ಫಿಫಾ ವಿಶ್ವಕಪ್ 2018: ವಿಶ್ವಕಪ್ ಚೆಂಡು ಹಿಡಿಯಲಿರುವ ರಾಜ್ಯದ ರಿಷಿ
ಪ್ರತಿ ಪಂದ್ಯದ ಆರಂಭಕ್ಕೂ ಮುನ್ನ ಇದೇ ರೀತಿ ಒಬ್ಬೊಬ್ಬ ಚಿಣ್ಣರು ಅಂಪೈರ್‌ಗಳ ಕೈಗೆ ಚೆಂಡನ್ನು ಹಸ್ತಾಂತರಿಸಲಿದ್ದು, ಇದಕ್ಕಾಗಿ ವಿಶ್ವದೆಲ್ಲೆಡೆಯಿಂದ ಒಟ್ಟು 64 ಚಿಣ್ಣರು ಆಯ್ಕೆಯಾಗಿದ್ದಾರೆ. ಕರ್ನಾಟಕದ ರಿಷಿ ತೇಜ್, ಜೂ.18ರಂದು ಬೆಲ್ಜಿಯಂ-ಪನಾಮ ಪಂದ್ಯದ ವೇಳೆ ಚೆಂಡನ್ನು ಹಸ್ತಾಂತರಿಸಲಿದ್ದಾರೆ.
ನವದೆಹಲಿ[ಜೂ.12]: ಇದೇ ಜೂ.14ರಿಂದ ಆರಂಭಗೊಳ್ಳಲಿರುವ ಫುಟ್ಬಾಲ್ ವಿಶ್ವಕಪ್ ಜ್ವರ ದಿನ ಕಳೆದಂತೆ ಏರತೊಡಗಿದ್ದು, ಕರ್ನಾಟಕದ ರಿಷಿ ತೇಜ್ (10) ಹಾಗೂ ತಮಿಳುನಾಡಿನ ನಥಾನಿಯಾ (11] ಪಂದ್ಯ ಆರಂಭಕ್ಕೂ ಮುನ್ನ ಚೆಂಡನ್ನು ಅಂಪೈರ್‌ಗಳಿಗೆ ಹಸ್ತಾಂತರಿಸಲಿದ್ದಾರೆ.
ಪ್ರತಿ ಪಂದ್ಯದ ಆರಂಭಕ್ಕೂ ಮುನ್ನ ಇದೇ ರೀತಿ ಒಬ್ಬೊಬ್ಬ ಚಿಣ್ಣರು ಅಂಪೈರ್‌ಗಳ ಕೈಗೆ ಚೆಂಡನ್ನು ಹಸ್ತಾಂತರಿಸಲಿದ್ದು, ಇದಕ್ಕಾಗಿ ವಿಶ್ವದೆಲ್ಲೆಡೆಯಿಂದ ಒಟ್ಟು 64 ಚಿಣ್ಣರು ಆಯ್ಕೆಯಾಗಿದ್ದಾರೆ. ಕರ್ನಾಟಕದ ರಿಷಿ ತೇಜ್, ಜೂ.18ರಂದು ಬೆಲ್ಜಿಯಂ-ಪನಾಮ ಪಂದ್ಯದ ವೇಳೆ ಚೆಂಡನ್ನು ಹಸ್ತಾಂತರಿಸಲಿದ್ದಾರೆ.
ಇದನ್ನು ಓದಿ: ಫಿಫಾ ವಿಶ್ವಕಪ್ ಗೆಲ್ಲೋ ನೆಚ್ಚಿನ ತಂಡಕ್ಕೆ ಈ 3 ತಂಡಗಳು ನೀಡಬಹುದು ಶಾಕ್
ಇದಕ್ಕಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿವಿಧ ರಾಜ್ಯಗಳಿಂದ 1600 ಮಕ್ಕಳು ಆಯ್ಕೆಗೊಂಡಿದ್ದರು. ಇದರಲ್ಲಿ 50 ಮಕ್ಕಳನ್ನು ಅಂತಿಮಗೊಳಿಸಲಾಗಿತ್ತು. ಕಳೆದ ತಿಂಗಳು ಸುನಿಲ್ ಚೆಟ್ರಿ ನೇತೃತ್ವದಲ್ಲಿ ಗುರುಗ್ರಾಮದಲ್ಲಿ ನಡೆದ ಅಂತಿಮ ಹಂತದ ಆಯ್ಕೆ ಟ್ರಯಲ್ಸ್‌ನಲ್ಲಿ ಕೊನೆಗೆ ರಿಷಿ ಆಯ್ಕೆಗೊಂಡಿದ್ದಾರೆ. ಚೆಂಡು ಹಸ್ತಾಂತರಿಸುವವರನ್ನು ‘ಆಫಿಶಿಯಲ್ ಮ್ಯಾಚ್ ಬಾಲ್ ಕ್ಯಾರಿಯರ್ (ಒಎಂಬಿಸಿ)’ ಎನ್ನಲಾಗುತ್ತದೆ.
ಇದನ್ನು ಓದಿ: ಫಿಫಾ ವಿಶ್ವಕಪ್ 2018: ಬ್ರೆಜಿಲ್ ಪ್ರಶಸ್ತಿ ಗೆಲ್ಲಲು ಇರೋ 4 ಕಾರಣಗಳೇನು?