ಮುಂಬೈ(ಜ.03): ಟೆಸ್ಟ್ ಕ್ರಿಕೆಟ್‍‌ನಲ್ಲಿ ಟೀಂ ಇಂಡಿಯಾ ಅಗ್ರಸ್ಥಾನ ಪಡೆದುಕೊಂಡಿದೆ. ಇದರಲ್ಲಿ ಮಾಜಿ ಕೋಚ್ ಅನಿಲ್ ಕುಂಬ್ಳೆ ಕೊಡುಗೆ ಪ್ರಮುಖವಾಗಿದೆ. ಇದೀಗ ದಿಗ್ಗಜ ಕ್ರಿಕೆಟಿಗ, ಮಾಜಿ ನಾಯಕ ಅನಿಲ್ ಕುಂಬ್ಳೆ ಭಾರತದ ಶ್ರೇಷ್ಠ ಟೆಸ್ಟ್ ತಂಡವನ್ನ ಪ್ರಕಟಿಸಿದ್ದಾರೆ.

ಇದನ್ನೂ ಓದಿ: ಸಿಡ್ನಿ ಟೆಸ್ಟ್: ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ನೀಡಿದ ಶೇನ್ ವಾರ್ನ್

1990ರ ಬಳಿಕ ಟೆಸ್ಟ್ ಆಡಿದ ಸರ್ವ ಶ್ರೇಷ್ಠ ಟೀಂ ಇಂಡಿಯಾ ಕ್ರಿಕೆಟಿಗರನ್ನ ಆಯ್ಕೆ ಮಾಡಿರುವ ಅನಿಲ್ ಕುಂಬ್ಳೆ ಬಲಿಷ್ಠ ತಂಡವನ್ನ ಪ್ರಕಟಿಸಿದ್ದಾರೆ. ಅನಿಲ್ ಕುಂಬ್ಳೆ ನಾಯಕತ್ವದ ಈ ತಂಡದಲ್ಲಿ ವಿರಾಟ್ ಕೊಹ್ಲಿ ಕೂಡ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ: ಅಫ್ರಿದಿ ವಿರುದ್ಧ ಅಚ್ಚರಿಕೆಯ ಹೇಳಿಕೆ ನೀಡಿದ ನಿಷೇಧಿತ ಕ್ರಿಕೆಟಿಗ..!

ಅನಿಲ್ ಕುಂಬ್ಳೆ ಆಯ್ಕೆ ಮಾಡಿದ ತಂಡ:
ವಿರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಕಪಿಲ್ ದೇವ್, ಎಂ.ಎಸ್.ಧೋನಿ, ಅನಿಲ್ ಕುಂಬ್ಳೆ(ನಾಯಕ), ಹರ್ಭಜನ್ ಸಿಂಗ್,  ಜಹೀರ್ ಖಾನ್, ಜಾವಗಲ್ ಶ್ರೀನಾಥ್