ಮೆಲ್ಬೋರ್ನ್(ಡಿ.23): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕುರಿತು ಟ್ವೀಟ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಆದರೆ ಹೆಚ್ಚು ಬಾರಿ ಪತ್ನಿ ಕುರಿತು ಟ್ವೀಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ. ಇದೀಗ ಅನುಷ್ಕಾ ಶರ್ಮಾ, ನಟ ಶಾರುಖ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಅಭಿನಯದ ಝೀರೋ ಚಿತ್ರ ವೀಕ್ಷಿಸಿ ಟ್ವೀಟ್ ಮಾಡಿದ್ದಾರೆ. ಇದೂ ಕೂಡ ಟ್ರೋಲ್ ಆಗಿದೆ.

ಇದನ್ನೂ ಓದಿ: ಕನ್ನಡಿಗ ಮಯಾಂಕ್ ಬಳಿಕ ಟೀಂ ಇಂಡಿಯಾಗೆ ಮತ್ತೊಬ್ಬ ಆರಂಭಿಕ ಎಂಟ್ರಿ!

ಝೀರೋ ಚಿತ್ರ ವೀಕ್ಷಿಸಿದೆ. ಅತ್ಯುತ್ತಮ ಮನೋರಂಜನಾ ಚಿತ್ರ. ಹೀಗಾಗಿ ನಾನು ತುಂಬಾ ಖುಷಿ ಪಟ್ಟೆ. ಎಲ್ಲರೂ ತುಂಬಾ ಚೆನ್ನಾಗಿ ತಮ್ಮ ಪಾತ್ರವನ್ನ ನಿರ್ವಹಿಸಿದ್ದಾರೆ. ಆದರಲ್ಲೂ ಅನುಷ್ಕಾ ಶರ್ಮಾ ಪಾತ್ರ ನಿಜಕ್ಕೂ ಸವಾಲಾಗಿತ್ತು. ಆದರೆ ಅತ್ಯುತ್ತಮವಾಗಿ ನಿರ್ವಹಿಸಿದ್ದಾಳೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ. 

 

 

ಇದನ್ನೂ ಓದಿ: ಮೆಲ್ಬೋರ್ನ್ ಟೆಸ್ಟ್: ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ಸೈನ್ಯಕ್ಕೆ ಹಿನ್ನಡೆ!

ಕೊಹ್ಲಿ ಟ್ವೀಟ್ ಮಾಡಿದ್ದೇ ತಡ, ಚಿತ್ರ ವೀಕ್ಷಿಸಿದ ಅಭಿಮಾನಿಗಳು ಅನುಷ್ಕಾ ನಟನೆ ಉತ್ತಮವಾಗಿದೆ ಆದರೆ ಚಿತ್ರ ನೋಡುವ ಹಾಗಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇಲ್ಲಿದೆ ಕೊಹ್ಲಿ ಟ್ವೀಟ್‌ಗೆ ಅಭಿಮಾನಿಗಳ ಪ್ರತಿಕ್ರಿಯೆ.
ಇದನ್ನೂ ಓದಿ:ಐಪಿಎಲ್ ಹರಾಜು: ಕನ್ನಡದ ವೇಗಿಗಳಿಗಿಲ್ಲ ಕಿಮ್ಮತ್ತು..!

 

 

 

 

 

;