ವಯಸ್ಸು ಕೇವಲ 7, ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದಲ್ಲಿ ಸ್ಥಾನಗಿಟ್ಟಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಇಷ್ಟೇ ಅಲ್ಲ ಈ ಲೆಗ್ ಸ್ಪಿನ್ನರ್ ಭಾರತ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನ ಔಟ್ ಮಾಡಲು ತುದಿಗಾಲಲ್ಲಿ ನಿಂತಿದ್ದಾನೆ. ಇಲ್ಲಿದೆ ಈ ರೋಚಕ ಸ್ಟೋರಿ.
ಮೆಲ್ಬೋರ್ನ್(ಡಿ.23): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್ ಪಂದ್ಯಕ್ಕೆ ಮೆಲ್ಬೋರ್ನ್ ಕ್ರೀಡಾಂಗಣ ಸಜ್ಜಾಗಿದೆ. ಉಭಯ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿಸಿಕೊಂಡಿದೆ. ಭಾರತ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾ 7 ವರ್ಷ ಆರ್ಚಿ ಶಿಲ್ಲರನ್ನ ತಂಡಕ್ಕೇ ಸೇರಿಸಿಕೊಂಡಿದೆ.
ಇದನ್ನೂ ಓದಿ: 170ಕೀ.ಮಿ ವೇಗದಲ್ಲಿ ಅಪಘಾತ-ಪವಾಡ ಸದೃಶ್ಯ ಬದುಕುಳಿದ F3 ಚಾಲಕಿ!
ಭಾರತ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ಶಿಲ್ಲರ್ ಆಡುವುದಾಗಿ ನಾಯಕ ಟಿಮ್ ಪೈನೆ ಖಚಿಪಡಿಸಿದ್ದಾರೆ. ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿರೋ ವಿಚಾರವನ್ನ ಕೋಚ್ ಜಸ್ಟಿನ್ ಲ್ಯಾಂಗರ್ ಫೋನ್ ಮೂಲಕ ಶಿಲ್ಲರ್‌ಗೆ ತಿಳಿಸಿದ್ದರು. ಪಾಕಿಸ್ತಾನ ವಿರುದ್ಧದ ಸರಣಿ ವೇಳೆಯೇ ಶಿಲ್ಲರ್‌ನ್ನ ತಂಡಕ್ಕೆ ಸೇರಿಸಿಕೊಳ್ಳೋ ಕುರಿತು ಚರ್ಚಿಸಲಾಗಿತ್ತು.
ಆಸಿಸ್ ತಂಡ ಸೇರಿಕೊಂಡಿರುವ ಶಿಲ್ಲರ ಸಂತಸ ಇಮ್ಮಡಿಗೊಂಡಿದೆ. ಈಗಾಗಲೇ ಆಸಿಸ್ ತಂಡ ಸೇರಿಕೊಂಡಿರುವ ಶಿಲ್ಲರ್ ಅಭ್ಯಾಸ ಕೂಡ ಆರಂಭಿಸಿದ್ದಾನೆ. ಇಷ್ಟೇ ಅಲ್ಲ ಭಾರತ ಹಾಗೂ ಆಸಿಸ್ ಜಂಟಿ ಸುದ್ದಿಗೋಷ್ಠಿಯಲ್ಲೂ ಶಿಲ್ಲರ್ ಪಾಲ್ಗೊಂಡಿದ್ದಾನೆ. ಲೆಗ್ ಸ್ಪಿನ್ನರ್ ಆಗಿರುವ ಶಿಲ್ಲರ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನ ಔಟ್ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಪತ್ನಿ ನಟನೆ ಹೊಗಳಿದ ವಿರಾಟ್ ಕೊಹ್ಲಿ ಫುಲ್ ಟ್ರೋಲ್!
ಅಷ್ಟಕ್ಕೂ ಶಿಲ್ಲರ್‌ನ್ನ ತಂಡಕ್ಕೆ ಸೇರಿಸಿಕೊಂಡಿರುವ ಹಿಂದೆ ಮನಮಿಡಿಯುವ ಕತೆಯಿದೆ. ಆರ್ಚಿ ಶಿಲ್ಲರ್‌ಗೆ ಈಗ 7 ವರ್ಷ ವಯಸ್ಸು. ಆದರೆ ಹೃದಯ ಸಂಬಂಧಿಸಿದ ಬಹುತೇಕ ಸರ್ಜರಿಗಳನ್ನ ಈಗಾಗಲೇ ಮಾಡಲಾಗಿದೆ. 3 ತಿಂಗಳ ಮಗುವಾಗಿದ್ದಾಗೇ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಾಯಿತು. ಇನ್ನು 6 ತಿಂಗಳಿಗೆ ಎರಡನೇ ಬಾರಿಗೆ ಹೃದಯ ಶಸ್ತ್ರಿ ಚಿಕಿತ್ಸೆ ಮಾಡಲಾಗಿದೆ.
ಕಳೆದ ವರ್ಷ ಮತ್ತೆ ಅಸ್ವಸ್ಥನಾದ ಶಿಲ್ಲರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೇಳೆ 3ನೇ ಬಾರಿಗೆ ಒಪನ್ ಹಾರ್ಟ್ ಸರ್ಜರಿ ಮಾಡಲಾಗಿತ್ತು. ಹೀಗಾಗಿ ವಿಶೇಷ ಬಾಲಕನಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಸ್ಥಾನ ನೀಡಿದೆ. ಹೀಗಾಗಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಈ ಹಿಂದಿನ ಎಲ್ಲಾ ಪಂದ್ಯಗಳಿಂದ ವಿಶೇಷವಾಗಿರಲಿದೆ.
