ವಿರಾಟ್ ಕೊಹ್ಲಿ ಹಾಗೂ  ಆರ್ ಅಶ್ವಿನ್ ನಡುವೆ ಮನಸ್ತಾಪವಿದೆಯಾ? ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಮಾತುಗಳು ಕೇಳಿ ಬರುತ್ತಿದೆ. ಇದೀಗ ಟಿಕೆಗಳಿಗೆ ಅಶ್ವಿನ್ ಉತ್ತರ ನೀಡಿದ್ದಾರೆ.

ಆ್ಯಂಟಿಗಾ(ಆ.27): ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ 318 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಇದೀಗ 2ನೇ ಪಂದ್ಯಕ್ಕೆ ತಯಾರಿ ಆರಂಭಗೊಂಡಿದೆ. ಆದರೆ ತಂಡದೊಳಗೆ ಎಲ್ಲವೂ ಸರಿಯಿಲ್ಲ ಮಾತು ಕೇಳಿ ಬರುತ್ತಿದೆ. ಅದರಲ್ಲೂ ನಾಯಕ ವಿರಾಟ್ ಕೊಹ್ಲಿ ಹಾಗೂ ಆರ್ ಅಶ್ವಿನ್ ನಡುವಿನ ಸಂಬಂಧ ಕೆಟ್ಟಿದೆ. ಹೀಗಾಗಿ ಅಶ್ವಿನ್‌ಗೆ ಸ್ಥಾನ ನೀಡಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ಕುರಿತು ಟ್ವೀಟ್ ಮೂಲಕ ಹಲವರು ಪ್ರಶ್ನಿಸಿದ್ದಾರೆ. ಇದೀಗ ಅಶ್ವಿನ್ ಎಲ್ಲಾ ಆರೋಪಗಳಿಗೆ ಉತ್ತರ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Scroll to load tweet…

ಇದನ್ನೂ ಓದಿ: ವಿಚಿತ್ರ ಬೌಲಿಂಗ್‌ ಶೈಲಿಯಿಂದ ವಿಕೆಟ್‌ ಕಿತ್ತ ಅಶ್ವಿನ್‌

ಮೊದಲ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಹೊರಗಿಡಲು, ಕೊಹ್ಲಿ ಜೊತೆಗಿನ ಮುಸುಕಿನ ಗುದ್ದಾಟವೇ ಕಾರಣ. ಇದರಿಂದ ತಂಡದಿಂದಲೂ ಕೊಕ್ ನೀಡಲಾಗಿದೆ ಎಂದು ಟ್ವಿಟರ್‌ನಲ್ಲಿ ಟೀಕೆಗಳು ಕೇಳಿಬಂದಿತ್ತು. ಆದರೆ ಕೊಹ್ಲಿ ಜೊತೆಗೆ ಯಾವುದೇ ಮನಸ್ತಾಪವಿಲ್ಲ ಎಂದು ಅಶ್ವಿನ್ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ನಮ್ಮೊಳಗೆ ಯಾವುದೇ ಜಗಳವಿಲ್ಲ. ಜೊತೆಯಾಗಿದ್ದೇವೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.

Scroll to load tweet…

ಇದನ್ನೂ ಓದಿ:ಮೊದಲ ಟೆಸ್ಟ್ ನಲ್ಲಿ ವಿಂಡೀಸ್ ಬಗ್ಗುಬಡಿದ ಟೀಂ ಇಂಡಿಯಾ

ಸಮುದ್ರ ತೀರ ಹಾಗೂ ಸೂರ್ಯಾಸ್ತ ಅತ್ಯುತ್ತಮ ಸಂದರ್ಭ ಎಂದು ಅಶ್ವಿನ್ ಪೋಟೋ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಬಳಿಕ ಅಶ್ವಿನ್ ಮೇಲಿನ ಟೀಕೆಗಳು ಕಡಿಮೆಯಾಗಿದೆ.