ಲಖನೌ[ನ.06]: ವೃತ್ತಿಜೀವನದ ಅದ್ಭುತ ಫಾರ್ಮ್’ನಲ್ಲಿರುವ ರೋಹಿತ್ ಶರ್ಮಾ ವಿಂಡೀಸ್ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದು, ಇಂದು ಹಿಟ್’ಮ್ಯಾನ್, ವಿರಾಟ್ ಕೊಹ್ಲಿಯನ್ನು ಹಿಂದಿಕ್ಕುವ ಸಾಧ್ಯತೆಯಿದೆ.

ಇದನ್ನು ಓದಿ: ಇಂದೇ ದೀಪಾವಳಿ ಪಟಾಕಿ ಹಾರಿಸಲು ರೆಡಿಯಾದ ಟೀಂ ಇಂಡಿಯಾ

ಇಂದು ಭಾರತ-ವೆಸ್ಟ್ ಇಂಡೀಸ್ ತಂಡಗಳು ಚುಟುಕು ಕ್ರಿಕೆಟ್ ಟೂರ್ನಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿದ್ದು, ರೋಹಿತ್ ಶರ್ಮಾ ಇನ್ನು ಕೇವಲ 11 ರನ್ ಬಾರಿಸಿದರೇ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್’ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನ್ನುವ ಕೀರ್ತಿಗೆ ಪಾತ್ರರಾಗಲಿದ್ದಾರೆ. ವಿರಾಟ್ ಕೊಹ್ಲಿ 62 ಪಂದ್ಯಗಳಲ್ಲಿ 2102 ರನ್ ಬಾರಿಸಿದ್ದಾರೆ. ಇದೀಗ ರೋಹಿತ್ ಶರ್ಮಾ 85 ಪಂದ್ಯಗಳಲ್ಲಿ 2092 ರನ್ ಬಾರಿಸಿದ್ದು, ಇನ್ನು ಕೇವಲ 11 ಬಾರಿಸಿದರೇ ರೋಹಿತ್ ಹೊಸ ದಾಖಲೆ ಬರೆಯಲಿದ್ದಾರೆ. 2017ರಿಂದೀಚೆಗೆ ಟಿ20 ಕ್ರಿಕೆಟ್’ನಲ್ಲಿ ನ್ಯೂಜಿಲೆಂಡ್’ನ ಕಾಲಿನ್ ಮನ್ರೋ ಹಾಗೂ ರೋಹಿತ್ ಶರ್ಮಾ ಮಾತ್ರ ಎರಡಕ್ಕೂ ಹೆಚ್ಚು ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ.

ಇದನ್ನು ಓದಿ: ಇಂಡೋ-ವಿಂಡೀಸ್ ಟಿ20 ಫೈಟ್: ನಿರ್ಮಾಣವಾಗಲಿವೆ 5 ಅಪರೂಪದ ದಾಖಲೆಗಳು

ರೋಹಿತ್ ಶರ್ಮಾ 2017ರಿಂದೀಚೆಗೆ ಒಟ್ಟು 23 ಪಂದ್ಯಗಳನ್ನಾಡಿ 728 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ಪರ ಗರಿಷ್ಠ ರನ್ ಸಿಡಿಸಿದ ಸಾಧನೆ ಮಾಡಿದ್ದಾರೆ. ಟಿ20 ಕ್ರಿಕೆಟ್’ನಲ್ಲಿ ಮಾರ್ಟಿನ್ ಗಪ್ಟೀಲ್ 2271 ರನ್’ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೇ, ಶೋಯೆಬ್ ಮಲ್ಲಿಕ್ 2190 ಹಾಗೂ ಬ್ರೆಂಡನ್ ಮೆಕ್ಲಮ್ 2140 ಮೊದಲ ಮೂರು ಸ್ಥಾನದಲ್ಲಿದ್ದಾರೆ.