ಮುಂಬೈ(ಜ.24): ಟೀಂ ಇಂಡಿಯಾ ಕ್ರಿಕೆಟ್ ತಾರೆಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್ ರಾಹುಲ್ ವೃತ್ತಿ ಬದುಕಿಗೆ ಕಂಠಕವಾಗಿ ಪರಿಣಮಿಸಿದ ’ಕಾಫಿ ವಿತ್ ಕರಣ್’ ಟಿವಿ ಶೋ ಬಗ್ಗೆ ಇದೇ ಮೊದಲ ಬಾರಿಗೆ ನಿರೂಪಕ ಕರುಣ್ ಜೊಹರ್ ಮನಬಿಚ್ಚಿ ಮಾತನಾಡಿದ್ದಾರೆ.

ಕೊಹ್ಲಿ ಮಾಡಿದ್ರೆ ರೈಟ್- ಪಾಂಡ್ಯ,ರಾಹುಲ್ ರಾಂಗ್: ಬಿಸಿಸಿಐನಿಂದ ಇಬ್ಬಗೆ ನೀತಿ!

‘ಕಾಫಿ ವಿತ್ ಕರಣ್’ ಟೀವಿ ಶೋ ನಿರೂಪಕ ಹಾಗೂ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್, ವಿವಾದದಲ್ಲಿ ಸಿಲುಕಿರುವ ಕ್ರಿಕೆಟಿಗರಾದ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯಗೆ ಕ್ಷಮೆಯಾಚಿಸಿದ್ದಾರೆ. ಅಲ್ಲದೆ ಸಂಭಾಷಣೆ ವೇಳೆ ಮಹಿಳಾ ಅವಹೇಳನಕಾರಿ ಮಾತುಗಳ ಮೂಲಕ ಮಿತಿ ಮೀರಿದ್ದಕ್ಕೂ ಕ್ಷಮೆಯಾಚಿಸುತ್ತಿದ್ದೇನೆ ಎಂದು ಕರಣ್ ಹೇಳಿದ್ದಾರೆ. 

ಪಾಂಡ್ಯ, ರಾಹುಲ್‌ ಸಸ್ಪೆಂಡ್: ಸರಣಿಯಿಂದ ಗೇಟ್’ಪಾಸ್

ಈ ಪ್ರಮಾದವನ್ನು ಹೇಗೆ ಸರಿಪಡಿಸುವುದು ಎಂದು ಹಲವು ಬಾರಿ ನಿದ್ದೆಗೆಟ್ಟು ಯೋಚಿಸಿದ್ದೇನೆ. ಎಪಿಸೋಡ್‌ನಲ್ಲಿ ನಡೆದ ಸಂಭಾಷಣೆಯನ್ನು ನಾನು ಸಮರ್ಥಿಸಿಕೊಳ್ಳುತ್ತಿಲ್ಲ. ಆದರೆ ನಡೆದ ಘಟನೆಗಳು ನಾವು ಮಿತಿಮೀರಿ ಮಾತನಾಡಿದ್ದೇವೆ ಎಂಬುದನ್ನು ಮನವರಿಕೆ ಮಾಡುತ್ತವೆ. ಅದು ನನ್ನ ವೇದಿಕೆಯಲ್ಲಿಯೇ ನಡೆದಿರುವುದರಿಂದ ಕ್ಷಮೆ ಕೇಳುವುದಾಗಿ’ ಕರಣ್ ಹೇಳಿದ್ದಾರೆ.

ಪಾಂಡ್ಯ ಕಾಮೋತ್ತೇಜಕ ಹೇಳಿಕೆ: ಯಾಕಪ್ಪಾ ಅಂದೆ ಎಂದು ಕೇಳಿದ ಬಿಸಿಸಿಐ

ಕಾಫಿ ವಿತ್ ಕರುಣ್ ಕಾರ್ಯಕ್ರಮದಲ್ಲಿ ಸೆಕ್ಸಿ ಕಾಮೆಂಟ್ ಮಾಡುವ ಮೂಲಕ ಬಿಸಿಸಿಐ ಅವಕೃಪೆಗೆ ಗುರಿಯಾಗಿರುವ ಹಾರ್ದಿಕ್ ಪಾಂಡ್ಯ ಹಾಗೂ ಕೆ.ಎಲ್ ರಾಹುಲ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಹಾಗೂ ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್’ಗಳ ಸರಣಿಯಿಂದ ಹೊರದಬ್ಬಲಾಗಿದೆ.