MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಸ್ಮೃತಿ ಮಂಧನಾನ ಮಾಜಿ ಲವರ್ ಪಲಾಶ್ ಮುಚ್ಚಲ್‌ಗೆ ಬಿಗ್ ರಿಲೀಫ್! ಸ್ಮೃತಿ ಫ್ರೆಂಡ್‌ಗೆ ಹೈಕೋರ್ಟ್ ಖಡಕ್ ವಾರ್ನಿಂಗ್!

ಸ್ಮೃತಿ ಮಂಧನಾನ ಮಾಜಿ ಲವರ್ ಪಲಾಶ್ ಮುಚ್ಚಲ್‌ಗೆ ಬಿಗ್ ರಿಲೀಫ್! ಸ್ಮೃತಿ ಫ್ರೆಂಡ್‌ಗೆ ಹೈಕೋರ್ಟ್ ಖಡಕ್ ವಾರ್ನಿಂಗ್!

ಪಲಾಶ್ ಮುಚ್ಚಲ್ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ನೀಡದಂತೆ ವಿದ್ಯಾನ್ ಮಾನೆಗೆ ಬಾಂಬೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದಕ್ಕೂ ಮುನ್ನ, ಪಲಾಶ್ ತಮ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿದ ಸ್ಮೃತಿ ಫ್ರೆಂಡ್ ವಿದ್ಯಾನ್ ಮಾನೆ ವಿರುದ್ದ 11 ಕೋಟಿ ರೂಪಾಯಿ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. 

2 Min read
Author : Naveen Kodase
Published : Feb 14 2026, 05:54 AM IST
Share this Photo Gallery
  • FB
  • TW
  • Linkdin
  • Whatsapp
16
ವಿದ್ಯಾನ್ ಮಾನೆ ವಿರುದ್ಧ ಮಾನನಷ್ಟ ಮೊಕದ್ದಮೆ
Image Credit : google

ವಿದ್ಯಾನ್ ಮಾನೆ ವಿರುದ್ಧ ಮಾನನಷ್ಟ ಮೊಕದ್ದಮೆ

ಭಾರತೀಯ ಕ್ರಿಕೆಟರ್ ಸ್ಮೃತಿ ಮಂಧನಾ ಅವರ ಆಪ್ತ ಸ್ನೇಹಿತ ಎಂದು ಹೇಳಿಕೊಳ್ಳುವ ವಿದ್ಯಾನ್ ಮಾನೆ ವಿರುದ್ಧ ಪಲಾಶ್ ಮುಚ್ಚಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೀಗ ಬಾಂಬೆ ಹೈಕೋರ್ಟ್‌ನಿಂದ ಪಲಾಶ್‌ಗೆ ಮಧ್ಯಂತರ ರಿಲೀಫ್ ಸಿಕ್ಕಿದೆ. ವಿದ್ಯಾನ್ ಮಾನೆ ಅವರು ಪಲಾಶ್ ವಿರುದ್ಧ ಯಾವುದೇ ರೀತಿಯ ಹೇಳಿಕೆಗಳನ್ನು ನೀಡದಂತೆ ಅಥವಾ ಪ್ರಕಟಿಸದಂತೆ ಕೋರ್ಟ್ ತಕ್ಷಣವೇ ತಡೆಯಾಜ್ಞೆ ನೀಡಿದೆ.

26
ಪಲಾಶ್ ಮುಚ್ಚಲ್ ವಿರುದ್ದ ಗಂಭೀರ ಆರೋಪ ಮಾಡಿದ್ದ ಮಾನೆ
Image Credit : Google

ಪಲಾಶ್ ಮುಚ್ಚಲ್ ವಿರುದ್ದ ಗಂಭೀರ ಆರೋಪ ಮಾಡಿದ್ದ ಮಾನೆ

ವಿದ್ಯಾನ್ ಮಾನೆ ಅವರು ಮಾಧ್ಯಮ ಸಂದರ್ಶನಗಳಲ್ಲಿ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಪಲಾಶ್ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಈ ಆದೇಶ ನೀಡಿದೆ. ಪಲಾಶ್ ಮುಚ್ಚಲ್ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ವಿದ್ಯಾನ್ ಮಾನೆ ತನ್ನನ್ನು ಸ್ಮೃತಿ ಮಂಧನಾ ಅವರ ಆಪ್ತ ಎಂದು ಹೇಳಿಕೊಂಡಿದ್ದಾರೆ.

Related Articles

Related image1
WPL 2026: ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಮತ್ತೊಮ್ಮೆ ಚಾಂಪಿಯನ್; ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಲ್ಕನೇ ಬಾರಿ ಹಾರ್ಟ್‌ ಬ್ರೇಕ್!
Related image2
ಮೈ ಸುಡುವ ಜ್ವರದ ನಡುವೆಯೂ ಆರ್‌ಸಿಬಿಗೆ ಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಸ್ಮೃತಿ ಮಂಧನಾ! ಬ್ರೇಕ್‌ಅಪ್ ನೋವು ಮರೆಸಿದ ಫೈನಲ್ ಗೆಲುವು
36
ಪಲಾಶ್ ಪರ ವಕೀಲರ ಹೇಳಿಕೆ
Image Credit : insta

ಪಲಾಶ್ ಪರ ವಕೀಲರ ಹೇಳಿಕೆ

'ವಿದ್ಯಾನ್ ಮಾನೆಗೆ ಯಾವುದೇ ಹೇಳಿಕೆ ನೀಡದಂತೆ ಕೋರ್ಟ್ ನೀಡಿರುವ ತಡೆಯಾಜ್ಞೆ ಪಲಾಶ್‌ಗೆ ದೊಡ್ಡ ರಿಲೀಫ್ ಆಗಿದೆ. ಸುಳ್ಳು ಆರೋಪಗಳಿಗೆ ನ್ಯಾಯಾಲಯ ತಕ್ಷಣವೇ ತಡೆ ನೀಡಿದೆ. ಯಾರಾದರೂ ಆರೋಪ ಮಾಡಿದರೆ, ಅದಕ್ಕೆ ಸಾಕ್ಷ್ಯ ಇರಬೇಕು. ಸದ್ಯಕ್ಕೆ ಪಲಾಶ್ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ' ಎಂದು ಸಂಗೀತ ನಿರ್ದೇಶಕ ಪಲಾಶ್ ಅವರ ಪರ ವಕೀಲ ಶ್ರೇಯಾಂಶ್ ಮಿಥಾರೆ ಹೇಳಿದ್ದಾರೆ.

46
ಮಾಧ್ಯಮಗಳ ಗಮನ ಸೆಳೆಯಲು ಈ ರೀತಿಯ ಹೇಳಿಕೆ
Image Credit : Smriti Mandhana

ಮಾಧ್ಯಮಗಳ ಗಮನ ಸೆಳೆಯಲು ಈ ರೀತಿಯ ಹೇಳಿಕೆ

ಈ ಆರೋಪಗಳೆಲ್ಲಾ ಆಧಾರರಹಿತವಾಗಿದ್ದು, ಕೇವಲ ಮಾಧ್ಯಮದ ಗಮನ ಸೆಳೆಯಲು ಮಾಡಲಾಗಿದೆ ಎಂದು ಶ್ರೇಯಾಂಶ್ ಹೇಳಿದ್ದಾರೆ. 'ಪಲಾಶ್ ಸಂಪೂರ್ಣವಾಗಿ ನಿರಪರಾಧಿ. ಈ ಆರೋಪಗಳನ್ನು ಕೇವಲ ಪ್ರಚಾರಕ್ಕಾಗಿ ಹರಡಲಾಗುತ್ತಿದೆ' ಎಂದು ಪಲಾಶ್ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ.

56
ಸ್ಮೃತಿ-ಪಲಾಶ್ ಮದುವೆ ದಿಢೀರ್ ಮುಂದೂಡಿಕೆ
Image Credit : Instagram/smriti_jemi_lover

ಸ್ಮೃತಿ-ಪಲಾಶ್ ಮದುವೆ ದಿಢೀರ್ ಮುಂದೂಡಿಕೆ

ಪಲಾಶ್ ಮತ್ತು ಸ್ಮೃತಿ ಮಂಧಾನಾ ಅವರ ಮದುವೆ ದಿನಾಂಕ ನಿಗದಿಯಾಗಿತ್ತು ಎನ್ನಲಾಗಿತ್ತು. ಹಲವು ಕಾರ್ಯಕ್ರಮಗಳು ಕೂಡ ನಡೆದಿದ್ದವು. ಆದರೆ, ಇದ್ದಕ್ಕಿದ್ದಂತೆ ಈ ಮದುವೆಯನ್ನು ಮುಂದೂಡಲಾಯಿತು. ಪಲಾಶ್ ಮತ್ತೊಬ್ಬ ಮಹಿಳೆಯೊಂದಿಗೆ ನಡೆಸಿದ ಚಾಟಿಂಗ್ ಇದಕ್ಕೆ ಕಾರಣ ಎಂದು ಹೇಳಲಾಗಿತ್ತು. ಆದರೆ, ಈ ಬಗ್ಗೆ ಸ್ಮೃತಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

66
ಪಲಾಶ್ ಮೇಲೆ ಗಂಭೀರ ಆರೋಪ
Image Credit : Instagram

ಪಲಾಶ್ ಮೇಲೆ ಗಂಭೀರ ಆರೋಪ

ಇದಷ್ಟೇ ಅಲ್ಲದೇ ಪಲಾಶ್ ಮದುವೆಯ ಹಿಂದಿನ ದಿನ ಬೇರೆ ಯುವತಿಯ ಜತೆ ರೊಮ್ಯಾನ್ಸ್ ಮಾಡುತ್ತಿದ್ದಾಗ, ಭಾರತೀಯ ಆಟಗಾರ್ತಿಯರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು, ಅವರಿಂದ ಪೆಟ್ಟು ತಿಂದಿದ್ದರು ಎಂದು ವಿದ್ಯಾನ್ ಮಾನೆ ಗಂಭೀರ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಸ್ಮೃತಿ ಹಾಗೂ ಪಲಾಶ್ ಮದುವೆ ಮುರಿದು ಬಿದ್ದಿತ್ತು. ಇನ್ನು ಮಾನೆ ಎದುರು ಪಲಾಶ್ ಕೋರ್ಟ್ ಮೆಟ್ಟಿಲೇರಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಸ್ಮೃತಿ ಮಂಧನ
ಪ್ರೀತಿ
ಹೈಕೋರ್ಟ್

Latest Videos
Recommended Stories
Recommended image1
ವಿಶ್ವಕಪ್‌ಗೆ ಮಾಡಿದ ಅವಮಾನ ಆಸ್ಟ್ರೇಲಿಯಾಕ್ಕೆ ಶಾಪವಾಯ್ತಾ? ಟ್ರೋಫಿ ಮೇಲೆ ಕಾಲಿಟ್ಟಿದ್ದ ತಂಡಕ್ಕೆ ಇಂದು ಜಿಂಬಾಬ್ವೆ ಎದುರೂ ಸೋಲು!
Recommended image2
ವರುಣ್ ಚಕ್ರವರ್ತಿ ಪತ್ನಿ ನೇಹಾ ಖೇಡೇಕರ್ ಯಾರು? ಇಲ್ಲಿದೆ ಈ ಜೋಡಿಯ ಮುದ್ದಾದ ಲವ್ ಸ್ಟೋರಿ
Recommended image3
IPL 2026: ರಾಜಸ್ಥಾನ ರಾಯಲ್ಸ್‌ಗೆ ಅಚ್ಚರಿ ನಾಯಕನ ನೇಮಕ; ರವೀಂದ್ರ ಜಡೇಜಾಗೆ ಭಾರೀ ನಿರಾಸೆ
Related Stories
Recommended image1
WPL 2026: ಸ್ಮೃತಿ ಮಂಧನಾ ನೇತೃತ್ವದ ಆರ್‌ಸಿಬಿ ಮತ್ತೊಮ್ಮೆ ಚಾಂಪಿಯನ್; ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಲ್ಕನೇ ಬಾರಿ ಹಾರ್ಟ್‌ ಬ್ರೇಕ್!
Recommended image2
ಮೈ ಸುಡುವ ಜ್ವರದ ನಡುವೆಯೂ ಆರ್‌ಸಿಬಿಗೆ ಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ಸ್ಮೃತಿ ಮಂಧನಾ! ಬ್ರೇಕ್‌ಅಪ್ ನೋವು ಮರೆಸಿದ ಫೈನಲ್ ಗೆಲುವು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved