Asianet Suvarna News Asianet Suvarna News

ನಾನೇನು ತಪ್ಪು ಮಾಡಿದೆ? ನನಗ್ಯಾಕೆ ಈ ಶಿಕ್ಷೆ? BCCIಗೆ ಯುವ ಕ್ರಿಕೆಟಿಗನ ಪ್ರಶ್ನೆ!

ಭಾರತ ಎ ತಂಡದ ಆಯ್ಕೆ ಮಾಡಿದ ಬೆನ್ನಲ್ಲೇ, ಯುವ ಕ್ರಿಕೆಟಿಗನಿಗೆ ನಿರಾಸೆಯಾಗಿದೆ. ಇದೀಗ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕ್ರಿಕೆಟಿಗ ನಾನೇನು ತಪ್ಪುಮಾಡಿದೆ ಎಂದು ಪ್ರಶ್ನಿಸಿದ್ದಾನೆ.

Cricketer Jalaj saxena tweets on omission from India A squad
Author
Bengaluru, First Published May 15, 2019, 2:04 PM IST

ಇಂದೋರ್(ಮೇ.15): ಶ್ರೀಲಂಕಾ ಎ ಹಾಗೂ ವೆಸ್ಟ್ ಇಂಡೀಸ್ ಎ ವಿರುದ್ದದ ಸರಣಿಗಾಗಿ ಭಾರತ ಎ ತಂಡ ಪ್ರಕಟಿಸಲಾಗಿದೆ. ತಂಡದ ಆಯ್ಕೆ ರಣಜಿ ಹಾಗೂ ದೇಸಿ ಟೂರ್ನಿಗಳಲ್ಲಿ ಸ್ಥಿರ ಪ್ರದರ್ಶನ ನೀಡಿದ ಆಲ್ರೌಂಡರ್ ಜಲಜ್ ಸಕ್ಸೇನಾಗೆ ಆಘಾತ ನೀಡಿದೆ.  ಅತ್ಯುತ್ತಮ ಪ್ರದರ್ಶನ ನೀಡಿದ ಜಲಜ್ ಸಕ್ಸೇನಾಗೆ ಕೊಕ್  ನೀಡಲಾಗಿದೆ. 

ಇದನ್ನೂ ಓದಿ: ವೆಸ್ಟ್ಇಂಡೀಸ್, ಶ್ರೀಲಂಕಾ ಎ ಸರಣಿಗಾಗಿ ಭಾರತ ಎ ತಂಡ ಪ್ರಕಟ!

ಬಿಸಿಸಿಐ ಭಾರತ  ಎ ತಂಡ ಪ್ರಕಟಿಸುತ್ತಿದ್ದಂತೆ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಜಲಜ್ ತೀವ್ರ ನಿರಾಸೆಯಾಗಿದೆ. ಹೀಗಾಗಿ ಟ್ವಿಟರ್ ಮೂಲಕ ನೋವು ತೋಡಿಕೊಂಡಿದ್ದಾರೆ. ನಾನೇನು ತಪ್ಪು ಮಾಡಿದೆ? ನನಗ್ಯಾಕೆ ಈ ಶಿಕ್ಷೆ? ಎಂದು ಮೊದಲು ಟ್ವೀಟ್ ಮಾಡಿದ್ದಾರೆ. 

 

 

ಇದನ್ನೂ ಓದಿ: ಧೋನಿ ವಿರುದ್ಧ ತಿರುಗಿ ಬಿದ್ರಾ ಕುಲ್ದೀಪ್ ಯಾದವ್?

ಮೊದಲ ಟ್ವೀಟ್ ಬಳಿಕ ಜಲಜ್, ತಾನು ಯಾಕೆ ಆಯ್ಕೆಯಾಗಬೇಕು ಅನ್ನೋದನ್ನೂ ಹೇಳಿದ್ದಾರೆ. ಕಳೆದ 5 ವರ್ಷಗಳಲ್ಲಿ ರಣಜಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ್ದೇನೆ. 3000ಕ್ಕೂ ಹೆಚ್ಚು ರನ್ ಸಿಡಿಸಿದ್ದೇನೆ. ದೇಸಿ ಟೂರ್ನಿಯಲ್ಲಿ ಗರಿಷ್ಠ ವಿಕೆಟ್, ಅತ್ಯುತ್ತಮ ಆಲ್ರೌಂಡರ್ ಹಾಗೂ ಶತಕ ಹಾಗೂ 8 ವಿಕೆಟ್ ಕಬಳಿಸಿದ ಮೊದಲ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದೇನೆ ಎಂದು ಟ್ವೀಟ್ ಮೂಲಕ ಹೇಳಿದ್ದಾರೆ. 

 

 

 

Follow Us:
Download App:
  • android
  • ios