ಬೆಂಗಳೂರು[ಫೆ.25]: 2019ರ ಏಕದಿನ ವಿಶ್ವಕಪ್ ಟೂರ್ನಿಗೆ ಸಜ್ಜಾಗುತ್ತಿರುವ ಟೀಂ ಇಂಡಿಯಾ ವೈಜಾಗ್’ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಚಕ ಸೋಲು ಕಂಡಿತು. ಟೀಂ ಇಂಡಿಯಾ ನೀಡಿದ್ದ 127 ರನ್’ಗಳ ಸ್ಪರ್ದಾತ್ಮಕ ಗುರಿ ಬೆನ್ನತ್ತಿದ ಪ್ರವಾಸಿ ಆಸ್ಟ್ರೇಲಿಯಾ ಕೊನೆಯ ಎಸೆತದಲ್ಲಿ ರೋಚಕ ಜಯ ದಾಖಲಿಸಿತು.

ಕೊನೆಯ ಎಸೆತದಲ್ಲಿ ಆಸ್ಟ್ರೇಲಿಯಾಗೆ ರೋಚಕ ಜಯ

ಕನ್ನಡಿಗ ಕೆ.ಎಲ್ ರಾಹುಲ್[50] ಸಮಯೋಚಿತ ಅರ್ಧಶತಕ ಹಾಗೂ ಧೋನಿ[29] ಹಾಗೂ ಕೊಹ್ಲಿ[24] ಬ್ಯಾಟಿಂಗ್ ನೆರವಿನಿಂದ 126 ರನ್ ದಾಖಲಿಸಿತ್ತು. ಗುರಿ ಬೆನ್ನತಿದ ಆಸಿಸ್’ಗೆ ಬುಮ್ರಾ ಇನ್ನಿಲ್ಲದಂತೆ ಕಾಡಿದರು. ಆದರೂ ಕೊನೆಯ ಓವರ್’ನಲ್ಲಿ ಗೆಲ್ಲಲು ಆಸ್ಟ್ರೇಲಿಯಾಗೆ 14 ರನ್’ಗಳ ಅವಶ್ಯಕತೆಯಿತ್ತು. ಉಮೇಶ್ ಯಾದವ್ ಕೊನೆಯ ಓವರ್’ನಲ್ಲಿ 14 ರನ್ ಬಿಟ್ಟುಕೊಡುವ ಮೂಲಕ ಭಾರತೀಯ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

ಮತ್ತೊಮ್ಮೆ ಭಾರತೀಯರ ಮನಗೆದ್ದ ಸಚಿನ್ ತೆಂಡುಲ್ಕರ್

ಇದಕ್ಕೂ ಮೊದಲು ರಿಷಭ್ ಪಂತ್ ವಿಕೆಟ್ ಪತನದ ಬಳಿಕ ಕ್ರೀಸ್’ಗಿಳಿದ ಧೋನಿ 37 ಎಸೆತಗಳನ್ನು ಎದುರಿಸಿ 29 ರನ್ ಬಾರಿಸಿ ಅಜೇಯರಾಗುಳಿದಿದ್ದರು. ಒಂದು ಕಡೆ ನಿರಂತರ ವಿಕೆಟ್ ಬೀಳುತ್ತಿದ್ದರಿಂದ ಧೋನಿಯಿಂದ ಸ್ಫೋಟಕ ಬ್ಯಾಟಿಂಗ್ ಮೂಡಿಬರಲಿಲ್ಲ. ಧೋನಿ ಆಟ ನೋಡಿದ ಟ್ವಿಟರಿಗರು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದು, ಕ್ರಿಕೆಟ್’ಗೆ ವಿದಾಯ ಹೇಳಿ ಹಾಗೂ ವಿಶ್ವಕಪ್ ಟೂರ್ನಿಯಲ್ಲಿ ಧೋನಿಯನ್ನು ತಂಡದಿಂದ ಕೈಬಿಡಿ ಎಂದು ಕೊಹ್ಲಿಗೆ ಮನವಿ ಮಾಡಿಕೊಂಡಿದ್ದಾರೆ.

ಧೋನಿ ಬ್ಯಾಟಿಂಗ್ ಕಂಡ ಟ್ವಿಟರಿಗರು ಏನಂದ್ರು ನೀವೇ ನೋಡಿ...