ಮುಂಬೈ(ಏ.22): ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಯಲ್ಲಿನ ಪ್ರತಿಭೆಯನ್ನು ಮೊದಲು ಗುರುತಿಸಿದ್ದೇ ನಾನು. ಅವರನ್ನು ತಂಡಕ್ಕೆ ಆಯ್ಕೆ ಮಾಡಿದಾಗ ಧೋನಿ ಹಾಗೂ ಕೋಚ್‌ ಗ್ಯಾರಿ ಕಸ್ರ್ಟನ್‌ಗೆ ಕೊಹ್ಲಿ ಯಾರು ಎಂದೇ ಗೊತ್ತಿರಲಿಲ್ಲ ಎಂದು ಬಿಸಿಸಿಐ ಆಯ್ಕೆ ಸಮಿತಿಯ ಮಾಜಿ ಮುಖ್ಯಸ್ಥ ದಿಲೀಪ್‌ ವೆಂಗ್‌ಸರ್ಕಾರ್‌ ಹೇಳಿದ್ದಾರೆ. 

ಅಂದು ದಿಲೀಪ್ ವೆಂಗಸರ್ಕರ್ ತಮ್ಮ ವೃತ್ತಿಜೀವನ ತ್ಯಾಗ ಮಾಡದಿದ್ದರೆ ಕೊಹ್ಲಿ ಉದಯವಾಗುತ್ತಿರಲಿಲ್ಲ : ಸ್ಫೋಟಕ ಸತ್ಯ ಬಿಚ್ಚಿಟ್ಟ ಮಾಜಿ ಆಟಗಾರ

ಭಾನುವಾರ ಇಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಅಂಡರ್‌-19 ವಿಶ್ವಕಪ್‌ ಬಳಿಕ ಆಸ್ಪ್ರೇಲಿಯಾದಲ್ಲಿ ಉದಯೋನ್ಮುಖ ಆಟಗಾರರ ಟೂರ್ನಿ ನಡೆಯಿತು. ಮೊದಲ ಪಂದ್ಯದಲ್ಲೇ ಕೊಹ್ಲಿ ಶತಕ ಬಾರಿಸಿದರು. ಆ ವೇಳೆ ನಾನು ಕ್ರೀಡಾಂಗಣದಲ್ಲಿದ್ದೆ. ಮುಂದಿನ ಆಯ್ಕೆ ಸಮಿತಿ ಸಭೆಯಲ್ಲಿ ಕೊಹ್ಲಿಯನ್ನು ಭಾರತ ತಂಡಕ್ಕೆ ಆಯ್ಕೆ ಮಾಡಬೇಕು ಎಂದು ಪ್ರಸ್ತಾಪಿಸಿದೆ. ಧೋನಿ ಹಾಗೂ ಕಸ್ರ್ಟನ್‌ ಆರಂಭದಲ್ಲಿ ವಿರೋಧಿಸಿದರು. ಆದರೂ ನಾನು ಕೊಹ್ಲಿಯನ್ನು ಆಯ್ಕೆ ಮಾಡಿದೆ’ ಎಂದು ಹೇಳಿದ್ದಾರೆ.

ವೆಂಗ್'ಸರ್ಕಾರ ಆರೋಪಕ್ಕೆ ಖಡಕ್ ತಿರುಗೇಟು ನೀಡಿದ ಶ್ರೀನಿ

ವಿರಾಟ್ ಕೊಹ್ಲಿ ಆಗಸ್ಟ್ 18, 2008ರಂದು ಶ್ರೀಲಂಕಾ ವಿರುದ್ಧ ಕಣಕ್ಕಿಳಿಯುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದರು. ಇದೀಗ ಕೊಹ್ಲಿ ಮೇ 30ರಂದು ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.