Asianet Suvarna News Asianet Suvarna News

IPL ಪ್ರಶಸ್ತಿ ಗೆಲ್ಲಲು ಟಾಸ್ ಗೆದ್ರೆ ಯಾವ ಆಯ್ಕೆ ಉತ್ತಮ?

ಐಪಿಎಲ್ ಪಂದ್ಯದಲ್ಲಿ ಟಾಸ್ ಪ್ರಮುಖ ಪಾತ್ರ ನಿರ್ವಹಿಸುತ್ತೆ. ಇದೀಗ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ರೆ ಅರ್ಧ ಪಂದ್ಯ ಗೆದ್ದಂತೆ ಅನ್ನೋ ಮಾತಿದೆ. ಹೀಗಾಗಿ ಟಾಸ್ ಗೆದ್ದ ತಂಡ ಯಾವ ಆಯ್ಕೆ ಮಾಡಬೇಕು? ಈ ಹಿಂದಿನ ಐಪಿಎಲ್ ಫೈನಲ್ ಮುಖಾಮುಖಿಯಲ್ಲಿ ಇವರಿಬ್ಬರ ಆಯ್ಕೆ ಏನಾಗಿತ್ತು? ಫಲಿತಾಂಶ ಏನಾಗಿದೆ? ಇಲ್ಲಿದೆ ವಿವರ.
 

CSK vs MI Bating or Fielding which option better to lift IPL trophy
Author
Bengaluru, First Published May 12, 2019, 3:12 PM IST

ಹೈದರಾಬಾದ್(ಮೇ.12): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ವಿನ್ನರ್ ಯಾರು ಅನ್ನೋದು ಇಂದು ಉತ್ತರ ಸಿಗಲಿದೆ. ಫೈನಲ್ ಹೋರಾಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಸಜ್ಜಾಗಿದೆ. ಹೋರಾಟಕ್ಕೂ ಮುನ್ನವೇ ಪ್ರಶಸ್ತಿ ಗೆಲ್ಲೋ ತಂಡ ಯಾವುದು ಅನ್ನೋ ಭವಿಷ್ಯ ಸುಲಭವಲ್ಲ. ಆದರೆ ಅಂಕಿ ಅಂಶಗಳ ಪ್ರಕಾರ ಟಾಸ್ ಗೆದ್ದ ತಂಡ ಬಹುತೇಕ ಬಾರಿ ಪ್ರಶಸ್ತಿ ಗೆದ್ದಿದೆ. ಇದೀಗ ಚೆನ್ನೈ ಹಾಗೂ ಮುಂಬೈ ಫೈನಲ್ ಪಂದ್ಯದ ಅಂಕಿ ಅಂಶ ತುಂಬಾ ರೋಚಕವಾಗಿದೆ.

ಇದನ್ನೂ ಓದಿ: ಹೀಗಿತ್ತು ನೋಡಿ ಮುಂಬೈ ಇಂಡಿಯನ್ಸ್ ತಂಡದ ಫೈನಲ್ ದಾರಿ

ಫೈನಲ್ ಪಂದ್ಯದಲ್ಲಿ ಚೆನ್ನೈ ಹಾಗೂ ಮುಂಬೈ ಟಾಸ್ ಗೆದ್ರೆ ಏನು ಮಾಡಬೇಕು? ಈ ಪ್ರಶ್ಮೆಗೆ ಈ ಹಿಂದಿನ ಫೈನಲ್ ಪಂದ್ಯಗಳಲ್ಲಿ ಚೆನ್ನೈ ಹಾಗೂ ಮುಂಬೈ ತೆಗೆದು ಕೊಂಡ ನಿರ್ಧಾರ ಸಾಕ್ಷಿ ಹೇಳುತ್ತಿದೆ. ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಹಾಗೂ ಚೆನ್ನೈ 3 ಬಾರಿ ಮುಖಾಮುಖಿಯಾಗಿದೆ. 3 ಬಾರಿ ಕೂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ರಶಸ್ತಿ ಗೆದ್ದಿದೆ.

ಇದನ್ನೂ ಓದಿ: ಸೂಪರ್‌ನೋವಾಸ್ ಐಪಿಎಲ್ ಚಾಂಪಿಯನ್

2010 - ಮುಂಬೈ v ಚೆನ್ನೈ -ಚೆನ್ನೈ  ಬ್ಯಾಟಿಂಗ್ ಆಯ್ಕೆ- ಚಾಂಪಿಯನ್ 
2013 - ಮುಂಬೈ v ಚೆನ್ನೈ - ಮುಂಬೈ  ಬ್ಯಾಟಿಂಗ್ ಆಯ್ಕೆ- ಚಾಂಪಿಯನ್ 
2015 - ಮುಂಬೈ v ಚೆನ್ನೈ -ಮುಂಬೈ- ಬ್ಯಾಟಿಂಗ್ ಆಯ್ಕೆ- ಚಾಂಪಿಯನ್
2019 - ಮುಂಬೈ v ಚೆನ್ನೈ - ?

ಈ ಬಾರಿಯ ಫೈನಲ್ ಪಂದ್ಯದಲ್ಲೂ ಚೆನ್ನೈ ಹಾಗೂ ಮುಂಬೈ ಇದೇ ಅಂಕಿ ಅಂಶದ ಆಧಾರದ ಮೇಲೆ ಆಯ್ಕೆ ಮಾಡುತ್ತಾ? ಇಲ್ಲಾ 12ನೇ ಆವೃತ್ತಿ ಐಪಿಎಲ್ ಟೂರ್ನಿಯಲ್ಲಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ತಂಡ ಗೆಲುವಿನ ನಗೆ ಬೀರಿದೆ. ಹೀಗಾಗಿ  ಈ ಆಯ್ಕೆ ನಡೆಸುತ್ತಾ ಅನ್ನೋದು ಕುತೂಹಲ ಕೆರಳಿಸಿದೆ.

Follow Us:
Download App:
  • android
  • ios