ವಿಶ್ವಕಪ್ ಹೀರೋ ಕಪಿಲ್ ದೇವ್‌ಗೆ 60ನೇ ವರ್ಷದ ಹುಟ್ಟುಹಬ್ಬ ಸಂಭ್ರಮ

ಟೀಂ ಇಂಡಿಯಾಗೆ ಮೊದಲ ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ಕಪಿಲ್ ದೇವ್‌ಗೆ ಹುಟ್ಟು ಹಬ್ಬದ ಸಂಭ್ರಮ. ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಭಾಷ್ಯ ಬರೆದ ಕಪಿಲ್ ಬರ್ತ್ ಡೆ ಸಂಭ್ರಮ ವಿವರ ಇಲ್ಲಿದೆ.

Former Indian captain Kapil dev turns to 60 who brought Indias first world cup

ಮುಂಬೈ(ಜ.06): ದಿಗ್ಗಜ ಕ್ರಿಕೆಟಿಗರನ್ನ ಹೊಂದಿದ ವಿಂಡೀಸ್ ಕ್ರಿಕೆಟ್‌ನಲ್ಲಿ ಅಧಿಪತ್ಯ ಸಾಧಿಸಿದ್ಧ ಕಾಲ ಅದು. ಇಷ್ಟೇ ಅಲ್ಲ ವಿಂಡೀಸ್  ಸತತ 2 ಬಾರಿ ವಿಶ್ವಕಪ್ ಗೆದ್ದು ಇತಿಹಾಸ ರಚಿಸಿತ್ತು. ಆದರೆ ಭಾರತ ಕ್ರಿಕೆಟ್‌ನಲ್ಲಿ ಅಂಬೆಗಾಲಿಡುತ್ತಿತ್ತು. 1983ರಲ್ಲಿ ಕಪಿಲ್ ದೇವ್ ನಾಯಕತ್ವದ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನ ಮಣಿಸಿ ಚೊಚ್ಚಲ ವಿಶ್ವಕಪ್ ಗೆದ್ದು ಸಂಭ್ರಮಿಸಿತು.

ಇದನ್ನೂ ಓದಿ: ಗೇಮ್ ಆಫ್ ಥ್ರೋನ್ಸ್ ಪಾತ್ರಕ್ಕೆ ಪೂಜಾರ ಹೋಲಿಕೆ

1983ರ ವಿಶ್ವಕಪ್ ಟೂರ್ನಿಯ ಪ್ರಮುಖ ರೂವಾರಿ ನಾಯಕ ಕಪಿಲ್ ದೇವ್. ತಮ್ಮ ಅಲ್ರೌಂಡರ್ ಪದರ್ಶನ ಹಾಗೂ ತಂಡದ ಸಂಘಟಿತ ಪ್ರದರ್ಶನದಿಂದ ಟೀಂ ಇಂಡಿಯಾ ಇತಿಹಾಸ ರಚಿಸಿತು. ಹೀಗೆ ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಟ್ಟ ಕಪಿಲ್ ದೇವ್‌ಗಿಂದು 60ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ.

ಇದನ್ನೂ ಓದಿ: 2 ಕೋಟಿ ಬಹುಮಾನ ಕೇಳಿದ್ದಕ್ಕೆ ಸಚಿವನಿಗೆ ಸಿಟ್ಟು..!

1978ರಲ್ಲಿ ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಕಪಿಲ್ ದೇವ್ ಭಾರತ ಕಂಡ ಅತ್ಯದ್ಬುತ ಆಟಗಾರ. ಭಾರತದ ಪರ 131 ಟೆಸ್ಟ್ ಪಂದ್ಯದಿಂದ 5248 ರನ್ ಹಾಗೂ 434 ವಿಕೆಟ್ ಕಬಳಿಸಿದ್ದಾರೆ.  ಇನ್ನು 225 ಏಕದಿನ ಪಂದ್ಯದಿಂದ 3783 ರನ್ ಹಾಗೂ 253 ವಿಕೆಟ್ ಉರುಳಿಸಿದ್ದಾರೆ.

Latest Videos
Follow Us:
Download App:
  • android
  • ios