ನವದೆಹಲಿ[ಫೆ.25]: ಭಾರತ ಕ್ರಿಕೆಟ್ ಕಂಡ ಪ್ರತಿಭಾನ್ವಿತ ಟಿ20 ಕ್ರಿಕೆಟಿಗರಲ್ಲಿ ಸುರೇಶ್ ರೈನಾ ಕೂಡಾ ಒಬ್ಬರು. ಟಿ20 ಕ್ರಿಕೆಟ್’ನಲ್ಲಿ ಮ್ಯಾಚ್ ವಿನ್ನರ್ ಎನ್ನುವ ಖ್ಯಾತಿ ಗಳಿಸಿರುವ ಉತ್ತರ ಪ್ರದೇಶದ ಎಡಗೈ ಬ್ಯಾಟ್ಸ್’ಮನ್ ರೈನಾ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ರೈನಾ ತಾವಾಡಿದ 300ನೇ ಟಿ20 ಪಂದ್ಯದಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.

ಜಾಂಟಿ ರೋಡ್ಸ್‌ಗೆ ಮೋಡಿ ಮಾಡಿದ ಆಧುನಿಕ ಕ್ರಿಕೆಟ್‌ನ ನಂ.1 ಫೀಲ್ಡರ್ ಈತ!

ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಭಾರತ ಪರ ಶತಕ ಸಿಡಿಸಿದ ಮೊದಲ ಬ್ಯಾಟ್ಸ್’ಮನ್ ಎನ್ನುವ ದಾಖಲೆ ಬರೆದಿದ್ದ ರೈನಾ, ಒಟ್ಟಾರೆ ಟಿ20 ಕ್ರಿಕೆಟ್’ನಲ್ಲಿ 300 ಸಿಕ್ಸರ್ ಸಿಡಿಸಿದ ಭಾರತದ ಎರಡನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೂ ಭಾಜನರಾಗಿದ್ದಾರೆ. ಈ ಮೊದಲು ರೋಹಿತ್ ಶರ್ಮಾ ಟಿ20 ಕ್ರಿಕೆಟ್’ನಲ್ಲಿ 300 ಸಿಕ್ಸರ್ ಸಿಡಿಸಿದ್ದರು.

ಕಾರು ಅಪಘಾತದಲ್ಲಿ ಸುರೇಶ್ ರೈನಾ ಸಾವು- ಸುಳ್ಳು ಸುದ್ದಿ ಹಬ್ಬಿದವರಿಗೆ ತಿರುಗೇಟು!

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡುತ್ತಿರುವ ರೈನಾ ಇಂದು ಪಾಂಡಿಚೆರಿ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ಕ್ರಿಕೆಟ್’ನಲ್ಲಿ 300ನೇ ಪಂದ್ಯವನ್ನಾಡಿದರು. ಈ ಮೂಲಕ ಮುನ್ನೂರು ಟಿ20 ಪಂದ್ಯಗಳನ್ನಾಡಿದ ಭಾರತದ ಎರಡನೇ ಕ್ರಿಕೆಟಿಗ ಎನ್ನುವ ದಾಖಲೆಯನ್ನು ಬರೆದರು. ಈ ಮೊದಲು ಮಹೇಂದ್ರ ಸಿಂಗ್ ಧೋನಿ 300 ಟಿ20 ಪಂದ್ಯಗಳನ್ನಾಡಿದ್ದಾರೆ. ಈ ಪಂದ್ಯದಲ್ಲಿ ರೈನಾ ಕೇವಲ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಸ್ಮರಣೀಯ ಪಂದ್ಯದಲ್ಲಿ ವಿಕೆಟ್ ಒಪ್ಪಿಸುವ ಮುನ್ನ 8000 ಸಾವಿರ ರನ್ ಪೂರೈಸಿದ ಭಾರತದ ಮೊದಲ, ಏಷ್ಯಾದ ಎರಡನೇ ಹಾಗೂ ವಿಶ್ವದ 6ನೇ ಕ್ರಿಕೆಟಿಗ ಎನ್ನುವ ಅಪರೂಪದ ದಾಖಲೆಯನ್ನು ಬರೆದರು. ರೈನಾ ಇದುವರೆಗೂ ಟಿ20 ಕ್ರಿಕೆಟ್’ನಲ್ಲಿ 4 ಶತಕ ಹಾಗೂ 48 ಅರ್ಧಶತಕ ಸಿಡಿಸಿದ್ದಾರೆ. ಭಾರತದ ಅಳಿಯ ಪಾಕಿಸ್ತಾನದ ಶೋಯೆಬ್ ಮಲಿಕ್ ಟಿ20 ಕ್ರಿಕೆಟ್’ನಲ್ಲಿ 8000+ ರನ್ ಬಾರಿಸಿದ ಏಷ್ಯಾದ ಮೊದಲ ಬ್ಯಾಟ್ಸ್’ಮನ್ ಎನಿಸಿದ್ದಾರೆ.

ಧೋನಿ ಪ್ಲೀಸ್ ನಿವೃತ್ತಿಯಾಗ್ಬಿಡಿ: ಗೋಗರೆದ ಟ್ವಿಟರಿಗರು..!

ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ದಾಖಲೆ ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಇದುವರೆಗೆ 369 ಪಂದ್ಯಗಳನ್ನಾಡಿರುವ ಗೇಲ್ 12,298 ರನ್ ಬಾರಿಸಿದ್ದಾರೆ. ಆ ಬಳಿಕ ಬ್ರೆಂಡನ್ ಮೆಕ್ಲಮ್[9922], ಕಿರಾನ್ ಪೊಲ್ಲಾರ್ಡ್[8838], ಶೋಯೆಬ್ ಮಲಿಕ್[8603] ಮತ್ತು ಡೇವಿಡ್ ವಾರ್ನ್[8111] ಮೊದಲ 5 ಸ್ಥಾನಗಳಲ್ಲಿದ್ದಾರೆ.