ಮುಂಬೈ(ಫೆ.13): ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಫೀಲ್ಡರ್ ಅಂದ್ರೆ ತಕ್ಷಣ ನೆನಪಿಗೆ ಬರುವುದು ಒಂದೇ ಹೆಸರು ಅದು ದಕ್ಷಿಣ ಆಫ್ರಿಕಾದ ಜಾಂಟಿ ರೋಡ್ಸ್. ರೋಡ್ಸ್ ಫೀಲ್ಡಿಂಗ್ ಮೀರಿಸುವ ಫೀಲ್ಡರ್ ಸದ್ಯ ಯಾವ ತಂಡದಲ್ಲೂ ಇಲ್ಲ. ಇದೇ ಜಾಂಟಿ ರೋಡ್ಸ್ ಇದೀಗ ವಿಶ್ವದ ನಂ.1 ಫೀಲ್ಡರ್ ಹೆಸರು ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: RCB ಸಹಾಯಕ ಕೋಚ್ ಆಗಿ ಜಮ್ಮು ಕಾಶ್ಮೀರ ಮಾಜಿ ಕ್ರಿಕೆಟಿಗ ನೇಮಕ!

ಜಾಂಟಿ ರೋಡ್ಸ್ ಪ್ರಕಾರ ಆಧುನಿಕ ಕ್ರಿಕೆಟ್ ಬೆಸ್ಟ್ ಫೀಲ್ಡರ್, ಟೀಂ ಇಂಡಿಯಾದ ಸುರೇಶ್ ರೈನಾ. ಸುರೇಶ್ ರೈನಾ ಅಭಿಮಾನಿಯಾಗಿರುವ ರೋಡ್ಸ್, ಎಡಗೈ ಬ್ಯಾಟ್ಸ್‌ಮನ್ ಫೀಲ್ಡಿಂಗ್‌ಗೆ ಮಾರುಹೋಗಿದ್ದಾರೆ. ಫೀಲ್ಡಿಂಗ್ ವೇಳೆ ಚುರುಕಾಗಿರುವ ರೈನಾ ಅತ್ಯುತ್ತಮ ಫೀಲ್ಡರ್ ಎಂದು ರೋಡ್ಸ್ ಹೇಳಿದ್ದಾರೆ.

ಇದನ್ನೂ ಓದಿ: ಆಸೀಸ್‌ ವಿರುದ್ಧ ತಮಾಷೆ: ವೀರೂಗೆ ಹೇಡನ್‌ ಎಚ್ಚರಿಕೆ!

ನನ್ನ ಪ್ರಕಾರ ರೈನಾ ವಿಶ್ವದ ನಂ.1 ಫೀಲ್ಡರ್. ಭಾರತದಲ್ಲಿ ಫೀಲ್ಡಿಂಗ್ ಅಷ್ಟು ಸುಲಭವಲ್ಲ. ಮೈದಾನ ಹಾಗೂ ಕಂಡೀಷ್‌ ಗಮನದಲ್ಲಿಟ್ಟು ಫೀಲ್ಡಿಂಗ್ ಮಾಡಬೇಕು. ಆದರೆ ಸುರೇಶ್ ರೈನಾ ಯಾವುದೇ ಸಂದರ್ಭದಲ್ಲೂ ಅತ್ಯುತ್ತಮ ನಿರ್ವಹಣೆ ತೋರಿದ್ದಾರೆ ಎಂದಿದ್ದಾರೆ.  ಇನ್ನು 2ನೇ ಸ್ಥಾನವನ್ನ ಸೌತ್ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್‌ಗೆ ನೀಡಿದ್ದಾರೆ.