ಸೌರವ್ ಗಂಗೂಲಿಗೆ ಮತ್ತೆ ಸ್ವಹಿತಾಸಕ್ತಿ ಸಂಕಷ್ಟ!
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್, ವಿ.ವಿ.ಎಸ್. ಲಕ್ಷ್ಮಣ್, ಸಚಿನ್ ತೆಂಡುಲ್ಕರ್ ಸ್ವಹಿತಾಸಕ್ತಿ ಆರೋಪಕ್ಕೆ ಗುರಿಯಾಗಿದ್ದರು. ಮಾಜಿ ನಾಯಕ ಸೌರವ್ ಗಂಗೂಲಿ ಕೂಡಾ ಮತ್ತೊಮ್ಮೆ ಸ್ವಹಿತಾಸಕ್ತಿ ಆರೋಪಕ್ಕೆ ಗುರಿಯಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಮುಂಬೈ[ಸೆ.14]: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿಗೆ ಮತ್ತೊಮ್ಮೆ ಸ್ವಹಿತಾಸಕ್ತಿ ಸಂಕಷ್ಟ ಎದುರಾಗಿದೆ. ‘ಸೌರವ್ ಗಂಗೂಲಿ ಸ್ವಹಿತಾಸಕ್ತಿ ಸಂಘರ್ಷದಲ್ಲಿ ಒಳಪಡಲಿದ್ದು, ಕೇವಲ ಒಂದು ಹುದ್ದೆಯಲ್ಲಿ ಮುಂದುವರಿಯಬೇಕು. ತಮ್ಮ ಉಳಿದ ಹುದ್ದೆಗಳನ್ನು ತ್ಯಜಿಸಬೇಕು’ ಎಂದು ಬಿಸಿಸಿಐ ನೈತಿಕ ಅಧಿಕಾರಿ ಡಿ.ಕೆ ಜೈನ್ ಸೂಚಿಸಿದ್ದಾರೆ.
ಸ್ವಹಿತಾಸಕ್ತಿಗೆ ದ್ರಾವಿಡ್ ಒಳಪಡಲ್ಲ: BCCI ಸ್ಪಷ್ಟನೆ
‘ಸೌರವ್ 3 ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರೂ ತಮ್ಮ ಪ್ರಭಾವ ಬಳಸಿರಬೇಕಿಲ್ಲ. ಆದರೆ ಒಂದಕ್ಕಿಂತ ಹೆಚ್ಚು ಹುದ್ದೆಗಳನ್ನು ಅಲಂಕರಿಸುವ ಮೂಲಕ ಸ್ವಹಿತಾಸಕ್ತಿ ಸಾಧ್ಯತೆಯನ್ನು ಹೆಚ್ಚಿಸುತ್ತಿದ್ದಾರೆ. ನಿಯಮದ ಪ್ರಕಾರ ಕೇವಲ ಒಂದು ಹುದ್ದೆಯಲ್ಲಿ ಮುಂದುವರಿಯುವಂತೆ ಬಿಸಿಸಿಐ ಖಚಿತಪಡಿಸಲಿ’ ಎಂದು ಜೈನ್ ತಿಳಿಸಿದ್ದಾರೆ.
‘ಡಬಲ್ ಟಿ20 ವಿಶ್ವಕಪ್’ಗೆ ಟೀಂ ಇಂಡಿಯಾ ಸಿದ್ಧತೆ
ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಸೌರವ್, ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಸಲಹೆಗಾರ ಆಗಿದ್ದಾರೆ. ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ)ಯಲ್ಲೂ ಗಂಗೂಲಿ ಇದ್ದರು, ಆದರೆ ಸ್ವಹಿತಾಸಕ್ತಿ ದೂರು ದಾಖಲಾದಂತೆ ರಾಜೀನಾಮೆ ನೀಡಿದ್ದರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಮುಖ್ಯಸ್ಥ ರಾಹುಲ್ ದ್ರಾವಿಡ್ ಸ್ವಹಿತಾಸಕ್ತಿ ಆರೋಪ ಎದುರಿಸಿದಾಗ ಗಂಗೂಲಿ, ‘ಸ್ವಹಿತಾಸಕ್ತಿ ಪದ ಇತ್ತೀಚೆಗೆ ಫ್ಯಾಷನ್ ಆಗಿದೆ’ ಎಂದು ಖಂಡಿಸಿದ್ದರು.