Asianet Suvarna News Asianet Suvarna News

ಭಾರತ ವಿಶ್ವಕಪ್ ತಂಡವನ್ನೂ ಬಿಡದ ನಿಖಿಲ್ ಎಲ್ಲಿದ್ದಿಯಪ್ಪ?

ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಆಯ್ಕೆ ಮಾಡಲಾಗಿದೆ. 15 ಸದಸ್ಯರ ತಂಡದಲ್ಲಿರುವ ಏಕೈಕ ಕನ್ನಡಿಗ ಕೆ.ಎಲ್.ರಾಹುಲ್. ಇದೀಗ  ಮತ್ತೊಂದು ಕನ್ನಡ ಹೆಸರು ಸೇರ್ಪಡೆಯಾಗಿದೆ. ಈ ಹೆಸರೇ ನಿಖಿಲ್ ಎಲ್ಲಿದ್ದಿಯಪ್ಪಾ. ಟೀಂ ಇಂಡಿಯಾದಲ್ಲಿ ನಿಖಿಲ್ ಎಲ್ಲಿದ್ದಿಯಪ್ಪಾ ಸೇರಿಕೊಂಡಿದ್ದು ಹೇಗೆ? ಇಲ್ಲಿದೆ ವಿವರ.

Nikhil elliddiyappa  trolls entered team India 15 men world cup squad
Author
Bengaluru, First Published Apr 17, 2019, 4:54 PM IST

ಬೆಂಗಳೂರು(ಏ.17): ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಪ್ರಕಟಗೊಂಡಿದೆ. ವಿರಾಟ್ ಕೊಹ್ಲಿ ನಾಯಕತ್ವದ 15 ಸದಸ್ಯರ ಭಾರತ ತಂಡ ಬಲಿಷ್ಠವಾಗಿದೆ. ಇಷ್ಟೇ ಅಲ್ಲ ಪ್ರಶಸ್ತಿ ಗೆಲ್ಲೋ ವಿಶ್ವಾಸದಲ್ಲಿದೆ. 15 ಸದಸ್ಯರ ತಂಡದಲ್ಲಿ ಕೆ.ಎಲ್ .ರಾಹುಲ್ ಏಕೈಕ ಕನ್ನಡಿಗ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದೀಗ ಇದೇ ತಂಡದಲ್ಲಿ ನಿಖಿಲ್ ಎಲ್ಲಿದ್ದಿಯಪ್ಪಾ ಕೂಡ ಸೇರಿಕೊಂಡಿದೆ.

ಇದನ್ನೂ ಓದಿ: ಟೀಕೆಗೆ ತಿರುಗೇಟು ನೀಡಿದ ಬಿನ್ನಿ ಪತ್ನಿ ಮಯಾಂತಿ ಲ್ಯಾಂಗರ್

ಲೋಕಸಭಾ ಚುನಾವಣಾ ದಿನಾಂಕ ಪ್ರಕಟಗೊಂಡ ಬಳಿಕ ಕರ್ನಾಟಕದಲ್ಲಿ ನಿಖಿಲ್ ಎಲ್ಲಿದ್ದಿಯಪ್ಪಾ ಸದ್ದು ಮಾಡುತ್ತಿದೆ. ಸಿಎಂ ಕುಮಾರಸ್ವಾಮಿ ಹಾಗೂ ಪುತ್ರ, ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಟ್ರೋಲ್ ಮಾಡಲು ಬಳಕೆಯಾಗಿರುವ ನಿಖಿಲ್ ಎಲ್ಲಿದ್ದಿಯಪ್ಪಾ ಇದೀಗ ಟೀಂ ಇಂಡಿಯಾ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದೆ. 

Nikhil elliddiyappa  trolls entered team India 15 men world cup squad

ಇದನ್ನೂ ಓದಿ: ವಿಶ್ವಕಪ್’ನಿಂದ ಗೇಟ್’ಪಾಸ್: ಆಯ್ಕೆ ಸಮಿತಿಗೆ ಟಾಂಗ್ ಕೊಟ್ಟ ರಾಯಡು..!

ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ 15 ಸದಸ್ಯರ ಹೆಸರನ್ನು ಒಂದರ ಕೆಳಗೊಂದರಂತೆ ಜೋಡಿಸಿದರೆ ನಿಖಿಲ್ ಎಲ್ಲಿದ್ದಿಯಪ್ಪಾ ಅನ್ನೋ ಹೆಸರು ಅವಿಷ್ಕರಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾದಲ್ಲೂ ನಿಖಿಲ್ ಎಲ್ಲಿದ್ದಿಯಪ್ಪಾ ಹರಿದಾಡುತ್ತಿದೆ. ಚುನಾವಣೆ ಮುಗಿದು ಫಲಿತಾಂಶ ಪ್ರಕಟವಾದರೂ ನಿಖಿಲ್ ಎಲ್ಲಿದ್ದಿಯಪ್ಪ ಮಾತ್ರ ಸದ್ಯಕ್ಕೆ ತಣ್ಣಗಾಗೋ ಲಕ್ಷಣಗಳು ಕಾಣಿಸುತ್ತಿಲ್ಲ.

Nikhil elliddiyappa  trolls entered team India 15 men world cup squad

Follow Us:
Download App:
  • android
  • ios