ಮುಂಬೈ(ಡಿ.27): ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ 53ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಬ್ಲಾಕ್ ಬಸ್ಟರ್ ಮೂವಿಗಳನ್ನ ನೀಡಿ ಭಾರತದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಜನಪ್ರಿಯರಾಗಿರುವ ಸಲ್ಮಾನ್ ಖಾನ್‍‌‌ಗೆ ಬಾಲಿವುಡ್ ದಿಗ್ಗಜರು, ಟೀಂ ಇಂಡಿಯಾ ಕ್ರಿಕೆಟಿಗರು ಸೇರಿದಂತೆ ಹಲವರು ಶುಭಕೋರಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಅಬ್ಬರಿಸಿದ ಮಯಾಂಕ್‌ಗೆ ಕಿಚ್ಚ ಸುದೀಪ್ ಟ್ವೀಟ್!

27 ಡಿಸೆಂಬರ್, 1965ರಲ್ಲಿ ಹುಟ್ಟಿದ ಸಲ್ಮಾನ್ ಖಾನ್, 1988ರಲ್ಲಿ ಬಾಲಿವುಡ್ ಸಿನಿ ರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಸಲ್ಮಾನ್ ಭಾರತದ ಶ್ರೇಷ್ಠ ನಟನಾಗಿ ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. 53ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಸಲ್ಮಾನ್‌ಗೆ ಕ್ರಿಕೆಟಿಗರು ಟ್ವಿಟರ್ ಮೂಲಕ ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: ಮೆಲ್ಬರ್ನ್‌ನಲ್ಲಿ ಮಯಾಂಕ್ ಅಬ್ಬರ-ಕೆಎಲ್ ರಾಹುಲ್ ಟ್ವೀಟ್ ಮೂಲಕ ಹೇಳಿದ್ದೇನು?