Asianet Suvarna News Asianet Suvarna News

ಕಬಡ್ಡಿ ಕಬಡ್ಡಿ ಕಬಡ್ಡಿ... ಈ ಪುಟ್ಟ ಪೋರನ ರೋಚಕ ಆಟ ನೋಡಿ

ಪುಟ್ಟ ಮಗು ದೊಡ್ಡ ಗುಂಪಿನೊಂದಿಗೆ ಕಬಡ್ಡಿ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಬಡ್ಡಿ ಪ್ರೇಮಿಗಳನ್ನು ಬೆರಗುಗೊಳ್ಳುವಂತೆ ಮಾಡಿದೆ. 

days counting for pro kabadi session 9, video of little boy playing kabaddi video goes viral akb
Author
First Published Sep 19, 2022, 3:00 PM IST

ಕಬಡ್ಡಿ ಒಂದು ಬಹು ರೋಚಕ ಆಟ, ಕಬಡ್ಡಿ ಕೋರ್ಟ್ ಮುಂದೆ ನೋಡುತ್ತಾ ನಿಂತವರನ್ನು ಮುಂದೆ ಮುಂದೆ ಹೋಗುವಂತೆ ಮಾಡುವ, ತಾವೇ ಆಟವಾಡುತ್ತಿದ್ದೆವೇನೋ ಎಂಬಷ್ಟು ಸೂಜಿಗಲ್ಲಿನಂತೆ ಸೆಳೆಯುವ ರೋಚಕ ಆಟ. ಈ ಕಬಡ್ಡಿಗೆ ವಿಶ್ವ ಮಟ್ಟದ ಮಾನ್ಯತೆ ತಂದು ಕೊಟ್ಟಿದ್ದು ಪ್ರೊ ಕಬಡ್ಡಿ, ಯಶಸ್ವಿ 8 ಸೀಸನ್‌ಗಳನ್ನು ಮುಗಿಸಿರುವ ಪ್ರೊ ಕಬಡ್ಡಿಯ 9ನೇ ಸೀಸನ್‌ ಗೆ ದಿನಗಣನೆ ಶುರುವಾಗಿದೆ. ಕಬಡ್ಡಿ ಪ್ರೇಮಿಗಳು ಈ ಪ್ರೊ ಕಬಡ್ಡಿಗಾಗಿ ಕೌತುಕದಿಂದ ಕಾಯುತ್ತಿದ್ದಾರೆ. ಈ ನಡುವೆ ಪುಟ್ಟ ಮಗು ದೊಡ್ಡ ಗುಂಪಿನೊಂದಿಗೆ ಕಬಡ್ಡಿ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕಬಡ್ಡಿ ಪ್ರೇಮಿಗಳನ್ನು ಬೆರಗುಗೊಳ್ಳುವಂತೆ ಮಾಡಿದೆ. 

ಈ ವಿಡಿಯೋವನ್ನು ಭಾರತೀಯ ಪೊಲೀಸ್ ಸೇವೆ ಅಧಿಕಾರಿ ಪ್ರಹ್ಲಾದ್ ಮೀನಾ (prahlad meena) ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದಾರೆ. ಬಾಲಕನ ವಿಡಿಯೋ ಯಾವ ಕಾರ್ಯಕ್ಕೂ ವಯಸ್ಸು ಮುಖ್ಯವಲ್ಲ, ಆಸಕ್ತಿ ಮುಖ್ಯ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತಿದೆ. ವಿಡಿಯೋದಲ್ಲಿ ಮಕ್ಕಳ ಕಬಡ್ಡಿ ತಂಡವೊಂದು ಕಬಡ್ಡಿ ಆಡುತ್ತಿದೆ. ಈ ಟೀಮ್‌ನಲ್ಲಿ ಪುಟ್ಟ ಬಾಲಕನೋರ್ವನು ಬಹಳ ಉತ್ಸಾಹದಿಂದ ಕಬಡ್ಡಿ ಆಡುತ್ತಿದ್ದಾನೆ. ವಿರೋಧಿ ತಂಡದ, ತನಗಿಂತ ಮೂರು ಪಾಲು ಎತ್ತರವಿರುವ ರೈಡ್‌ಗೆ ಬಂದಿದ್ದು, ಈ ವೇಳೆ ಪುಟ್ಟ ಬಾಲಕ ಆತನನ್ನು ಕ್ಯಾಚ್ ಹಾಕುವ ರೀತಿ ಬಹಳ ರೋಚಕವಾಗಿದೆ. ಆತ ತನಗಿಂತ ಮೂರು ಪಾಲು ಎತ್ತರವಿದ್ದಾನೆ ಎಂಬುದನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳದೇ ಬಾಲಕ ಸಖತ್ ಆಗಿ ಕ್ಯಾಚ್ ಮಾಡಿದ್ದಾನೆ. ಆದರೆ ಈ ಪುಟ್ಟ ಬಾಲಕನ ತಂಡದಲ್ಲಿದ್ದವರೆಲ್ಲರೂ ಈತನಿಗಿಂತ ಸ್ವಲ್ಪ ದೊಡ್ಡವರಷ್ಟೇ. ಆದರೆ ರೈಡ್ ಬಂದಾತ ಅಡ್ಡ ಮಲಗಿದರೆ ಮಧ್ಯದ ಗೆರೆಗೆ ಹೋಗಿ ಬೀಳುವಷ್ಟು ಉದ್ದವಿದ್ದ. ಆದರೂ ಈ ಪುಟ್ಟ ಬಾಲಕನ ಜೊತೆ ಈತನ ತಂಡದಲ್ಲಿದ್ದವರೆಲ್ಲಾ ಸೇರಿ ಆತನನ್ನು ಹಿಡಿಯಲು ಪ್ರಯತ್ನಿಸಿದರಾದರೂ ಔಟ್ ಆಗುತ್ತಾರೆ. 

ಆದಾಗ್ಯೂ ಈ ವಿಡಿಯೋ ಎಲ್ಲರನ್ನೂ ಬಹುವಾಗಿ ಸೆಳೆದಿದೆ. ವಿಡಿಯೋ ನೋಡಿದ ಅನೇಕರು ಪುಟ್ಟ ಬಾಲಕನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋ ಶೇರ್ ಮಾಡಿರುವ ಐಪಿಎಸ್ ಅಧಿಕಾರಿ, ಪ್ರಹ್ಲಾದ್ ಮೀನಾ, ವಯಸ್ಸಿನಿಂದ ಅಲ್ಲ ಓರ್ವ ವ್ಯಕ್ತಿ ತನ್ನ ಬಲವಾದ ಇಚ್ಛೆ, ಆಸಕ್ತಿ, ಉತ್ಸಾಹ ಧೈರ್ಯದಿಂದ ತನಗೆ ಎದುರಾಗುವ ತೊಂದರೆಗಳನ್ನು ಎದುರಿಸಬಹುದು ಎಂದು ಅವರು ಈ ವಿಡಿಯೋ ಶೇರ್ ಮಾಡಿ ಬರೆದುಕೊಂಡಿದ್ದಾರೆ. ಸಣ್ಣವನಾದರೂ ಬಹಳ ಪ್ರಭಾವಶಾಲಿ ಎಂದು ಬಾಲಕನ ವಿಡಿಯೋ ನೋಡಿ ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಕಬಡ್ಡಿ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌: 9ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ ವೇಳಾಪಟ್ಟಿ ಪ್ರಕಟ..!

ಈ ನಡುವೆ ಪ್ರೋ ಕಬಡ್ಡಿ ಸೀಸನ್ 9 ಕ್ಕೆ ದಿನಗಣನೆ ಆರಂಭವಾಗಿದೆ. ಸೀಸನ್​ 9ರ ಪ್ರೊ ಕಬಡ್ಡಿ ಲೀಗ್ ನ (Pro Kabaddi League) ವೇಳಾಪಟ್ಟಿ ಈಗಾಗಲೇ ಬಿಡುಗಡೆ ಆಗಿದ್ದು, ಬೆಂಗಳೂರು ಸೇರಿದಂತೆ ಮೂರು ನಗರಗಳಲ್ಲಿ ಈ ಬಾರಿಯ ಪ್ರೊ ಕಬಡ್ಡಿ ನಡೆಯಲಿದೆ. ಕಳೆದ ಆಗಸ್ಟ್‌ನಲ್ಲಿ ಪ್ರೊ ಕಬಡ್ಡಿ ಲೀಗ್‌ಗೆ ಹರಾಜು ಪ್ರಕ್ರಿಯೆ ನಡೆದಿತ್ತು. ಈ ಬಾರಿ ಕಬಡ್ಡಿ ಪಂದ್ಯಾವಳಿ ಬೆಂಗಳೂರು (Banglore), ಪುಣೆ (Pune) ಮತ್ತು ಹೈದರಾಬಾದ್‌ನಲ್ಲಿ (Hyderabad) ನಡೆಯಲಿವೆ

12 ತಂಡಗಳು ಪ್ರೊ ಕಬಡ್ಡಿ ಟ್ರೋಫಿಗೆ ಕಾದಾಡಲಿದ್ದು, ಅಕ್ಟೋಬರ್ 7 ರಿಂದ ಡಿಸೆಂಬರ್ ಮಧ್ಯಭಾಗದವರೆಗೂ 2022ನೇ ಸಾಲಿನ ಪ್ರೊ ಕಬಡ್ಡಿ ಲೀಗ್ ನಡೆಯಲಿದೆ.ಪ್ರೊ ಕಬಡ್ಡಿ ಲೀಗ್ 8ನೇ ಸೀಸನ್​ ಅನ್ನು ಕೋವಿಡ್ ಕಾರಣದಿಂದ  ಬೆಂಗಳೂರಿನ ಖಾಸಗಿ ಹೋಟೆಲ್​ ಒಂದರಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ ಈ ಬಾರಿ ಸಂಪೂರ್ಣ ಪ್ರೇಕ್ಷಕರೊಂದಿಗೆ ಈ ಬಾರಿಯ 9ನೇ ಸೀಸನ್​ ನಡೆಯಲಿದೆ.

ಕೈ ತಪ್ಪಿದ ಪವನ್‌ ಶೆರಾವತ್‌, ಕಣ್ಣೀರಿಟ್ಟ ಬೆಂಗಳೂರು ಬುಲ್ಸ್‌ ಕೋಚ್‌!

Follow Us:
Download App:
  • android
  • ios