Asianet Suvarna News Asianet Suvarna News

ಎಂಜಿನೀಯರ್ to ಟೀಂ ಇಂಡಿಯಾ; ಹುಟ್ಟು ಹಬ್ಬದ ಸಂಭ್ರಮದಲ್ಲಿ ಅಶ್ವಿನ್ ಕ್ರಿಕೆಟ್ ಪಯಣ!

ಟೀಂ ಇಂಡಿಯಾ ಸ್ಪಿನ್ನರ್ ಆರ್ ಅಶ್ವಿನ್‌ಗೆ 33ನೇ ವರ್ಷದ ಹುಟ್ಟು ಹಬ್ಬ. ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ದಾಖಲೆ ಬರೆದಿರುವ ಅಶ್ವಿನ್, ಬಿ.ಟೆಕ್ ಎಂಜಿನೀಯರ್ ಆಗೋ ಬದಲು ಕ್ರಿಕೆಟರ್ ಆಗಿ ಯಶಸ್ಸು ಸಾಧಿಸಿದ್ದಾರೆ. ಹುಟ್ಟು ಹಬ್ಬದ ಸಂಭ್ರಮದಲ್ಲಿ ಅಶ್ವಿನ್ ಕ್ರಿಕೆಟ್ ಪಯಣದ ಮೆಲುಕು ಇಲ್ಲಿದೆ.

Happy Birthday Team India cricketer R ashwin turns 33
Author
Bengaluru, First Published Sep 17, 2019, 11:57 AM IST

ಚೆನ್ನೈ(ಸೆ.17): ಟೀಂ ಇಂಡಿಯಾ ಆಫ್ ಸ್ಪಿನ್ನರ್ ಆರ್ ಅಶ್ವಿನ್‌ಗೆ ಹುಟ್ಟು ಹಬ್ಬದ ಸಂಭ್ರಮ. 33ನೇ ವಸಂತಕ್ಕೆ ಕಾಲಿಟ್ಟಿರುವ ಆರ್ ಅಶ್ವಿನ್‌, ಭಾರತ ಕಂಡ ಅತ್ಯಂತ ಶ್ರೇಷ್ಠ ಸ್ಪಿನ್ನರ್.  ಸೆ.17, 1986ರಲ್ಲಿ ಹುಟ್ಟಿದ ಅಶ್ವಿನ್, ಸದ್ಯ ಟೀಂ ಇಂಡಿಯಾ ಟೆಸ್ಟ್ ತಂಡದ ಪ್ರಮುಖ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೊಹ್ಲಿ ಜೊತೆಗೆ ಮುನಿಸು; ಟೀಕೆಗೆ ಆರ್ ಅಶ್ವಿನ್ ತಿರುಗೇಟು!

ಬಿ.ಟೆಕ್ ಎಂಜಿನಿಯರಿಂಗ್ ಪದವಿ ಪಡೆದಿರುವ ಆರ್ ಅಶ್ವಿನ್, ಎಂಜಿನೀಯರ್ ಬದಲು ಕ್ರಿಕೆಟ್ ಆಯ್ಕೆ ಮಾಡಿಕೊಂಡರು. ಕಠಿಣ ಪ್ರಯತ್ನ, ನಿರಂತರ ಅಭ್ಯಾಸದಿಂದ ಅಶ್ವಿನ್ ಭಾರತದ ತಂಡದ ಯಶಸ್ವಿ ಕ್ರಿಕೆಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ಸ್ಪಿನ್ ಮೋಡಿ ಮೂಲಕ ಹಲವು ದಾಖಲೆ ಬರೆದಿರುವ ಆರ್ ಅಶ್ವಿನ್‌ಗೆ ಕ್ರಿಕೆಟಿಗರು ಶುಭಹಾರೈಸಿದ್ದಾರೆ.  

ಇದನ್ನೂ ಓದಿ: ವಿಚಿತ್ರ ಬೌಲಿಂಗ್‌ ಶೈಲಿಯಿಂದ ವಿಕೆಟ್‌ ಕಿತ್ತ ಅಶ್ವಿನ್‌

ಅಕ್ಟೋಬರ್ 2 ರಿಂದ ಆರಂಭಗೊಳ್ಳಲಿರುವ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯದಲ್ಲಿ ಆರ್ ಅಶ್ವಿನ್ ಕಣಕ್ಕಿಳಿಯಲಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆರ್ ಅಶ್ವಿನ್ ಆಯ್ಕೆಯಾಗಿದ್ದರೂ, ಎರಡೂ ಟೆಸ್ಟ್ ಪಂದ್ಯದಲ್ಲಿ ಆಡೋ ಅವಕಾಶ ಸಿಕ್ಕಿರಲಿಲ್ಲ. ಇದೀಗ ತವರಿನಲ್ಲಿ ಅಶ್ವಿನ್‌ಗೆ ಸ್ಥಾನ ಸಿಗುವ ಸಾಧ್ಯತೆಗಳು ಹೆಚ್ಚಿವೆ.

2010ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಆರ್ ಅಶ್ವಿನ್, ಟೆಸ್ಟ್, ಏಕದಿನ ಹಾಗೂ ಟಿ20 ಮೂರು ಮಾದರಿಯಲ್ಲಿ ಮಿಂಚಿದ್ದಾರೆ.

Happy Birthday Team India cricketer R ashwin turns 33

ಆರ್ ಅಶ್ವಿನ್ 65 ಟೆಸ್ಟ್ ಪಂದ್ಯದಲ್ಲಿ 342 ವಿಕೆಟ್ ಕಬಳಿಸಿರುವ ಅಶ್ವಿನ್, ಏಕದಿನದಲ್ಲಿ 150 ಹಾಗೂ ಟಿ20ಯಲ್ಲಿ 52 ವಿಕೆಟ್ ಕಬಳಿಸಿದ್ದಾರೆ. 

Happy Birthday Team India cricketer R ashwin turns 33

ಟೆಸ್ಟ್ ಮಾದರಿಯಲ್ಲಿ ಆರ್ ಅಶ್ವಿನ್ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿಯೂ ಗುರುತಿಸಿಕೊಂಡಿದ್ದಾರೆ.  4 ಸೆಂಚುರಿ ಸಿಡಿಸೋ ಮೂಲಕ ದಾಖಲೆ ಬರೆದಿದ್ದಾರೆ.

Happy Birthday Team India cricketer R ashwin turns 33

ಆರ್ ಅಶ್ವಿನ್ ದಾಖಲೆ: 

  • ಅತೀ ವೇಗದಲ್ಲಿ 200 ಟೆಸ್ಟ್ ವಿಕೆಟ್ ಕಬಳಿಸಿದ ಭಾರತದ ಮೊದಲ ಹಾಗೂ ವಿಶ್ವದ 2ನೇ ಬೌಲರ್
  • ಒಂದೇ ಟೆಸ್ಟ್ ಪಂದ್ಯದಲ್ಲಿ ಸೆಂಚುರಿ ಹಾಗೂ 5 ವಿಕೆಟ್ ಕಬಳಿಸಿದ ಭಾರತದ ಮೊದಲ ಕ್ರಿಕೆಟಿಗ(ಎರಡು ಬಾರಿ)
  • ಪದಾರ್ಪಣಾ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ 3ನೇ ಭಾರತೀಯ ಕ್ರಿಕೆಟಿಗ
  • 4 ಪಂದ್ಯದ ಟೆಸ್ಟ್ ಸರಣಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಭಾರತದ ಮೊದಲ ಕ್ರೆಕೆಟಿಗ(28 ವಿಕೆಟ್)
  • 7ನೇ ವಿಕೆಟ್‌ಗೆ ರೋಹಿತ್ ಶರ್ಮಾ ಜೊತೆ ಭಾರತದ ಗರಿಷ್ಠ ಜೊತೆಯಾಟ(280 ರನ್)
  • ಟಿ20 ಕ್ರಿಕೆಟ್‌ನಲ್ಲಿ 50 ಲಿಕೆಟ್ ಕಬಳಿಸಿದ ಮೊದಲ ಭಾರತೀಯ
  • ಅತೀ ವೇಗದಲ್ಲಿ 300 ಟೆಸ್ಟ್ ವಿಕೆಟ್ ಕಬಳಿಸಿದ ವಿಶ್ವದ ಬೌಲರ್(54 ಟೆಸ್ಟ್)
Follow Us:
Download App:
  • android
  • ios