18 ವರ್ಷದ ಮಹಿಳಾ ರೇಸರ್ ಸೋಫಿಯಾ ಕಳೆದ ನವೆಂಬರ್‌ನಲ್ಲಿ ಭೀಕರ ಅಪಘಾತಕ್ಕೆ ತುತ್ತಾಗಿದ್ದರು. ರೇಸ್‌ ವೇಳೆ ಸಂಭವಿಸಿದ ಅಪಘಾತ ಬೆಚ್ಚಿಬೀಳಿಸುವಂತಿದೆ. ಇಲ್ಲಿದೆ ಇದರ ವೀಡಿಯೋ. 

ಜರ್ಮನಿ(ಡಿ.23): ವಯಸ್ಸು ಕೇವಲ 18, ಸಾಧನೆ ಬೆಟ್ಟದಷ್ಟು. ಇದು ಜರ್ಮನಿ ಮೂಲದ F3 ಮಹಿಳಾ ರೇಸರ್ ಸೋಫಿಯಾ ಫ್ಲಾರ್ಶ್ ಸಾಧನೆ. F3 ರೇಸ್‌ನಲ್ಲಿ ವಿಶ್ವದಲ್ಲೇ ಸದ್ದು ಮಾಡುತ್ತಿದ್ದಾಳೆ. ಆದರೆ 2018ರ ನವೆಂಬರ್‌ನಲ್ಲಿ ನಡೆದ ಅಪಘಾತದಿಂದ ಚೇತರಿಸಿಕೊಂಡಿರುವ ಸೊಫಿಯಾ ಇದೀಗ ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾಳೆ.

ಇದನ್ನೂ ಓದಿ: ಪತ್ನಿ ನಟನೆ ಹೊಗಳಿದ ವಿರಾಟ್ ಕೊಹ್ಲಿ ಫುಲ್ ಟ್ರೋಲ್!

2018 ಮಾಕ್ಯೂ ಗ್ರ್ಯಾನ್ ಪ್ರಿಕ್ಸ್ F3 ರೇಸ್‌ನಲ್ಲಿ ಸೋಫಿಯಾ ಭೀಕರ ಅಪಘಾತಕ್ಕೆ ತುತ್ತಾಗಿದ್ದರು. ಬರೋಬ್ಬರಿ 170 ಕೀ.ಮಿ ವೇಗದಲ್ಲಿ ನಡೆದ ಅಪಘಾತದಲ್ಲಿ ಕಾರು ಛಿದ್ರ ಛಿದ್ರವಾಗಿತ್ತು. ತಿರುವಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರು ನೇರವಾಗಿ ವೀಕ್ಷಕರಿಗಾಗಿ ಹಾಕಿದ್ದ ಶೀಟ್ ಮೇಲೆ ಡಿಕ್ಕಿಯಾಗಿ ಬಿದ್ದಿತ್ತು. ಈ ಅಪಘಾತದಲ್ಲಿ ನಾನು ಬದುಕಿದ್ದೇ ಪವಾಡ ಸದೃಶ್ಯ ಎಂದು ಸೋಫಿಯಾ ಹೇಳಿದ್ದಾರೆ.

Scroll to load tweet…

ಹಲವು ಮೂಳೆಗಳು ಮುರಿದಿದೆ. ಆದರೆ ನಾನು ರೇಸ್‌ನಿಂದ ಹಿಂದೆ ಸರಿಯುವುದಿಲ್ಲ ಎಂದು ಸೋಫಿಯಾ ಹೇಳಿದ್ದಾರೆ. ಸದ್ಯ ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಭೀಕರ ಅಪಘಾತ ಇನ್ನೂ ನನ್ನ ಕಣ್ಣ ಮುಂದಿದೆ. ಮುಂದಿನ ದಿನಗಳಲ್ಲಿ ನನಗಿದು ಎಚ್ಚರಿಕೆ ಗಂಟೆ ಎಂದು ಸೋಫಿಯಾ ಹೇಳಿದ್ದಾರೆ.

Scroll to load tweet…