ಕೊಲಂಬೊ(ಏ.17): ವಿಶ್ವಕಪ್ ಟೂರ್ನಿಯಲ್ಲಿ ನಾಯಕತ್ವ ವಹಿಸಲು ಶ್ರೀಲಂಕಾ ದೇಸಿ ಕ್ರಿಕೆಟ್ ಹಾಗೂ ಐಪಿಎಲ್ ಟೂರ್ನಿ ಎಂದು ಅತ್ತ-ಇತ್ತ ಓಡಾಡಿದ ವೇಗಿ ಲಸಿತ್ ಮಲಿಂಗಾಗೆ ನಿರಾಸೆಯಾಗಿದೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ತಂಡವನ್ನು ದಿಮುತ್ ಕರುಣಾರತ್ನೆ ಮುನ್ನಡೆಸಲಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಸ್ಪಷ್ಟಪಡಿಸಿದೆ. 

ಇದನ್ನೂ ಓದಿ: ಭಾರತ ವಿಶ್ವಕಪ್ ತಂಡವನ್ನೂ ಬಿಡದ ನಿಖಿಲ್ ಎಲ್ಲಿದ್ದಿಯಪ್ಪ?

ವಿಶ್ವಕಪ್ ಟೂರ್ನಿಗೆ ಶ್ರೀಲಂಕಾ ಇನ್ನೂ ತಂಡ ಪ್ರಕಟಿಸಿಲ್ಲ. ಆದರೆ ವಿಶ್ವಕಪ್ ತಂಡದ ನಾಯಕ ಯಾರು ಅನ್ನೋದನ್ನು ಆಯ್ಕೆ ಮಾಡಿದೆ. ಐಸಿಸಿ ಪ್ರತಿಷ್ಠಿತ ಟೂರ್ನಿಗಳಲ್ಲಿ ಲಸಿತ್ ಮಲಿಂಗ, ಏಂಜಲೋ ಮ್ಯಾಥ್ಯೂಸ್, ದಿನೇಶ್ ಚಾಂಡಿಮಾಲ್ ಹಾಗೂ ತಿಸರಾ ಪರೇರಾ ನಾಯಕತ್ವ ವಹಿಸಿದ್ದಾರೆ. ಹೀಗಾಗಿ ದಿಮುತ್ ಕರುಣಾರತ್ನೆಗೆ ಅವಕಾಶ ನೀಡಲಾಗಿದೆ ಎಂದು ಲಂಕಾ ಹೇಳಿದೆ.

ಇದನ್ನೂ ಓದಿ: ವಿಶ್ವಕಪ್’ಗೆ ಕಾರ್ತಿಕ್ ಆಯ್ಕೆ ಬಗ್ಗೆ ಉತ್ತಪ್ಪ ಹೇಳಿದ್ದಿಷ್ಟು...

ಟೆಸ್ಟ್ ತಂಡದ ನಾಯಕನಾಗಿರುವ ಕರುಣಾರತ್ನೆ, 2015ರ ವಿಶ್ವಕಪ್ ಟೂರ್ನಿ ಬಳಿಕ ಏಕದಿನ ಪಂದ್ಯ ಆಡಿಲ್ಲ. 17 ಏಕದಿನ ಪಂದ್ಯದಿಂ 190 ರನ್ ಸಿಡಿಸಿರುವ ಕರುಣಾರತ್ನೆ ಆಯ್ಕೆ ಇದೀಗ ಇತರ ಲಂಕಾ ಆಟಗಾರರ ಅಚ್ಚರಿಗೆ ಕಾರಣವಾಗಿದೆ. ಶೀಘ್ರದಲ್ಲೇ ಶ್ರೀಲಂಕಾ ವಿಶ್ವಕಪ್ ತಂಡ ಪ್ರಕಟಗೊಳ್ಳಲಿದೆ.