Asia Cup 2023 ಒಪನಿಂಗ್ ಸೆರಮನಿಯಲ್ಲಿ ತ್ರಿಶಾಲ ಮೋಡಿ, ವೈದ್ಯೆಯ ಹಾಡಿಗೆ ಫ್ಯಾನ್ಸ್ ಫಿದಾ!
ಏಷ್ಯಾಕಪ್ ಟೂರ್ನಿ ಆರಂಭಗೊಂಡಿದೆ. ಪಾಕಿಸ್ತಾನದಲ್ಲಿ ನಡೆದ ಉದ್ಘಾಟನಾ ಸಮಾರಂಭಲ್ಲಿ ತ್ರಿಶಾಲಾ ಗುರುಂಗ್ ಸಾಂಗ್ ಎಲ್ಲರನ್ನು ಮೋಡಿ ಮಾಡಿದೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ತ್ರಿಶಾಲಾ ಗುರುಂಗ್ ಹಾಡಿನ ಮೂಲಕವೇ ಭಾರಿ ಜನಪ್ರಿಯರಾಗಿದ್ದಾರೆ. ಹಿಂದೂ ಸಿಂಗರ್ ಇದೀಗ ಪಾಕಿಸ್ತಾನದಲ್ಲಿ ಭಾರಿ ಫಾಲೋವರ್ಸ್ ಪಡೆದುಕೊಂಡಿದ್ದಾರೆ.

ಏಷ್ಯಾಕಪ್ ಟೂರ್ನಿ ಆರಂಭಗೊಂಡಿದೆ. ಮುಲ್ತಾನ್‌ನಲ್ಲಿನ ಉದ್ಘಟಾನ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಿದೆ.ಇದಕ್ಕೂ ಮೊದಲು ಅದ್ಧೂರಿ ಒಪನಿಂಗ್ ಸೆರಮನಿ ನಡೆದಿತ್ತು.
ಉದ್ಘಾಟನಾ ಸಮಾರಂಭದಲ್ಲಿ ತ್ರಿಶಾಲಾ ಗುರುಂಗ್ ಹಾಡು ಎಲ್ಲರನ್ನು ಮೋಡಿ ಮಾಡಿದೆ. ನೇಪಾಳ ಮೂಲದ ಹಿಂದೂ ಸಿಂಗರ್ ಇದೀಗ ಪಾಕಿಸ್ತಾನದಲ್ಲಿ ಭಾರಿ ಜನಪ್ರಿಯರಾಗಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ತ್ರಿಶಾಲಾ ಗುರುಂಗ್ ಹಾಡು ಎಲ್ಲರನ್ನು ಮೋಡಿ ಮಾಡಿದೆ. ನೇಪಾಳ ಮೂಲದ ಹಿಂದೂ ಸಿಂಗರ್ ಇದೀಗ ಪಾಕಿಸ್ತಾನದಲ್ಲಿ ಭಾರಿ ಜನಪ್ರಿಯರಾಗಿದ್ದಾರೆ.
ವಿಶೇಷ ಅಂದರೆ ತ್ರಿಶಾಲಾ ವೃತ್ತಿಯಲ್ಲಿ ವೈದ್ಯೆ. ಆದರೆ ಜನಪ್ರಿಯರಾಗಿರುವುದು ಗಾಯಕಿಯಾಗಿ. ನೇಪಾಳದಲ್ಲಿ ವೈದ್ಯೆಯಾಗಿರುವ ತ್ರಿಶಾಲ ಭಾರಿ ಜನಪ್ರಿಯರಾಗಿದ್ದಾರೆ.
ತ್ರಿಶಾಲ ಗುರುಂಗ್ ಸ್ವತಃ ಹಾಡು ರಚಿಸಿ ಕಂಪೋಸ್ ಮಾಡಿದ ಹಾಡುಗಳು ಯೂಟ್ಯೂಬ್‌ನಲ್ಲಿ ಭಾರಿ ವೈರಲ್ ಆಗಿದೆ. ಇನ್ನು ಸ್ಟೇಜ್ ಕಾರ್ಯಕ್ರಮಗಳ ಮೂಲಕ ತ್ರಿಶಾಲ ದೇಶ ವಿದೇಶಗಳಲ್ಲಿ ಕಾರ್ಯಕ್ರಮ ನೀಡುತ್ತಿದ್ದಾರೆ.
ನೇಪಾಳ ಮೆಡಿಕಲ್ ಕಾಲೇಜಿನಲ್ಲಿ ಪದವಿ ಪಡೆದಿರುವ ತ್ರಿಶಾಲ ಗುರುಂಗ್ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಅತೀ ಹೆಚ್ಚಿನ ಕಾರ್ಯಕ್ರಮಗಳಿಂದ ತ್ರಿಶಾಲ ಹೆಚ್ಚು ಬ್ಯೂಸಿಯಾಗಿದ್ದಾರೆ.
ಏಷ್ಯಾಕಪ್ ಒಪನಿಂಗ್ ಸೆರಮನಿಯಲ್ಲಿ ತ್ರಿಶಾಲ ಪರ್ಫಾಮೆನ್ಸ್ ಇದೀಗ ಭಾರಿ ವೈರಲ್ ಆಗಿದೆ. ಆಕರ್ಷಕ ವ್ಯಕ್ತಿತ್ವದ ತ್ರಿಶಾಲ ಬಾಲಿವುಡ್ ಬೆಡಗಿಯಂತೆ ಕಂಗೊಳಿಸುತ್ತಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.