ಸಿಡ್ನಿ(ಜ.06): ಭಾರತ ತಂಡದ ಟೆಸ್ಟ್ ತಜ್ಞ ಚೇತೇಶ್ವರ ಪೂಜಾರ, ತಮ್ಮ ಸಹ ಆಟಗಾರರು ತಮ್ಮನ್ನು ಗೇಮ್ ಆಫ್ ಥ್ರೋನ್ಸ್ ಚಲನಚಿತ್ರದ ‘ವೈಟ್ ವಾಕರ್’ ಪಾತ್ರಕ್ಕೆ ಹೋಲಿಸಿ ಕಿಚಾಯಿಸುತ್ತಾರೆಎಂದು ಬಿಸಿಸಿಐ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಬ್ಯಾಡ್ ಲೈಟ್ ಆಸರೆ- ಆಸ್ಟ್ರೇಲಿಯಾ ಸೋಲು 5ನೇ ದಿನಕ್ಕೆ ಮುಂದೂಡಿಕೆ!

ಬಿಸಿಸಿಐ ಇದನ್ನು ತನ್ನ ಅಧಿಕೃತ ಟ್ವೀಟರ್ ಖಾತೆಯಲ್ಲಿ ಬರೆದುಕೊಂಡಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಪೂಜಾರಗೆ, ಅಶ್ವಿನ್ ಮತ್ತು ಶಂಕರ್ ಬಸು ಸರ್ ಅವರು ನನಗೆ ಆ ಹೆಸರಿನಿಂದ ಕರೆಯುತ್ತಾರೆ. ಅವರೊಂದಿಗೆ ಇತರರು ನನ್ನ ‘ಚಳಿಗಾಲ ಬಂತು’ ಎನ್ನುವುದಕ್ಕೆ ಬದಲು ‘ಪೂಜಾರ ಬಂದರು’ ಎಂದು ಕರೆಯುತ್ತಾರೆ. ಇದು ನಾನು ತಂಡಕ್ಕೆ ನೀಡಿರುವ ಕಾಣಿಕೆಯನ್ನು ಗುರುತಿಸುವುದಕ್ಕೆ ಅತ್ಯುತ್ತಮ ದಾರಿ’ ಎಂದು ಪೂಜಾರ ಸಂದರ್ಶನದಲ್ಲಿ ಹೇಳಿದ್ದಾರೆ.

ಆಸಿಸ್‌ನಲ್ಲಿ ಅಬ್ಬರಿಸುತ್ತಿರುವ ಪೂಜಾರಗೆ ಬಿಸಿಸಿಐನಿಂದ ಬಂಪರ್ ಗಿಫ್ಟ್!

ಬಾರ್ಡರ್-ಗವಾಸ್ಕರ್ ಸರಣಿಯ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪೂಜಾರ 3 ಶತಕ ಸಹಿತ 521 ರನ್ ಬಾರಿಸಿದ್ದಾರೆ. ಸಿಡ್ನಿ ಟೆಸ್ಟ್’ನಲ್ಲಿ ಕೇವಲ 7 ರನ್’ಗಳಿಂದ ಪೂಜಾರ ದ್ವಿಶತಕ ವಂಚಿತರಾಗಿದ್ದಾರೆ. ಟೀಂ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲುವಿನ ಹೊಸ್ತಿಲಲ್ಲಿದ್ದು, ಈ ಗೆಲುವಿನಲ್ಲಿ ಪೂಜಾರ ಪ್ರಮುಖ ಪಾತ್ರವಹಿಸಿದ್ದಾರೆ.