ ಶುರು ಮಾಡಿದ್ದಾರೆ. ಅಭ್ಯಾಸದ ವೇಳೆ ಹಾರ್ದಿಕ್ ಹೆಲಿಕಾಪ್ಟರ್ ಸಿಕ್ಸರ್ ಭಾರಿಸೋ ಮೂಲಕ ಎಂ.ಎಸ್.ಧೋನಿಗೆ ಚಾಲೆಂಜ್ ಹಾಕಿದ್ದಾರೆ.

ಇದನ್ನೂ ಓದಿ: ಧೋನಿಗೆ ಚಾಲೆಂಜ್ - ಯುವಿ ಹೆಲಿಕಾಪ್ಟರ್ ಸಿಕ್ಸರ್ ವೈರಲ್!

ನೆಟ್ ಪ್ರಾಕ್ಟೀಸ್ ವೇಳೆ ಹೆಲಿಕಾಪ್ಟರ್ ಸಿಕ್ಸರ್ ಸಿಡಿಸಿರುವ ಹಾರ್ದಿಕ್ ಸಾಮಾಜಿಕ ಜಾಲತಾಣದಲ್ಲಿ ವಿಡೀಯೋ ಪೋಸ್ಟ್ ಮಾಡಿದ್ದಾರೆ. ಬಳಿಕ ಈ ಹೊಡೆತಕ್ಕೆ ಸ್ಪೂರ್ತಿ ಯಾರು ಅನ್ನೋದನ್ನು ಊಹೆ ಮಾಡಿ ಎಂದು ಬರೆದುಕೊಂಡಿದ್ದಾರೆ. 

 

 

ಇದನ್ನೂ ಓದಿ: ಸದ್ದಿಲ್ಲದೇ ಮುಂಬೈ ತರಬೇತಿ ಶಿಬಿರ ಸೇರಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗ!

12ನೇ ಆವೃತ್ತಿ ಐಪಿಎಲ್ ಟೂರ್ನಿ ಮಾರ್ಚ್ 23 ರಿಂದ ಆರಂಭಗೊಳ್ಳಲಿದೆ. ಇದಕ್ಕೂ ಮುನ್ನವೇ ಎಂ.ಎಸ್.ಧೋನಿಗೆ ಚಾಲೆಂಜ್ ಹೆಚ್ಚಾಗುತ್ತಿದೆ. ಇತ್ತೀಚಗಷ್ಟೇ ಮುಂಬೈ ಇಂಡಿಯನ್ಸ್ ತಂಡದ ಹಿರಿಯ ಆಲ್ರೌಂಡರ್ ಯುವರಾಜ್ ಸಿಂಗ್ ಹೆಲಿಕಾಪ್ಟರ್ ಸಿಕ್ಸರ್ ಸಿಡಿಸಿ ಗಮನಸೆಳೆದಿದ್ದರು.