ಕನ್ನಡದ ಪ್ರತಿಭೆಗಳಾದ ಕೆ.ಎಲ್ ರಾಹುಲ್, ಕರುಣ್ ನಾಯರ್ ಹಾಗೂ ಮಯಾಂಕ್ ಅಗರ್'ವಾಲ್ ಈ ಬಾರಿ ಐಪಿಎಲ್'ನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇದುವರೆಗೂ ಈ ಮೂವರು ಕ್ರಿಕೆಟಿಗರು ಅದ್ಭುತ ಪ್ರದರ್ಶನ ತೋರುವ ಮೂಲಕ ತಂಡವನ್ನು ಅಗ್ರಸ್ಥಾನಕ್ಕೇರುವಂತೆ ಮಾಡಿದ್ದಾರೆ. ಆದರೆ ತಮ್ಮನ್ನು ಆರ್'ಸಿಬಿ ಪ್ರಾಂಚೈಸಿ ರೀಟೈನ್ ಮಾಡಿಕೊಳ್ಳದ್ದನ್ನು ಟ್ರೋಲ್ ಮಾಡಿದ ಕೆ.ಎಲ್ ರಾಹುಲ್ 'ಈ ಸಲ ಕಪ್ ನಮ್ದೆ ಗುರು. ಹೇಳ್ಬಿಡು ಎಲ್ಲಾರ್ಗೂ' ಎಂದು ಹೇಳಿದ್ದಾರೆ.

ಈ ಬಾರಿ ಆರ್'ಸಿಬಿ ಅಭಿಮಾನಿಗಳು, 'ಈ ಸಲ ಕಪ್ ನಮ್ದೆ' ಎಂಬ ಘೋಷವಾಕ್ಯದೊಂದಿಗೆ ಆರ್'ಸಿಬಿ ತಂಡವನ್ನು ಬೆಂಬಲಿಸುತ್ತಿದ್ದಾರೆ. ಆದರೆ ಪಂಜಾಬ್ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಪ್ರತಿಭೆಗಳಾದ ಕರುಣ್ ನಾಯರ್ ಲೈವ್'ನಲ್ಲಿ ಅಭಿಮಾನಿಗಳಿಗೆ ಏನು ಹೇಳುತ್ತೀರಾ ಎಂದು ರಾಹುಲ್ ಅವರನ್ನು ಕೇಳುತ್ತಾರೆ. ಆಗ ರಾಹುಲ್ ಈ ಸಲ ಕಪ್ ನಮ್ದೆ ಗುರು. ಹೇಳ್ಬಿಡು ಎಲ್ಲಾರ್ಗೂ ಎಂದು ಉತ್ತರಿಸುತ್ತಾರೆ. ಈ ವೀಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.