ದೆಹಲಿ(ಏ.21): 12ನೇ ಆವೃತ್ತಿ ಐಪಿಎಲ್ ಟೂರ್ನಿ ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ. ಪ್ರತಿ ಪಂದ್ಯದಲ್ಲಿನ ಒಂದಲ್ಲಾ ಒಂದು ಘಟನೆ ಅಭಿಮಾನಿಗಳ ಮನರಂಜನೆ ನೀಡಿದೆ. ಇದೀಗ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಆರ್ ಅಶ್ವಿನ್ ಮಂಕಡಿಂಗ್ ರನೌಟ್ ಎಚ್ಚರಿಕೆಗೆ, ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಶಿಖರ್ ಧವನ್ ನೀಡಿದ ತಿರುಗೇಟು ವೈರಲ್ ಆಗಿದೆ.

ಇದನ್ನೂ ಓದಿ: ಡೆಲ್ಲಿ ಆಲ್ರೌಂಡ್‌ ಆಟಕ್ಕೆ ಪಂಜಾಬ್‌ ಸುಸ್ತು!

ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಮಂಕಡಿಂಗ್ ರನೌಟ್ ಮಾಡಿದ ಆರ್ ಅಶ್ವಿನ್ ಭಾರಿ ಟೀಕೆಗೆ ಗುರಿಯಾಗಿದ್ದರು. ಈ ರನೌಟ್ ಬಳಿಕ ಅಶ್ವಿನ್ ಬೌಲಿಂಗ್ ವೇಳೆ ನಾನ್ ಸ್ಟ್ರೈಕ್ ಬ್ಯಾಟ್ಸ್‌ಮನ್ ಎಚ್ಚರಿಕೆಯಿಂದ್ದಾರೆ. ಡೆಲ್ಲಿ ವಿರುದ್ದದ ಪಂದ್ಯದಲ್ಲಿ ಅಶ್ವಿನ್ ಬೌಲಿಂಗ್ ವೇಳೆ, ಶಿಖರ್ ಧವನ್‌ಗೆ ಮಂಕಡಿಂಗ್ ರನೌಟ್ ಎಚ್ಚರಿಕೆ ನೀಡಿದರು. ಮರುಕ್ಷಣವೇ ಧವನ್, ವಿಚಿತ್ರ ಡ್ಯಾನ್ಸ್ ಮಾಡೋ ಮೂಲಕ ಅಶ್ವಿನ್‌ಗೆ ತಿರುಗೇಟು ನೀಡಿದರು.

 

 

ಇದನ್ನೂ ಓದಿ: ಕೆಕೆಆರ್‌ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ರಸೆಲ್ ಅಸಮಾಧಾನ..?

ಆರ್ ಅಶ್ವಿನ್ ಹಾಗೂ ಶಿಖರ್ ಧವನ್ ನಡುವಿನ ಈ ಘಟನೆ ಇದೀಗ ವೈರಲ್ ಆಗಿದೆ. ಮಕಂಡಿಂಗ್ ತಿರುಗೇಟು ನೀಡಿದ ಧವನ್ ಅರ್ಧಶತಕ ಸಿಡಿಸಿ ಮಿಂಚಿದರು. ಇನ್ನು ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್ ಕೂಡ ಹಾಪ್ ಸೆಂಚುರಿ ಸಿಡಿಸಿದರು. ಈ ಮೂಲಕ ಪಂಜಾಬ್ ವಿರುದ್ದ ಡೆಲ್ಲಿ 5 ವಿಕೆಟ್ ಗೆಲುವು ಸಾಧಿಸಿತು.