ಫಿಫಾ ವಿಶ್ವಕಪ್ 2018: ಬ್ರೆಜಿಲ್ ಪ್ರಶಸ್ತಿ ಗೆಲ್ಲಲು ಇರೋ 4 ಕಾರಣಗಳೇನು?

ರಷ್ಯಾದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಯಾವ ತಂಡ ಪ್ರಶಸ್ತಿ ಗೆಲ್ಲುತ್ತೆ ಅನ್ನೋ ಕುತೂಹಲ ಎಲ್ಲರಲ್ಲಿ ಮನೆಮಾಡಿದೆ. ಆದರೆ ಈ ಬಾರಿ ಬ್ರೆಜಿಲ್ ಪ್ರಶಸ್ತಿ ಗೆಲ್ಲಲಿದೆ ಅನ್ನೋ ಭವಿಷ್ಯ ಎಲ್ಲೆಡೆ ಹರಿದಾಡುತ್ತಿದೆ. ಹಾಗಾದರೆ ಬ್ರೆಜಿಲ್ ಪ್ರಶಸ್ತಿ ಗೆಲ್ಲಲು ಇರೋ ಕಾರಣಗಳೇನು. ಇಲ್ಲಿದೆ.

Why Brazil will win the World Cup again

ರಷ್ಯಾ(ಜೂನ್.10): ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್ 5 ಬಾರಿ ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ. 2014ರಲ್ಲಿ ಪ್ರಶಸ್ತಿ ಮಿಸ್ ಮಾಡಿಕೊಂಡಿದ್ದ ಬ್ರೆಜಿಲ್ ಈ ಬಾರಿ ಚಾಂಪಿಯನ್ ಪಟ್ಟ ಗೆಲ್ಲೋ ವಿಶ್ವಾಸದಲ್ಲಿದೆ. ಇದಕ್ಕೆ 5 ಕಾರಣಗಳಿವೆ.

ಕಾರಣ 1: ಅರ್ಹತಾ ಸುತ್ತಿನಲ್ಲಿ ಬ್ರೆಜಿಲ್ ದಾಖಲೆ
ಫಿಫಾ ವಿಶ್ವಕಪ್ ಟೂರ್ನಿಗೆ ಸಜ್ಜಾಗಿರುವ ಬ್ರೆಜಿಲ್ ಇತ್ತೀಚೆಗೆ ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ದಾಖಲೆಯ ಪ್ರದರ್ಶನ ನೀಡಿದೆ. ಕ್ವಾಲಿಫೈಯರ್‌ನ 18 ಪಂದ್ಯಗಳಲ್ಲಿ 12 ಪಂದ್ಯ ಗೆದ್ದಿರುವ ಬ್ರೆಜಿಲ್ 41 ಗೋಲು ಸಿಡಿಸಿದೆ. ಅರ್ಹತಾ ಸುತ್ತಿನಲ್ಲಿ ಅಬ್ಬರಿಸಿರುವ ಬ್ರೆಜಿಲ್, ಅದೇ ಪ್ರದರ್ಶನ ಮುಂದುವರಿಸಿದರೆ ಪ್ರಶಸ್ತಿ ಗೆಲುವು ಕಷ್ಟವಲ್ಲ.

ಕಾರಣ 2: ಸಂಪೂರ್ಣ ಫಿಟ್ ಆಗಿದ್ದಾರೆ ನೇಯ್ಮಾರ್ 
ಬ್ರೆಜಿಲ್ ತಂಡದ ಸ್ಟಾರ್ ಪ್ಲೇಯರ್ ನೇಯ್ಮಾರ್ ಗಾಯದಿಂದ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಇದು ತಂಡದ ಆತ್ಮವಿಶ್ವಾಸವನ್ನ ಹೆಚ್ಚಿಸಿದೆ. ಎದುರಾಳಿಗಳನ್ನ ವಂಚಿಸಿ ಗೋಲು ಸಿಡಿಸೋದರಲ್ಲಿ ನೇಯ್ಮಾರ್ ಎತ್ತಿದ ಕೈ.  ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ನೇಯ್ಮಾರ್ ಪ್ರದರ್ಶನ ಬ್ರೆಜಿಲ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. 

ಫಿಫಾ ವಿಶ್ವಕಪ್ ಫುಟ್ಬಾಲ್ 2018ರ ವೇಳಾಪಟ್ಟಿ ಹಾಗೂ ಪಂದ್ಯದ ಸಮಯ

ಕಾರಣ 3:  5 ಬಾರಿ ಪ್ರಶಸ್ತಿ ಗೆದ್ದ ತಂಡ 
ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬ್ರೆಜಿಲ್ 5 ಬಾರಿ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. 1958, 1962, 1970, 1994 ಹಾಗೂ 2002ರಲ್ಲಿ ಬ್ರೆಜಿಲ್ ಫಿಫಾ ಪ್ರಶಸ್ತಿ ಗೆದ್ದಿತ್ತು. ಗರಿಷ್ಠ ಬಾರಿ ಪ್ರಶಸ್ತಿ ಗೆದ್ದ ಬ್ರೆಜಿಲ್ ತಂಡಕ್ಕೆ ಮತ್ತೊಂದು ಪ್ರಶಸ್ತಿ ಗೆಲ್ಲಲು ಶತಾಯಗತಾಯ ಪ್ರಯತ್ನ ನಡೆಸಲಿದೆ. 

ಅಚಿಲೆಸ್ ಬೆಕ್ಕು ಹೇಳಲಿದೆ ಫಿಫಾ ವಿಶ್ವಕಪ್ ಪಂದ್ಯದ ಸೋಲು-ಗೆಲುವಿನ ಭವಿಷ್ಯ

ಕಾರಣ 4: ಮರುಕಳಿಸಲಿದೆ 1958ರ ಇತಿಹಾಸ
1958ರಲ್ಲಿ ಸ್ವೀಡನ್ ಫಿಫಾ ವಿಶ್ವಕಪ್ ಆಯೋಜಿಸಿತ್ತು. ಯೂರೋಪ್‌ನಲ್ಲಿ ನಡೆದ ಮೊತ್ತ ಮೊದಲ ಫಿಫಾ ಟೂರ್ನಿಯಲ್ಲಿ ಯುರೋಪ್‌ಯೇತರ ತಂಡ ಬ್ರೆಜಿಲ್ ಚಾಂಪಿಯನ್ ಆಗಿತ್ತು. ಫೈನಲ್ ಪಂದ್ಯದಲ್ಲಿ ಬ್ರೆಜಿಲ್ 5-2 ಅಂತರದಲ್ಲಿ ಪಂದ್ಯ ಗೆದ್ದಿತ್ತು. ಇದೀಗ ಮತ್ತೆ ಯೂರೋಪ್ ಖಂಡದಲ್ಲಿ ನಡೆಯುತ್ತಿರುವ ಈ ಬಾರಿಯ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಮತ್ತೆ ಯೋರೋಪ್‌ಯೇತರ ಬ್ರೆಜಿಲ್ ಅದೇ ಸಾಧನೆ ಮಾಡಲು ತುದಿಗಾಲಲ್ಲಿ ನಿಂತಿದೆ.

ದಕ್ಷಿಣ ಭಾರತದ 3 ಭಾಷೆಗಳಲ್ಲಿ ಫಿಫಾ ವಿಶ್ವಕಪ್ ಪಂದ್ಯ ನೇರಪ್ರಸಾರ

Latest Videos
Follow Us:
Download App:
  • android
  • ios