ಬೆಂಗಳೂರು[ಸೆ.28]: 2019ರ ಫಿಬಾ ಮಹಿಳೆಯರ ಏಷ್ಯಾಕಪ್ ‘ಎ’ ಡಿವಿಜನ್ ಬಾಸ್ಕೆಟ್ ಬಾಲ್ ಟೂರ್ನಿಯಲ್ಲಿ ಭಾರತ ತಂಡ ಸತತ 4ನೇ ಸೋಲು ಅನುಭವಿಸಿದೆ. ಟೂರ್ನಿಯಲ್ಲಿ ಭಾರತ ಮಹಿಳಾ ತಂಡ ನೀರಸ ಪ್ರದರ್ಶನ ತೋರಿದ್ದು ಈಗಾಗಲೇ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿದೆ.

ಆಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಆಫ್ರಿಕಾ ಸ್ಟಾರ್ ಆಲ್ರೌಂಡರ್ ಕೋಚ್..!

ಶುಕ್ರವಾರ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 7 ಹಾಗೂ 8ನೇ ಸ್ಥಾನಗಳ ಪಂದ್ಯದಲ್ಲಿ ಭಾರತ, ಫಿಲಿಪೈನ್ಸ್ ವಿರುದ್ಧ 78-92 ಅಂಕಗಳಲ್ಲಿ ಪರಾಭವ ಹೊಂದಿತು. ‘ಎ’ ಡಿವಿಜನ್‌ನಲ್ಲಿ ಉಳಿಯಬೇಕಿದ್ದರೆ ‘ಎ’ ಗುಂಪಿನಲ್ಲಿ 3 ಸೋಲುಗಳಿಂದ ಕೊನೆಯ ಸ್ಥಾನ ಪಡೆದಿದ್ದ ಭಾರತ, ‘ಬಿ’ ಗುಂಪಿನಲ್ಲಿ ಕೊನೆಯ ಸ್ಥಾನ ಪಡೆದಿದ್ದ ಫಿಲಿಪೈನ್ಸ್ ಎದುರು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿತ್ತು. ಆದರೆ ಈ ಪಂದ್ಯದಲ್ಲಿ ಎದುರಾದ ಸೋಲಿನಿಂದಾಗಿ ಭಾರತ ಮತ್ತೆ ‘ಬಿ’ ಡಿವಿಜನ್‌ಗೆ ತಳ್ಳಲ್ಪಟ್ಟಿದೆ. 

ಏಷ್ಯಾಕಪ್ ಬಾಸ್ಕೆಟ್‌ಬಾಲ್: ಭಾರತಕ್ಕೆ ಹೀನಾಯ ಸೋಲು

ಭಾರತ ವಿರುದ್ಧ ಗೆದ್ದ ಫಿಲಿಪೈನ್ಸ್ ‘ಎ’ ಡಿವಿಜನ್‌ನಲ್ಲಿ ಉಳಿದುಕೊಂಡಿದೆ. 2017ರಲ್ಲಿ ಕಜಕಿಸ್ತಾನ ವಿರುದ್ಧ ಗೆಲ್ಲುವ ಮೂಲಕ ಭಾರತ ತಂಡ  ‘ಎ’ ಡಿವಿಜನ್‌ಗೆ ಬಡ್ತಿ ಪಡೆದಿತ್ತು. ಮೊದಲ 2 ಕ್ವಾರ್ಟರ್ ಮುಕ್ತಾಯಕ್ಕೆ ಫಿಲಿಪೈನ್ಸ್ 41-38 ರಿಂದ ಮುನ್ನಡೆ ಸಾಧಿಸಿತ್ತು.