ಏಷ್ಯಾ ಬಾಸ್ಕೆಟ್‌ಬಾಲ್: ಜಪಾನ್ ಚಾಂಪಿಯನ್
2019ರ ಫಿಬಾ ಮಹಿಳೆಯರ ಏಷ್ಯಾಕಪ್ ಬಾಸ್ಕೆಟ್‌ಬಾಲ್ ಟೂರ್ನಿ ಎರಡು ಬಲಿಷ್ಠ ತಂಡಗಳ ನಡುವಿನ ಕಾದಾಟಕ್ಕೆ ಸಾಕ್ಷಿಯಾಯಿತು. ಸಾಂಪ್ರದಾಯಿಕ ಎದುರಾಳಿ ಚೀನಾವನ್ನು ಮಣಿಸಿದ ಜಪಾನ್ ನಾಲ್ಕನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಬೆಂಗಳೂರು(ಸೆ.30): 2019ರ ಫಿಬಾ ಮಹಿಳೆಯರ ಏಷ್ಯಾಕಪ್ ಬಾಸ್ಕೆಟ್‌ಬಾಲ್ ಟೂರ್ನಿಯಲ್ಲಿ ಜಪಾನ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ತಂಡಕ್ಕಿದು ಸತತ 4ನೇ ಹಾಗೂ ಒಟ್ಟಾರೆ 5ನೇ ಪ್ರಶಸ್ತಿಯಾಗಿದೆ.
ಭಾನುವಾರ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಜಪಾನ್, ಬದ್ಧವೈರಿ ಚೀನಾ ವಿರುದ್ಧ 71-68ರ ರೋಚಕ ಗೆಲುವು ಸಾಧಿಸಿತು. 11 ಬಾರಿ ಚಾಂಪಿಯನ್ ಚೀನಾ, ಇಲ್ಲಿ ಪ್ರಶಸ್ತಿ ಗೆದ್ದು ಅತಿಹೆಚ್ಚು ಬಾರಿ ಪ್ರಶಸ್ತಿ ಗೆದ್ದ ದ.ಕೊರಿಯಾ (12 ಬಾರಿ ಚಾಂಪಿಯನ್)ದ ದಾಖಲೆ ಸರಿಗಟ್ಟುವ ಕನಸು ಹೊಂದಿತ್ತು. ಆದರೆ ಚೀನಾ ತಂಡದ ಕನಸು ಈಡೇರಲಿಲ್ಲ.
ಏಷ್ಯಾ ಬಾಸ್ಕೆಟ್‌ಬಾಲ್: ಭಾರತಕ್ಕೆ ನಾಲ್ಕನೇ ಸೋಲು
3ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ದ.ಕೊರಿಯಾ ವಿರುದ್ಧ 98-62ರಲ್ಲಿ ಗೆಲುವು ಸಾಧಿಸಿದ ಆಸ್ಪ್ರೇಲಿಯಾ ಕಂಚಿನ ಪದಕ ಜಯಿಸಿತು. ಭಾರತ ತಂಡವು ಸತತ ನಾಲ್ಕು ಸೋಲು ಕಂಡು ಮುಖಭಂಗ ಅನುಭವಿಸಿತ್ತು.
ನಂ.1 ಸ್ಥಾನ ಉಳಿಸಿಕೊಳ್ಳುವ ಒತ್ತಡದಲ್ಲಿ ಟೀಂ ಇಂಡಿಯಾ