ಅಂದು ದಿಲೀಪ್ ವೆಂಗಸರ್ಕರ್ ತಮ್ಮ ವೃತ್ತಿಜೀವನ ತ್ಯಾಗ ಮಾಡದಿದ್ದರೆ ಕೊಹ್ಲಿ ಉದಯವಾಗುತ್ತಿರಲಿಲ್ಲ : ಸ್ಫೋಟಕ ಸತ್ಯ ಬಿಚ್ಚಿಟ್ಟ ಮಾಜಿ ಆಟಗಾರ

First Published 8, Mar 2018, 4:55 PM IST
Backing of Virat Kohli in 2008 led to my removal as chief selector
Highlights

ವೆಂಗಸರ್ಕರ್ ಅವರಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದ್ದ ವಿರಾಟ್ ಕೊಹ್ಲಿ ಆಯ್ಕೆ ಮಾಡಲು ಉತ್ಸುಕರಾಗಿದ್ದರು. ಆದರೆ ಶ್ರೀನಿವಾಸನ್ ಅವರಿಗೆ ತಮಿಳುನಾಡು ತಂಡ ಹಾಗೂ ಅವರದೆ ಮಾಲಿಕತ್ವದ ಚೆನ್ನೈ ಸೂಪರ್ ಕಿಂಗ್ಸ್'ನ ಎಸ್. ಬದರಿನಾಥ್ ಮೇಲೆ ಹೆಚ್ಚು ಒಲವಿತ್ತು. ವಿರಾಟ್ 19 ವರ್ಷವಿದ್ದರೆ, ಬದರಿ'ಗೆ 29 ವರ್ಷ ವಯಸ್ಸಾಗಿತ್ತು.

ನವದೆಹಲಿ(ಮಾ.08): ವಿಶ್ವ ಕ್ರಿಕೆಟ್ ರಂಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಭಾರತ ಕ್ರಿಕೆಟ್ ತಂಡದ ನಾಯಕ ಹಾಗೂ ಸ್ಫೋಟಕ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ಮಾಜಿ ಆಟಗಾರ ದಿಲೀಪ್ ವೆಂಗಸರ್ಕರ್ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ.

2008ರಲ್ಲಿ ದಿಲೀಪ್ ವೆಂಗಸರ್ಕರ್ ಬಿಸಿಸಿಐನ ಆಯ್ಕೆ ಸಮಿತಿ ಅಧ್ಯಕ್ಷರಾಗಿದ್ದರು. ಆಗ ತಾನೆ ಅಂಡರ್ 19 ವಿಶ್ವಕಪ್'ನಲ್ಲಿ ನಾಯಕರಾಗಿ ಭಾರತ ತಂಡ ಜಯಗಳಿಸಿತ್ತು. ಕೊಹ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಆಯ್ಕೆ ಸಮಿತಿಯ ಅದೇ ಸಮಯದಲ್ಲಿ ಶ್ರೀಲಂಕಾ ಪ್ರವಾಸಕ್ಕೆ ನೂತನ ತಂಡವನ್ನು ಆಯ್ಕೆ ಮಾಡಲು ತಯಾರಾಗುತ್ತಿತ್ತು. ಎನ್. ಶ್ರೀನಿವಾಸನ್ ಬಿಸಿಸಿಐನ ಅಧ್ಯಕ್ಷರಾಗಿದ್ದರು.

ವೆಂಗಸರ್ಕರ್ ಅವರಿಗೆ ಹೆಚ್ಚು ಪ್ರವರ್ಧಮಾನಕ್ಕೆ ಬರುತ್ತಿದ್ದ ವಿರಾಟ್ ಕೊಹ್ಲಿ ಆಯ್ಕೆ ಮಾಡಲು ಉತ್ಸುಕರಾಗಿದ್ದರು. ಆದರೆ ಶ್ರೀನಿವಾಸನ್ ಅವರಿಗೆ ತಮಿಳುನಾಡು ತಂಡ ಹಾಗೂ ಅವರದೆ ಮಾಲಿಕತ್ವದ ಚೆನ್ನೈ ಸೂಪರ್ ಕಿಂಗ್ಸ್'ನ ಎಸ್. ಬದರಿನಾಥ್ ಮೇಲೆ ಹೆಚ್ಚು ಒಲವಿತ್ತು. ವಿರಾಟ್ 19 ವರ್ಷವಿದ್ದರೆ, ಬದರಿ'ಗೆ 29 ವರ್ಷ ವಯಸ್ಸಾಗಿತ್ತು.

ಆಯ್ಕೆ ಸಮಿತಿಯಿಂದ ದಿಲೀಪ್'ಗೆ ಕೋಕ್ ಕೊಟ್ಟ ಶ್ರೀನಿವಾಸನ್

ಭಾರತ ತಂಡದಲ್ಲಿ ಯುವ ಪ್ರತಿಭೆಗೆ ಅವಕಾಶ ಮಾಡಿಕೊಡಲು ವೆಂಗಸರ್ಕರ್ ಕೊಹ್ಲಿಯನ್ನು ಆಯ್ಕೆ ಮಾಡಿದ್ದರು. ಆಗ ನಾಯಕರಾಗಿದ್ದ ಧೋನಿ ಹಾಗೂ ಕೋಚ್ ಗ್ಯಾರಿ ಕ್ರಿಸ್ಟನ್ ಕೊಹ್ಲಿ ಬಗ್ಗೆ ಸಹಮತವಿರಲಿಲ್ಲ. ಮರುದಿನ ವೆಂಗಸರ್ಕರ್'ಗೆ ಕರೆ ಮಾಡಿದ ಶ್ರೀನಿವಾಸನ್ ಬದರಿನಾಥ್ ಅವರನ್ನು ಆಯ್ಕೆ ಮಾಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಆದರೆ ದಿಲೀಪ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.       

ಮರುದಿನ ದಿಲೀಪ್ ವೆಂಗಸರ್ಕರ್ ಅವರನ್ನು ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೈಬಿಟ್ಟು ಶ್ರೀಕಾಂತ್ ಅವರನ್ನು ನೇಮಿಸಿಕೊಳ್ಳಲಾಗಿತ್ತು. ಅಲ್ಲಿಗೆ ಬಿಸಿಸಿಐನೊಂದಿಗೆ ಇದ್ದ ಸಂಬಂಧ ಬಹುತೇಕ ಮುಕ್ತಾಯವಾಯಿತು. ಅಂದು ನಾನು ಕೊಹ್ಲಿಯನ್ನು ಆಯ್ಕೆ ಮಾಡಿರದಿದ್ದರೆ ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಸಿಗುತ್ತಿತ್ತೋ ಎಂದು ಹೇಳಲಾರೆ' ಎಂದು ತಿಳಿಸಿದ್ದಾರೆ.

61 ವರ್ಷದ ವೆಂಗಸರ್ಕರ್ 116 ಟೆಸ್ಟ್'ಗಳು ಹಾಗೂ 129 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 1983ರ ವಿಶ್ವಕಪ್ ಗೆದ್ದ ತಂಡದಲ್ಲೂ ಇವರು ಆಡಿದ್ದರು.

loader