ಟೀಂ ಇಂಡಿಯಾ ಭರ್ಜರಿ ಆರಂಭ: ಲಾರಾ ದಾಖಲೆ ಸರಿಗಟ್ಟಿದ ’ಗಬ್ಬರ್ ಸಿಂಗ್’
ಆತಿಥೇಯರು ನೀಡಿರುವ ಸಾಧಾರಣ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಆರಂಭಿಕರು ಎಚ್ಚರಿಕೆಯ ಆಟಕ್ಕೆ ಮುಂದಾಯಿತು. ಮೊದಲ 5 ಓವರ್ ಮುಕ್ತಾಯಕ್ಕೆ 3ರ ಸರಾಸರಿಯಲ್ಲಿ ಭಾರತ ಕೇವಲ 15 ರನ್ ಗಳನ್ನಷ್ಟೇ ಬಾರಿಸಿತ್ತು.
ನೇಪಿಯರ್[ಜ.23]: ನ್ಯೂಜಿಲೆಂಡ್ ತಂಡವನ್ನು ಕೇವಲ 157 ರನ್’ಗಳಿಗೆ ಆಲೌಟ್ ಮಾಡಿರುವ ಟೀಂ ಇಂಡಿಯಾ, ಬ್ಯಾಟಿಂಗ್’ನಲ್ಲಿ ಉತ್ತಮ ಆರಂಭ ಪಡೆದಿದೆ. 9 ಓವರ್ ಮುಕ್ತಾಯದ ವೇಳೆಗೆ ಭಾರತ ವಿಕೆಟ್ ನಷ್ಟವಿಲ್ಲದೇ 41 ರನ್ ಬಾರಿಸುವ ಮೂಲಕ ಉತ್ತಮ ಆರಂಭ ಪಡೆದಿದೆ.
5000 ODI runs for @SDhawan25.
— BCCI (@BCCI) January 23, 2019
He is the second fastest Indian to achieve this feat 😎😎 pic.twitter.com/LhlKjvtBRc
ಆತಿಥೇಯರು ನೀಡಿರುವ ಸಾಧಾರಣ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಆರಂಭಿಕರು ಎಚ್ಚರಿಕೆಯ ಆಟಕ್ಕೆ ಮುಂದಾಯಿತು. ಮೊದಲ 5 ಓವರ್ ಮುಕ್ತಾಯಕ್ಕೆ 3ರ ಸರಾಸರಿಯಲ್ಲಿ ಭಾರತ ಕೇವಲ 15 ರನ್ ಗಳನ್ನಷ್ಟೇ ಬಾರಿಸಿತ್ತು. ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ಬಿಗುವಿನ ದಾಳಿ ಸಂಘಟಿಸಿದ್ದರಿಂದ ಟೀಂ ಇಂಡಿಯಾ ಓಪನರ್ಸ್ ಒಂದೊಂದು ರನ್’ಗಳಿಸಲು ಪರದಾಡಿದರು. ಕ್ರೀಸ್’ಗೆ ಹೊಂದಿಕೊಂಡ ಬಳಿಕ ರೋಹಿತ್-ಧವನ್ ಜೋಡಿ ಅನಾಯಾಸವಾಗಿ ಬ್ಯಾಟ್ ಬೀಸಲು ಆರಂಭಿಸಿದ್ದಾರೆ.
ಕುಲ್ದೀಪ್–ಶಮಿ ಮ್ಯಾಜಿಕ್: ಅಲ್ಪ ಮೊತ್ತಕ್ಕೆ ಕಿವೀಸ್ ಆಲೌಟ್
ಲಾರಾ ದಾಖಲೆ ಸರಿಗಟ್ಟಿದ ಧವನ್:
ಟೀಂ ಇಂಡಿಯಾದ ಗಬ್ಬರ್ ಸಿಂಗ್ ಖ್ಯಾತಿಯ ಆರಂಭಿಕ ಬ್ಯಾಟ್ಸ್’ಮನ್ ಶಿಖರ್ ಧವನ್ ಏಕದಿನ ಕ್ರಿಕೆಟ್’ನಲ್ಲಿ 5 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಧವನ್ 10 ರನ್ ಬಾರಿಸುತ್ತಿದ್ದಂತೆ 5 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು. ಈ ಮೂಲಕ ಅತಿವೇಗವಾಗಿ 5 ಸಾವಿರ ರನ್ ಪೂರೈಸಿದ ವಿಶ್ವದ ಮೂರನೇ ಹಾಗೂ ಭಾರತದ ಎರಡನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೆ ಧವನ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಹಾಶೀಂ ಆಮ್ಲಾ 101 ಇನ್ನಿಂಗ್ಸ್’ಗಳಲ್ಲಿ 5 ಸಾವಿರ ರನ್ ಪೂರೈಸುವ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ವೆಸ್ಟ್ ಇಂಡೀಸ್ ದಿಗ್ಗಜ ವೀವ್ ರಿಚರ್ಡ್’ಸನ್ & ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 114 ಇನ್ನಿಂಗ್ಸ್’ಗಳಲ್ಲಿ ಈ ಸಾಧನೆ ಮಾಡುವ ಮೂಲಕ ಜಂಟಿ 2ನೇ ಸ್ಥಾನ ಹಂಚಿಕೊಂಡಿದ್ದಾರೆ. ಇದೀಗ ಧವನ್ 118 ಇನ್ನಿಂಗ್ಸ್’ಗಳಲ್ಲಿ ಈ ಸಾಧನೆ ಮಾಡುವ ಮೂಲಕ ವಿಂಡೀಸ್ ದಂತಕಥೆ ಬ್ರಿಯಾನ್ ಲಾರಾ ಅವರೊಂದಿಗೆ ಜಂಟಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.
ಇದರ ಜತೆಗೆ ಏಕದಿನ ಕ್ರಿಕೆಟ್’ನಲ್ಲಿ 5 ಸಾವಿರ ರನ್ ಪೂರೈಸಿದ ಭಾರತದ 13ನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೂ ಧವನ್ ಪಾತ್ರರಾಗಿದ್ದಾರೆ. ಈ ಮೊದಲು ಮೊಹಮ್ಮದ್ ಅಜರುದ್ದೀನ್, ಅಜೇಯ್ ಜಡೇಜಾ, ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ವಿರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಎಂ.ಎಸ್ ಧೋನಿ, ಸುರೇಶ್ ರೈನಾ, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದಾರೆ.