ನವದೆಹಲಿ(ಮೇ.14) : ಶ್ರೀಲಂಕಾ ‘ಎ’ ವಿರುದ್ಧ 4 ದಿನಗಳ ಪಂದ್ಯಗಳ ಸರಣಿಗೆ ಭಾರತ ತಂಡ ಪ್ರಕಟಗೊಂಡಿದ್ದು, ಕರ್ನಾಟಕದ ಶ್ರೇಯಸ್‌ ಗೋಪಾಲ್‌ ಆಯ್ಕೆಯಾಗಿದ್ದಾರೆ. ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ಪಂದ್ಯಗಳು ನಡೆಯಲಿವೆ. ತಂಡವನ್ನು ಇಶಾನ್‌ ಕಿಶನ್‌ ಮುನ್ನಡೆಸಲಿದ್ದಾರೆ. ಇದೇ ವೇಳೆ 5 ಪಂದ್ಯಗಳ ಏಕದಿನ ಸರಣಿಗೂ ತಂಡವನ್ನು ಆಯ್ಕೆ ಮಾಡಲಾಗಿದ್ದು, ಕರ್ನಾಟಕದ ಯಾವೊಬ್ಬರಿಗೂ ಸ್ಥಾನ ಸಿಕ್ಕಿಲ್ಲ. 

ಇದನ್ನೂ ಓದಿ: ಧೋನಿ ವಿರುದ್ಧ ತಿರುಗಿ ಬಿದ್ರಾ ಕುಲ್ದೀಪ್ ಯಾದವ್?

ಜುಲೈನಲ್ಲಿ ಭಾರತ ‘ಎ’ ವಿಂಡೀಸ್‌ ಪ್ರವಾಸ ಕೈಗೊಳ್ಳಲಿದ್ದು, 5 ಏಕದಿನ , 3 ಟೆಸ್ಟ್‌ ಆಡಲಿದೆ. ಏಕದಿನ ತಂಡವನ್ನು ರಾಜ್ಯದ ಮನೀಶ್‌ ಪಾಂಡೆ ಮುನ್ನಡೆಸಲಿದ್ದು, ಮಯಾಂಕ್‌ ಅಗರ್‌ವಾಲ್‌ ಸ್ಥಾನ ಪಡೆದಿದ್ದಾರೆ. ಟೆಸ್ಟ್‌ ತಂಡವನ್ನು ಶ್ರೇಯಸ್‌ ಅಯ್ಯರ್‌ ಮುನ್ನಡೆಸಲಿದ್ದು, ರಾಜ್ಯದ ಕೆ.ಗೌತಮ್‌ ಸ್ಥಾನ ಪಡೆದಿದ್ದಾರೆ. ಮಯಾಂಕ್‌ 3ನೇ ಪಂದ್ಯಕ್ಕೆ ಮಾತ್ರ ಆಯ್ಕೆಯಾಗಿದ್ದಾರೆ.