ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಸ್ಪೇನ್, ಜರ್ಮನಿ, ಬ್ರೆಜಿಲ್, ಫ್ರಾನ್ಸ್ ಸೇರಿದಂತೆ ಕೆಲ ತಂಡಗಳು ಪ್ರಶಸ್ತಿ ಗೆಲ್ಲೋ ಫೇವರಿಟ್ ತಂಡಗಳಾಗಿ ಗುರುತಿಸಿಕೊಂಡಿದೆ. ಆದರೆ ಈ ಬಲಿಷ್ಠ ತಂಡಗಳಿಗೆ ಶಾಕ್ ನೀಡಲು ಕೆಲ ತಂಡಗಳು ಸಜ್ಜಾಗಿದೆ. ಆ ತಂಡಗಳು ಯಾವುದು?

ರಷ್ಯಾ(ಜೂನ್.11): ಫಿಫಾ ವಿಶ್ವಕಪ್ ಟೂರ್ನಿ ಗೆಲ್ಲೋದು ಹಲವು ತಂಡಗಳಿಗೆ ಕನಸಿನ ಮಾತು. ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳುವುದೇ ಸಂತಸದ ವಿಚಾರ. ಅದರಲ್ಲೂ ಚಾಂಪಿಯನ್ ತಂಡಗಳನ್ನ ಮಣಿಸಿ ಪ್ರಶಸ್ತಿ ಗೆಲ್ಲಲು ಹರಸಾಹಸ ಪಡಬೇಕು. ಈ ಬಾರಿ ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿ ಗೆಲ್ಲಲು ಫೇವರಿಟ್ ತಂಡಗಳ ನಡುವೆ ಭಾರಿ ಪೈಪೋಟಿ ಇದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಪೇನ್, ಜರ್ಮನಿ, ಬ್ರೆಜಿಲ್, ಫ್ರಾನ್ಸ್ ಸೇರಿದಂತೆ ಕೆಲ ತಂಡಗಳು ಪ್ರಶಸ್ತಿ ಗೆಲ್ಲೋ ಫೇವರಿಟ್ ತಂಡಗಳಾಗಿ ಗುರುತಿಸಿಕೊಂಡಿದೆ. ಈ ನೆಚ್ಚಿನ ತಂಡಗಳಿಗೆ ಯಾವುದೇ ಸಂದರ್ಭದಲ್ಲೂ ಈ 3 ತಂಡಗಳು ಶಾಕ್ ನೀಡಬಹುದು.

ಕೊಲಂಬಿಯಾ:
ಅಗ್ರಸ್ಥಾನದಲ್ಲಿರೋ ತಂಡಗಳಿಗೆ ಶಾಕ್ ನೀಡೋದರಲ್ಲಿ ಕೊಲಂಬಿಯಾ ತಂಡ ಯಾವತ್ತೂ ಹಿಂದೆ ಬಿದ್ದಿಲ್ಲ. 2014ರ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳನ್ನ ಮಣಿಸಿದ ಕೊಲಂಬಿಯಾ, ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ವಿರುದ್ಧ 1-2 ಅಂತರದಲ್ಲಿ ವಿರೋಚಿತ ಸೋಲು ಕಂಡಿತ್ತು. ಈ ಬಾರಿಯೂ ಕೊಲಂಬಿಯಾ ಇದೇ ಪ್ರದರ್ಶನ ನೀಡಿದರೆ ಅಚ್ಚರಿ ಫಲಿತಾಂಶ ನೀಡೋದರಲ್ಲಿ ಅನುಮಾನವಿಲ್ಲ.

ಉರುಗ್ವೆ:
 ಸ್ಟಾರ್ ಪ್ಲೇಯರ್‌ಗಳಾದ ಲೂಯಿಸಿ ಸೌರೆಝ್ ಹಾಗೂ ಎಡಿನ್ಸನ್ ಕವಾನಿ ಉರುಗ್ವೆ ತಂಡದ ಶಕ್ತಿ ಹೆಚ್ಚಿಸಿದ್ದಾರೆ. 2014ರಲ್ಲಿ ಇಂಗ್ಲೆಂಡ್, ಇಟಲಿ ಹಾಗೂ ಕೋಸ್ಟರಿಕಾ ತಂಡಗಳಿಗೆ ನೀರು ಕುಡಿಸಿತ್ತು. ಬಲಿಷ್ಠ ಡಿಫೆಂಡರ್‌ಗಳನ್ನ ಹೊಂದಿರುವ ಉರುಗ್ವೆ, ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲೂ ಮೋಡಿ ಮಾಡೋ ತವಕದಲ್ಲಿದೆ.

ಕ್ರೋವೇಶಿಯಾ:
ಅನುಭವಿ ಹಾಗೂ ಪ್ರತಿಭಾನ್ವಿತ ಆಟಗಾರರನ್ನೊಳಗೊಂಡ ಕ್ರೋವೇಶಿಯಾ, ಪ್ರತಿ ಬಾರಿ ಅಚ್ಚರಿ ಫಲಿತಾಂಶ ನೀಡಿದೆ. ಟ್ಯಾಲೆಂಟೆಡ್ ಆಟಗಾರರಾದ ಲೂಕಾ ಮೊಡ್ರಿಕ್ ಹಾಗೂ ಇವಾನ್ ರಾಟಿಕ್, ಈ ಬಾರಿ ಮೋಡಿ ಮಾಡಿದರೆ ಕ್ರೋವೇಶಿಯಾ ಇತಿಹಾಸ ರಚಿಸೋದು ಕಷ್ಟವೇನಲ್ಲ. ಸಂಘಟಿತ ಹೋರಾಟ ನೀಡಿದರೆ , 2018ರ ವಿಶ್ವಕಪ್ ಟೂರ್ನಿಯಲ್ಲಿ ಕ್ರೋವೇಶಿಯಾ ಬಲಿಷ್ಠ ತಂಡಗಳಿಗೆ ಸುಲಭವಾಗಿ ಶಾಕ್ ನೀಡಬಹುದು.