ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಮುದ್ದು ಮಗಳ ವಿಡಿಯೋ ವೈರಲ್ ಆಗಿದೆ. ರೋಹಿತ್ ಪತ್ನಿ ರಿತಿಕಾ ಸಾಜ್ದೆ ಪೋಸ್ಟ್ ಮಾಡಿರುವ ಈ ವಿಡಿಯೋ ಕೇವಲ 2 ಗಂಟೆಯಲ್ಲಿ 50 ಸಾವಿರಕ್ಕೂ ಹೆಚ್ಚು ಲೈಕ್ ಹಾಗೂ ಕಮೆಂಟ್ ಬಂದಿದೆ. ಇಲ್ಲಿದೆ ಈ ಕ್ಯೂಟ್ ವಿಡಿಯೋ.
ಮುಂಬೈ(ಫೆ.12): ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಪತ್ನಿ ತಮ್ಮ ಮಗಳ ವಿಡಿಯೋ ಒಂದನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಇದೀಗ ಭಾರಿ ವೈರಲ್ ಆಗಿದೆ. ಡಿಸೆಂಬರ್ 31ಕ್ಕೆ ರೋಹಿತ್ ಪತ್ನಿ ರಿತಿಕಾ ಸಾಜ್ದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಇದನ್ನೂ ಓದಿ: ವಿದರ್ಭಕ್ಕೆ ವಲಸೆ ಹೋಗಿದ್ದು ಲಾಭವಾಯಿತು: ಕನ್ನಡಿಗ ಗಣೇಶ್ ಸತೀಶ್ ಮಾತು
ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದ ರೋಹಿತ್ ಶರ್ಮಾ ಸರಣಿ ಅರ್ಧಕ್ಕೆ ಮೊಟಕುಗೊಳಿಸಿ ದಿಢೀರ್ ತವರಿಗೆ ವಾಪಾಸ್ಸಾಗಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ್ದರು. ಇದೀಗ ಇದೇ ಮೊದಲ ಬಾರಿಗೆ ಮುದ್ದು ಮಗಳ ನಗುವಿನ ವಿಡಿಯೋವೊಂದನ್ನ ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ಮೇಲೆ ಮಾರಣಾಂತಿಕ ಹಲ್ಲೆ..!
ರೋಹಿತ್ ಶರ್ಮಾ ಮಗಳಿಗೆ ಸಮೈರಾ ಎಂದು ಹೆಸರಿಟ್ಟಿದ್ದಾರೆ. ನ್ಯೂಜಿಲೆಂಡ್ ಪ್ರವಾಸ ಮುಗಿಸಿ ತವರಿಗೆ ವಾಪಾಸ್ಸಾಗಿರುವ ರೋಹಿತ್ ಶರ್ಮಾ ಸದ್ಯ ಕುಟುಂಬದ ಜೊತೆ ಕಾಲಕಳೆಯುತ್ತಿದ್ದಾರೆ. ಶೀಘ್ರದಲ್ಲೇ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿ ಆರಂಭವಾಗಲಿದೆ.
