ಬೆಂಗಳೂರು(ಏ.24): ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಇದೀಗ GS Caltex ಕಂಪನಿ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.  ಇದೀಗ ಭಾರತದಲ್ಲಿ ದಕ್ಷಿಣ ಕೊರಿಯಾ ಮೂಲದ ಈ ಕಂಪನಿಯ ಪ್ರೀಮಿಯಂ ಲ್ಯೂಬ್ರಿಕೆಂಟ್ ಉತ್ಪನ್ನಗಳ ಪ್ರಚಾರದಲ್ಲಿ ಧವನ್ ಕಾಣಿಸಿಕೊಳ್ಳಲಿದ್ದಾರೆ. 

ಇದನ್ನೂ ಓದಿ: ಅಶ್ವಿನ್‌ಗೆ ಡ್ಯಾನ್ಸ್ ಮೂಲಕ ತಿರುಗೇಟು ನೀಡಿದ ಧವನ್- ವಿಡಿಯೋ ವೈರಲ್!

ಲ್ಯೂಬ್ರಿಕೆಂಟ್ ಕಂಪನಿಯ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಧವನ್, ಸಂತಸ ವ್ಯಕ್ತಪಡಿಸಿದ್ದಾರೆ. ಈ ಕಂಪನಿಯ ಸದಸ್ಯನಾಗಿರುವುದು ಹೆಮ್ಮೆ ಎನಿಸಿದೆ. ಮುಂದಿನ ದಿನಗಳಲ್ಲಿ ಜಿಎಸ್ ಕಾಲ್‌ಟೆಕ್ಸ್ ಜೊತೆ ಎಕ್ಸೈಟಿಂಗ್ ಇನ್ನಿಂಗ್ಸ್ ಆಟವಾಡುವ ವಿಶ್ವಾಸ ನನಗಿದೆ ಎಂದು ಧವನ್ ಹೇಳಿದರು. 

ಇದನ್ನೂ ಓದಿ: ಧವನ್ ಹೋರಾಟದ ಮುಂದೆ ಮಂಕಾಯ್ತು ರಸೆಲ್ ಅಬ್ಬರ- ಡೆಲ್ಲಿಗೆ 7 ವಿಕೆಟ್ ಗೆಲುವು!

ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ  ಅಬ್ಬರಿಸುತ್ತಿರುವ ಧವನ್, 11 ಪಂದ್ಯಗಳಿಂದ 401 ರನ್ ಸಿಡಿಸಿದ್ದಾರೆ. ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲಿರುವ ಧವನ್ ಅಭಿಮಾನಿಗಳ ನಿರೀಕ್ಷೆ ಇಮ್ಮಡಿಗೊಳಿಸಿದ್ದಾರೆ.