Breaking: ಭಾರತದ ಡಿ. ಗುಕೇಶ್‌ ಚೆಸ್‌ ಇತಿಹಾಸದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್‌!

ಭಾರತದ ಡಿ. ಗುಕೇಶ್ 14 ಸುತ್ತುಗಳ ಪಂದ್ಯದಲ್ಲಿ ಚೀನಾದ ಡಿಂಗ್ ಲಿರೆನ್‌ರನ್ನು ಸೋಲಿಸಿ ವಿಶ್ವ ಚೆಸ್ ಚಾಂಪಿಯನ್‌ಷಿಪ್ ಪ್ರಶಸ್ತಿ ಗೆದ್ದಿದ್ದಾರೆ. 14ನೇ ಸುತ್ತಿನಲ್ಲಿ ಡಿಂಗ್ ಲಿರೇನ್ ಮಾಡಿದ ಪ್ರಮಾದದಿಂದಾಗಿ ಗುಕೇಶ್ ಗೆಲುವು ಸಾಧಿಸಿದರು.

D Gukesh won FIDE World Chess Championship 2024 Beats Ding Liren san

ಸಿಂಗಾಪುರ (ಡಿ.12): ಭಾರತದ ಡಿ. ಗುಕೇಶ್‌ ವಿಶ್ವ ಚೆಸ್‌ ಚಾಂಪಿಯನ್‌ ಎನಿಸಿಕೊಂಡಿದ್ದಾರೆ. 14 ಸುತ್ತುಗಳ ಪಂದ್ಯದಲ್ಲಿ ಹಾಲಿ ವಿಶ್ವ ಚಾಂಪಿಯನ್‌ ಆಗಿದ್ದ ಚೀನಾದ ಡಿಂಗ್‌ ಲಿರೆನ್‌ರನ್ನು ಸೋಲಿಸುವ ಮೂಲಕ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಪ್ರಶಸ್ತಿ ಗೆದ್ದಿದ್ದರು. 13 ಪಂದ್ಯಗಳ ಅಂತ್ಯಕ್ಕೆ ಇಬ್ಬರೂ ಆಟಗಾರರು ತಲಾ 6.5 ಅಂಕ ಹೊಂದಿದ್ದರು. ಫಲಿತಾಂಶ ನಿರ್ಣಯಕ್ಕಾಗಿ 14ನೇ ಸುತ್ತಿನಲ್ಲಿ ಗೆಲುವು ಸಾಧಿಸಬೇಕಿತ್ತು. ಡಿಂಗ್‌ ಲಿರೇನ್‌ 14ನೇ ಸುತ್ತಿನ ಪಂದ್ಯದ ಕೊನೆಯಲ್ಲಿ ಮಾಡಿದ ಭಾರೀ ಪ್ರಮಾದದಿಂದ ಡಿ.ಗುಕೇಶ್‌ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದರು. ಚೆನ್ನೈ ಮೂಲದ ಗುಕೇಶ್‌ ದೊಮ್ಮರಾಜು ಇದೇ ಮೊದಲ ಬಾರಿಗೆ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ. 18 ವರ್ಷದ ಚೆನ್ನೈ ಮೂಲದ ಗ್ರ್ಯಾಂಡ್‌ ಮಾಸ್ಟರ್‌ ಈ ಗೆಲುವಿನ ಮೂಲಕ ಫಿಡೆ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ ಗೆದ್ದ ಅತ್ಯಂತ ಮೂರನೇ ಕಿರಿಯ ಆಟಗಾರ ಎನಿಸಿದ್ದಾರೆ. ಇತಿಹಾಸದಲ್ಲಿ ಇಲ್ಲಿಯವರೆಗೂ ಸಾಕಷ್ಟು ದಿಗ್ಗಜ ಚೆಸ್‌ ಪ್ಲೇಯರ್‌ಗಳನ್ನು ಕಂಡಿದೆ. ಕಾರ್ಲ್‌ಸೆನ್‌, ಕ್ರ್ಯಾಮ್ನಿಕ್‌, ಕ್ಯಾಸ್ಪರೋವ್‌, ವಿಶ್ವನಾಥನ್‌ ಆನಂದ್‌. ಆದರೆ, ತಮ್ಮ 18ನೇ ವಯಸ್ಸಿನಲ್ಲೇ ಫಿಡೆ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಸಾಧಿಸಿದ್ದು ಡಿ. ಗುಕೇಶ್‌ ಮಾತ್ರ.

ಗುರುವಾರ ಡಿ.ಗುಕೇಶ್‌ ಅವರ ಸಾಧನೆಗೂ ಮುನ್ನ ದಿಗ್ಗಜ ಆಟಗಾರ ರಷ್ಯಾದ ಗ್ಯಾರಿ ಕ್ಯಾಸ್ಪರೋವ್‌ ವಿಶ್ವದ ಅತ್ಯಂತ ಕಿರಿಯ ಚೆಸ್‌ ವಿಶ್ವ ಚಾಂಪಿಯನ್‌ ಎನಿಸಿದ್ದರು. 1985ರಲ್ಲಿ ಕ್ಯಾಸ್ಪರೋವರ್‌ ಅಂಟೋಲೆಯ್‌ ಕರ್ಪೋವ್‌ರನ್ನು ಸೋಲಿಸಿ ಪ್ರಶಸ್ತಿ ಗೆದ್ದಾಗ ಅವರಿಗೆ 22 ವರ್ಷ ವಯಸ್ಸಾಗಿತ್ತು. ಈ ವರ್ಷದ ಆರಂಭದಲ್ಲಿ ನಡೆದ ಕ್ಯಾಂಡಿಡೇಟ್ಸ್‌ ಚೆಸ್‌ ಟೂರ್ನಿಯಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವ ಚಾಂಪಿಯನ್‌ಷಿಪ್‌ಗೆ ಅತ್ಯಂತ ಕಿರಿಯ ಚಾಲೆಂಜರ್‌ ಆಗಿ ಪ್ರವೇಶ ಪಡೆದಿದ್ದರು. ವಿಶ್ವನಾಥನ್‌ ಆನಂದ್‌ ಬಳಿಕ ವಿಶ್ವ ಚೆಸ್‌ ಚಾಂಪಿಯನ್ ಆದ 2ನೇ ಭಾರತೀಯ ಡಿ. ಗುಕೇಶ್‌. ಐದು ಬಾರಿಯ ವಿಶ್ವ ಚಾಂಪಿಯನ್‌ ವಿಶ್ವನಾಥನ್‌ ಆನಂದ್‌ 2013ರಲ್ಲಿ ಕೊನೆಯ ಬಾರಿಗೆ ಈ ಪ್ರಶಸ್ತಿ ಗೆದ್ದಿದ್ದರು.

ಕಳೆದ 13 ಪಂದ್ಯಗಳಲ್ಲೂ ಉಭಯ ಆಟಗಾರರು ಸಾಕಷ್ಟು ಪೈಪೋಟಿ ನೀಡಿದ್ದರು. ಅದರೆ, ಪ್ರಶಸ್ತಿಗೆ ನಿರ್ಣಾಯಕವಾಗಿದ್ದ ಅಂತಿಮ ಗೇಮ್‌ನಲ್ಲಿ ಡಿಂಗ್‌ ಲಿರೆನ್‌ ಮಾಡಿದ ದೊಡ್ಡ ಪ್ರಮಾದ ಅವರ ಸೋಲಿಗೆ ಕಾರಣವಾಯಿತು. ಫಿಡೆ ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಇನ್ನೇನು ವಿಜೇತರನ್ನು ಟೈ ಬ್ರೇಕರ್‌ ಮೂಲಕ ನಿರ್ಣಾಯವಾಗಬೇಕು ಎನ್ನುವ ಹಂತದಲ್ಲಿ ಡಿ. ಗುಕೇಶ್‌ ಕೊನೆಯ ಪ್ರಯತ್ನ ಎನ್ನುವಂತೆ ಡಿಂಗ್‌ ಲಿರೆನ್‌ಗೆ ಸವಾಲೊಡಿದರು. ಫಿಡೆ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಹಿಂದಿನ ಹಲವು ಪಂದ್ಯಗಳಂತೆ ಈ ಪಂದ್ಯದಲ್ಲೂ ತಮ್ಮ ಮೂವ್‌ಮೆಂಟ್‌ ಮಾಡಲು ಲಿರೆನ್‌ ಸಾಕಷ್ಟು ಸಮಯ ತೆಗೆದುಕೊಂಡರು. 

ಬಿಗ್ ಬಾಸ್‌ಗೆ ಬರ್ತಿಲ್ಲ ಟಿಆರ್‌ಪಿ: ಬೇಕಂತಲೇ ಸ್ಪರ್ಧಿಗಳ ಹಳೇ ಫೋಟೋ, ವೀಡಿಯೋ ಟ್ರೆಂಡ್ ಆಗ್ತಿದ್ಯಾ?

ಪ್ರತಿಷ್ಠಿತ  ವಿಶ್ವ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಸಾಧಿಸಿದ ಡಿ. ಗುಕೇಶ್‌ಗೆ ಅಭಿನಂದನೆಗಳು. ಚೆಸ್‌ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಿಶ್ವಚಾಂಪಿಯನ್‌ ಎನಿಸಿಕೊಂಡಿದ್ದಾರೆ. ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಇಡೀ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್‌ ಮಾಂಡವೀಯ ಅಭಿನಂದನೆ ಸಲ್ಲಿಸಿ ಟ್ವೀಟ್‌ ಮಾಡಿದ್ದಾರೆ.

ನಮ್ಮ ಮೆಟ್ರೋ ಫೇಸ್-3: ಬೆಂಗಳೂರಿನಲ್ಲಿ 11 ಸಾವಿರಕ್ಕೂ ಅಧಿಕ ಮರದ ಬುಡಕ್ಕೆ ಕೊಡಲಿ!

 

Latest Videos
Follow Us:
Download App:
  • android
  • ios